ಒಂದೇ ಹೋಟೆಲ್.. ಬೇರೆ ಬೇರೆ ರೂಮ್.. 18 ವರ್ಷದ ಯುವತಿ ಜೊತೆ ಕಾರ್ತಿಕ್ ಆರ್ಯನ್; ಶ್ರೀಲೀಲಾ ಕಥೆಯೇನು?
ಸಿನಿಮಾ ರಂಗ ಅಂದ್ಮೇಲೆ ದಿನಕ್ಕೊಂದು ಲವ್ ಸ್ಟೋರಿ ಹುಟ್ಟುಕೊಳ್ಳುತ್ತವೆ. ರೂಮರ್‌ಗಳು ನಟ-ನಟಿಯರನ್ನು ಬೆಂಬಿಡದೇ ಸುತ್ತಿಕೊಳ್ಳುತ್ತೆ. ನಮ್ಮಿಬ್ಬರ ನಡುವೆ ಏನೂ ಇಲ್ಲ ಎಂದು ಹೇಳಿಕೊಂಡವರೇ ಹಸೆಮಣೆ ಏರಿದ್ದಾರೆ. ಇನ್ನು ಕೆಲವರು ದಾಂಪತ್ಯ ಜೀವನಕ್ಕೆ ಕಾಲಿಟ್ಟೇ ಬಿಟ್ಟರು ಎನ್ನುವಾಗಲೇ ಬ್ರೇಕಪ್ ಸುದ್ದಿಯನ್ನು ಕೊಟ್ಟಿದ್ದೂ ಇದೆ. ಹೀಗಾಗಿ ಚಿತ್ರರಂಗದಲ್ಲಿ ಡೇಟಿಂಗ್, ಲವ್ ಸ್ಟೋರಿ, ಬ್ರೇಕಪ್, ವಿಚ್ಚೇದನ ಇವೆಲ್ಲವೂ ಸರ್ವೆ ಸಾಮಾನ್ಯ.
ಬಾಲಿವುಡ್‌ನ ಸ್ಟಾರ್ ನಟ ಕಾರ್ತಿಕ್ ಆರ್ಯನ್ ಕೂಡ ಲವ್ ಸ್ಟೋರಿ, ಗಾಳಿ ಸುದ್ದಿಗಳಲ್ಲಿ ಹೆಚ್ಚಾಗಿ ಸಿಕ್ಕಿಕೊಳ್ಳುತ್ತಲೇ ಇರುತ್ತಾರೆ. ಬಾಲಿವುಡ್‌ನ ಸೆಲ್ಫ್ ಮೇಡ್ ಸ್ಟಾರ್ ಕಾರ್ತಿಕ್ ಆರ್ಯನ್ ಆಗಾಗ ಗಾಳಿಸುದ್ದಿಗೆ ಸಿಲುಕುತ್ತಲೇ ಇರುತ್ತಾರೆ. ಚಿತ್ರರಂಗದಲ್ಲಿ ತನ್ನದೇ ಸ್ವಂತ ಪ್ರತಿಭೆಯಿಂದ ಬೆಳೆದು ನಿಂತಿರುವ ಕಾರ್ತಿಕ್ ಆರ್ಯನ್ ವೃತ್ತಿ ಬದುಕಿನಲ್ಲಿ ಎಷ್ಟು ಫೇಮಸ್ ಆಗಿದ್ದಾರೋ ಅಷ್ಟೇ ವೈಯಕ್ತಿಕ ಬದುಕಿನಲ್ಲೂ ಸದಾ ಸುದ್ದಿಯಲ್ಲಿ ಇರುತ್ತಾರೆ.

ಕಾರ್ತಿಕ್ ಆರ್ಯನ್ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಸ್ಟಾರ್‌ಗಳಲ್ಲಿ ಕಾರ್ತಿಕ್ ಆರ್ಯನ್ ಕೂಡ ಒಬ್ಬರು. ಇತ್ತೀಚೆಗ ಕಾರ್ತಿಕ್ ಆರ್ಯನ್ ಹಾಗೂ ದಕ್ಷಿಣ ಭಾರತದ ನಟಿ ಶ್ರೀಲೀಲಾ ಡೇಟಿಂಗ್ ಮಾಡುತ್ತಿದ್ದಾರೆಂಬ ಗಾಳಿ ಸುದ್ದಿ ಓಡಾಡುತ್ತಿದೆ. ಇದೇ ವೇಳೆ 18 ವರ್ಷದ ಹುಡುಗಿ ಜೊತೆ ಗೋವಾದ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಹಾಗಿದ್ದರೆ, ಆ ಚೆಲುವೆ ಯಾರು? ಶ್ರೀಲೀಲಾ ಜೊತೆಗಿನ ಡೇಟಿಂಗ್ ರೂಮರ್ ಕೂಡ ಸುಳ್ಳಾ? ಏನಿದು ಮ್ಯಾಟರ್ ಅಂತ ತಿಳಿಯುವುದಕ್ಕೆ ಮುಂದೆ ಓದಿ.
ಕಾರ್ತಿಕ್ ಆರ್ಯನ್ ಹೆಸರು ಈ ಹಿಂದೆ ಕೇವಲ ಶ್ರೀಲೀಲಾ ಅಷ್ಟೇ ಅಲ್ಲ. ಬಾಲಿವುಡ್‌ನ ಹಲವು ನಟಿಯರೊಂದಿಗೆ ತಳುಕು ಹಾಕಿಕೊಂಡಿತ್ತು. ತಾರಾ ಸುತಾರಿಯಾ, ಪಶ್ಮಿನಾ ರೋಷನ್, ಜಾಹ್ನವಿ ಕಪೂರ್, ಸಾರಾ ಅಲಿ ಖಾನ್, ನುಸ್ರತ್ ಭರೂಚಾ, ಡಿಂಪಲ್ ಶರ್ಮಾ ಸೇರಿದಂತೆ ಹಲವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರಂದು ವರದಿಯಾಗಿತ್ತು. ಆದರೆ, ಆ ಗಾಳಿ ಸುದ್ದಿಗಳ ಬಗ್ಗೆ ಕಾರ್ತಿಕ್ ಆರ್ಯನ್ ಹಾಗೂ ಆ ನಟಿಯರಾಗಲಿ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ.
ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಕನ್ನಡದ ನಟಿ ಶ್ರೀಲೀಲಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಕಾರ್ತಿಕ್ ಆರ್ಯನ್ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲಿ ಕಾರ್ತಿಕ್ ಆರ್ಯನ್ ಹೊಸ ಗೆಳತಿ ಶ್ರೀಲೀಲಾ ಎಂದು ಪುಕಾರು ಹಬ್ಬಿದೆ. ಶ್ರೀಲೀಲಾ, ಅನುರಾಗ್ ಬಸು ನಿರ್ದೇಶನದ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಜೊತೆ ನಟಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎಂದು ಬಿ-ಟೌನ್‌ನಲ್ಲಿ ಸುದ್ದಿ ಹಬ್ಬಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇವರಿಬ್ಬರೂ ಒಟ್ಟೊಟ್ಟಿಗೆ ಪಾರ್ಟಿ, ಪಬ್ ಅಂತ ತೆರಳಿದ್ದು, ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಇಷ್ಟಲ್ಲ ಆದ್ಮೇಲೆ ಕಾರ್ತಿಕ್ ಆರ್ಯನ್-ಶ್ರೀಲೀಲಾ ಇಬ್ಬರೂ ಶೀಘ್ರದಲ್ಲೇ ಮದುವೆ ಆ ಎಂಬ ವದಂತಿಗಳು ಹಬ್ಬಿದ್ದವು. ಈ ಗ್ಯಾಪ್‌ನಲ್ಲಿಯೇ ಕಾರ್ತಿಕ್ ಬೇರೊಬ್ಬ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದು ಶ್ರೀಲೀಲಾ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅಸಲಿಗೆ ಮ್ಯಾಟರ್ ಏನಪ್ಪಾ ಅಂದರೆ, ಕಾರ್ತಿಕ್ ಆರ್ಯನ್ ಗೋವಾದಲ್ಲಿ 18 ವರ್ಷದ ಯುಕೆ ಮೂಲದ ಕರೀನಾ ಕುಬಿಲಿಯೂಟೆ ಎಂಬ ಯುವತಿ ಜೊತೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಒಂದೇ ಹೋಟೆಲ್‌ನಲ್ಲಿದ್ದರು. ಆದರೆ, ಬೇರೆ ಬೇರೆ ಕೊಠಡಿಗಳಲ್ಲಿ ತಂಗಿದ್ದರೆಂದು ವರದಿಯಾಗಿದೆ. ಇವರಿಬ್ಬರ ಫೋಟೋಗಳು ವೈರಲ್ ಆದ ಬಳಿಕ ಆ ಯುವತಿ ಡೇಟಿಂಗ್ ವದಂತಿಗಳಿಗೆ ಇನ್‌ಸ್ಟಾಗ್ರಾಮ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
"ನನಗೆ ಕಾರ್ತಿಕ್ ಯಾರೆಂದು ಗೊತ್ತಿಲ್ಲ. ನಾನು ನನ್ನ ಕುಟುಂಬದೊಂದಿಗೆ ಹಾಲಿಡೇ ಮಾಡುತ್ತಿದ್ದನೆ" ಎಂದು ಹೇಳಿದ್ದಾರೆ. ಆದರೆ, ಕಾರ್ತಿಕ್ ಆರ್ಯನ್ ಈ ಪ್ರಸಂಗದ ಬಗ್ಗೆ ಇದೂವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಷಯ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಕಾರ್ತಿಕ್ ಮತ್ತು ಕರೀನಾ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರಾ? ಶ್ರೀಲೀಲಾಗೆ ಕೈ ಕೊಟ್ಟರೇ?" ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.


Click it and Unblock the Notifications











