Hrithik Roshan: ಕೇವಲ ಐದೇ ವಾರದಲ್ಲಿ ಸಿಕ್ಸ್ ಪ್ಯಾಕ್, ಗರ್ಲ್‌ಫ್ರೆಂಡ್‌ಗೆ ಧನ್ಯವಾದ ಹೇಳಿದ ಹೃತಿಕ್ ರೋಷನ್!
ಬಾಲಿವುಡ್ ನಟ ಹೃತಿಕ್ ರೋಷನ್ ಫಿಟ್ನೆಸ್ ಫ್ರೀಕ್ ಕೂಡ ಹೌದು. ತಮ್ಮ ದೇಹವನ್ನು ದಂಡಿಸುವುದನ್ನು ಹೃತಿಕ್ ರೋಷನ್ ಅವರನ್ನು ನೋಡಿ ಕಲಿಯಬೇಕಿದೆ. ತಮ್ಮ ಮುಂದಿನ ಸಿನಿಮಾ ಫೈಟರ್'ಗಾಗಿ ಸಜ್ಜಾಗುತ್ತಿರುವ ನಟ, ತಮ್ಮ ಫಿಟ್ನೆಸ್ ಜರ್ನಿಯ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಹೌದು, ನಟ ಹೃತಿಕ್ ರೋಷನ್ ಮಂಗಳವಾರ (ಅಕ್ಟೋಬರ್ 17) ರಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕೆಲವು ತಿಂಗಳಲ್ಲಿ ಅವರು ಹೇಗೆ ತಮ್ಮ ದೇಹವನ್ನು ದಂಡಿಸಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ಜೊತೆಗೆ ಈ ಜರ್ನಿಯ ಬಗ್ಗೆ ದೀರ್ಘವಾದ ಟಿಪ್ಪಣಿ ಕೂಡ ಬರೆದಿದ್ದಾರೆ. ಇದಲ್ಲದೆ ತಮ್ಮ ಗರ್ಲ್‌ಫ್ರೆಂಡ್ ಸಬಾ ಆಜಾದ್‌ಗೆ ಧನ್ಯವಾದ ಹೇಳಿದ್ದಾರೆ.

ಹೃತಿಕ್ ರೋಷನ್ ಅವರ ದಂಗುಬಡಿಯುವ ರೂಪಾಂತರ!
ಬಾಲಿವುಡ್‌ನ ಅತ್ಯಂತ ಹ್ಯಾಂಡ್‌ಸಮ್ ನಟರಲ್ಲಿ ಒಬ್ಬರಾದ ಹೃತಿಕ್ ರೋಷನ್‌ಗೆ ಅನೇಕ ಅಭಿಮಾನಿಗಳಿದ್ದಾರೆ. ತಮ್ಮ ಮುಂಬರುವ ಚಿತ್ರ 'ಫೈಟರ್'ಗಾಗಿ ರೆಡಿಯಾಗುತ್ತಿರುವ ಹೃತಿಕ್ ರೋಷನ್, ಕ್ರಿಸ್ ಗೆಥಿನ್ ಅವರ ಮಾರ್ಗದರ್ಶನ ಮತ್ತು ತರಬೇತಿಯಲ್ಲಿ ಹೇಗೆ ಬದಲಾದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಈ ಸಕತ್ ಸಿಕ್ಸ್ ಪ್ಯಾಕ್ ಮಾಡಿದ ತನ್ನ ಹಿಂದೆ ಇದ್ದ ಪ್ರೇರಣೆ ಮತ್ತು ಕಠಿಣ ಪರಿಶ್ರಮವನ್ನು ಹಂಚಿಕೊಂಡಿದ್ದು, ಎಲ್ಲರಿಗೂ ಥ್ಯಾಂಕ್ಯೂ ಹೇಳಿದ್ದಾರೆ.
ತಮ್ಮ ದೇಹದ ಬದಲಾವಣೆ ಸೂಚಿಸುವ ಚಿತ್ರಗಳ ಹೋಲಿಕೆಯನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರದ ಕೊಲಾಜ್‌ನಲ್ಲಿ, ಹೃತಿಕ್ ಆಗಸ್ಟ್ 31 ಮತ್ತು ಅಕ್ಟೋಬರ್ 7 ರ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಆಗಿರುವ ಭಾರೀ ಬದಲಾವನೆಯನ್ನು ಆರಾಮಾವಾಗಿ ಗುರುತಿಸಬಹುದು.
ಇನ್ನೊಂದು ಕೊಲಾಜ್ ಆಗಸ್ಟ್ 28 ರಂದು ಇದ್ದ ನಟ ಹೃತಿಕ್ ರೋಷನ್ ಮತ್ತು ಅಕ್ಟೋಬರ್ 7 ರ ಹೃತಿಕ್. ಕೊನೆಯ ಫೋಟೋ ಆಗಸ್ಟ್ 25 ರಂದು ಮತ್ತು ಅಕ್ಟೋಬರ್ 4 ರಂದು ತೆಗೆದುಕೊಂಡಿರುವ ಫೋಟೋಗಳು. ಈ ಕೋಲಾಜ್ ಫೋಟೋಗಳ ಜೊತೆಗೆ ಅವರ ಟ್ರೈನರ್ ಕಳುಹಿಸಿದ ಮೂರು ಆಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಕಠಿಣ ಫಿಟ್ನೆಸ್ ಜರ್ನಿ ಬಗ್ಗೆ ಹೃತಿಕ್ ಹೇಳಿದ್ದು ಹೀಗೆ
"5 ವಾರಗಳು.... ರಜೆಯ ನಂತರ ಮತ್ತು ಚಿತ್ರೀಕರಣದ ನಂತರ.... ಗುರಿ ಸಾಧಿಸಲಾಗಿದೆ.... ಮೊಣಕಾಲುಗಳು, ಬೆನ್ನು, ಮಂಡಿ, ಭುಜಗಳು ಮತ್ತು ಬೆನ್ನುಮೂಳೆ ಮತ್ತು ನನ್ನ ಮನಸ್ಸಿಗೆ ಧನ್ಯವಾದ. ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. ಈಗ ವಿಶ್ರಾಂತಿ ಮತ್ತು ಚೇತರಿಸಿಕೊಳ್ಳುವ ಸಮಯ" ಎಂದು ಬರೆದುಕೊಂಡಿದ್ದಾರೆ.
ಈ ಜರ್ನಿಯ ಕಠಿಣ ಸಮಯದ ಬಗ್ಗೆ ಬರೆದಿರುವ ಅವರು, "ಕಠಿಣವಾದ ಭಾಗವೆಂದರೆ.. ಇತರ ಪ್ರಮುಖ ವಿಷಯಗಳು ಅಂದರೆ, ಪ್ರೀತಿಪಾತ್ರರು, ಸ್ನೇಹಿತರು, ಸಾಮಾಜಿಕ ಸಂದರ್ಭಗಳು, ಶಾಲೆಯ ಪಿಟಿಎಂ ಮತ್ತು ಕೆಲಸದ ಸಮಯವನ್ನು ವಿಸ್ತರಿಸುವುದಕ್ಕೆ ಇಲ್ಲ ಎಂದು ಹೇಳುವುದು. ಎರಡನೇ ಕಷ್ಟದ ಕೆಲಸವೆಂದರೇ ರಾತ್ರಿ 9 ಗಂಟೆಗೆ ಮಲಗುವುದು" ಎಂದು ಹೇಳಿದ್ದಾರೆ.
ಸ್ನೇಹಿತೆ ಸಬಾ ಆಜಾದ್‌ಗೆ ಧನ್ಯವಾದ ಹೇಳಿರುವ ಅವರು, "ಈ ಪ್ರಕ್ರಿಯೆಯಲ್ಲಿ ಸುಲಭವಾದ ಭಾಗ ಎಂದರೆ ಆಲೋಚನೆ ಮತ್ತು ಕ್ರಿಯೆಯಲ್ಲಿ ಸಮಾನ ಮನಸ್ಕ ಪಾರ್ಟ್ನರ್ ಅನ್ನು ಹೊಂದಿರುವುದು. ಧನ್ಯವಾದಗಳು ಸಾ" ಎಂದಿದ್ದಾರೆ. ಇದಕ್ಕೆ ಸಬಾ ಕೂಡ ಪ್ರತಿಕ್ರಿಯಿಸಿದ್ದಾರೆ. ಅಭಿಮಾನಿಗಳಂತೂ ಲೈಕ್, ಕಾಮೆಂಟ್‌ಗಳ ಮೂಲಕ ತಮ್ಮ ಆಶ್ಚರ್ಯ ಮತ್ತು ನಟನ ಮೇಲಿನ ಅಭಿಮಾನವನ್ನು ಹೊರಹಾಕುತ್ತಿದ್ದಾರೆ.


Click it and Unblock the Notifications











