ಸೋನಿ ಪಿಕ್ಚರ್‌ಗೆ ಹೊಸ 'ಶಕ್ತಿಮಾನ್' ಸಿಕ್ಕಿಬಿಟ್ಟನಾ? ಯಾರದು ಹೊಸ ಸೂಪರ್ ಹೀರೊ
ಭಾರತೀಯ ಚಿತ್ರರಂಗದಲ್ಲಿ ಸೂಪರ್ ಹೀರೋ ಯಾರು ಅಂತ ಹೇಳಿದರೆ ಕಣ್ಮುಂದೆ ಬರುವುದೇ ಶಕ್ತಿಮಾನ್. 90 ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ 'ಶಕ್ತಿಮಾನ್' ಭಾರತೀಯರ ಫೇವರೀಟ್ ಹೀರೋ ಆಗಿದ್ದರು. ಮುಕೇಶ್ ಖನ್ನಾ 'ಶಕ್ತಿಮಾನ್' ಅವತಾರದಲ್ಲಿ ಮಿಂಚಿದ್ದರು. ಈಗ ಬೆಳ್ಳಿಪರದೆ ಮೇಲೆ ಮತ್ತೆ 'ಶಕ್ತಿಮಾನ್' ಕರೆ ತರಲು ಸೋನಿ ಪಿಕ್ಚರ್ಸ್ ನಿರ್ಧರಿಸಿದೆ. ಈ ಬೆನ್ನಲ್ಲೆ ಹೊಸ 'ಶಕ್ತಿಮಾನ್' ಯಾರು ಎಂಬ ಚರ್ಚೆ ಶುರುವಾಗಿತ್ತು. ಈಗ ಯುವ ಶಕ್ತಿಮಾನ್ ನಿರ್ಮಾಣ ಸಂಸ್ಥೆಗೆ ಸಿಕ್ಕಿದೆ ಎನ್ನುತ್ತಿದೆ ಬಾಲಿವುಡ್.
Recommended Video
ಶಕ್ತಿಮಾನ್ ಸಿನಿಮಾ ಆಗುತ್ತೆ ಎನ್ನುವ ವಿಷಯ ಹೊರ ಬಿದ್ದಾಗಲೇ ಬಾಲಿವುಡ್ ಸೂಪರ್‌ಸ್ಟಾರ್‌ಗಳ ಕಡೆ ಬೊಟ್ಟು ಮಾಡಲಾಗಿತ್ತು. ಅಕ್ಷಯ್ ಕುಮಾರ್, ಅಜಯ್ ದೇವಗನ್, ರಣ್‌ವೀರ್ ಸಿಂಗ್ ಹೆಸರುಗಳು ಕೇಳಿಬಂದಿದ್ದವು. ಆದರೆ, ಮುಕೇಶ್ ಖನ್ನಾ ಈ ಮೂವರ ಹೆಸರನ್ನು ತಳ್ಳಿ ಹಾಕಿದ್ದರು. ಈಗ 'ಶಕ್ತಿಮಾನ್' ಅವತಾರವತ್ತಲಿರೋ ನಟ ಈತನೇ ಅಂತ ಬಾಲಿವುಡ್ ಹೇಳುತ್ತಿದೆ. ಹಾಗಿದ್ದರೆ, ಆ ನಟ ಯಾರು ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಯುವ 'ಶಕ್ತಿಮಾನ್' ಸಿಕ್ಕಿದ್ನಾ?
ಬಾಲಿವುಡ್ ನಟ ಮುಕೇಶ್ ಖನ್ನಾ ಜೊತೆ ಇರುವ ಫೋಟೊ ಒಂದನ್ನು ಬಾಲಿವುಡ್ ನಟ ನಕುಲ್ ಮೆಹ್ತಾ ಇತ್ತೀಚೆಗೆ ಶೇರ್ ಮಾಡಿಕೊಂಡಿದ್ದರು. ಮುಕೇಲ್ ಮೆಹ್ತಾ ಸದ್ಯ ' ಬಡೆ ಅಚ್ಚೆ ಲಗ್ತೆ ಹೇ 2' ನಲ್ಲಿ ರಾಮ್ ಪಾತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ. ನಟಿ ದಿಶಾ ಪಾರ್ಮರ್ ಹಾಗೂ ನಕುಲ್ ಮೆಹ್ತಾ ಕಾಂಬಿನೇಷನ್ ಬಗ್ಗೆ ವೀಕ್ಷಕರು ಫಿದಾ ಆಗಿದ್ದಾರೆ. ಇದೇ ನಕುಲ್ ಮೆಹ್ತಾ ಹೊಸ 'ಶಕ್ತಿಮಾನ್' ಎಂದು ಹೇಳಲಾಗುತ್ತಿದೆ. ಹಳೆ ಶಕ್ತಿಮಾನ್ ಜೊತೆ ತೆಗೆಸಿಕೊಂಡ ಫೋಟೊ ಈ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಚರ್ಚೆಯಾಗುತ್ತಿದ್ದು, ಇವರೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವ 'ಶಕ್ತಿಮಾನ್' ಎಂದು ಹೇಳಲಾಗುತ್ತಿದೆ.

'ಶಕ್ತಿಮಾನ್' ನೋಡಲು ಕಾತುರ
'ಶಕ್ತಿಮಾನ್' ಸಿನಿಮಾ ನಿರ್ಮಾಣ ಮಾಡುವುದಾಗಿ ಅನೌನ್ಸ್ ಆಗುತ್ತಿದ್ದಂತೆ ಕಿರುತೆರೆ ನಟನ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಶಕ್ತಿಮಾನ್ ಅವತಾರದಲ್ಲಿ ನಕುಲ್ ಸೂಕ್ತ ನಟಿ ಎಂದು ಹೇಳುತ್ತಿದ್ದಾರೆ. ಯುವ 'ಶಕ್ತಿಮಾನ್' ಅವತಾರಕ್ಕೆ ಹೇಳಿ ಮಾಡಿಸಿದ ವ್ಯಕ್ತಿ ಎಂದು ನಕುಲ್ ಮೆಹ್ತಾ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ನಕುಲ್ ಅಥವಾ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿಲ್ಲ. ಸದ್ಯ ನಕುಲ್ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾರ್ ಕ ದರ್ದ್ ಹೇ ಮೀಠಾ ಮೀಠಾ ಪ್ಯಾರಾ ಪ್ಯಾರಾ, ಇಷಕ್ಬಾಜ್ ಸೇರಿದಂತೆ ಹಲವು ಶೋಗಳಲ್ಲಿ ನಟಿಸುತ್ತಿದ್ದಾರೆ.

ದುಬಾರು ಸೂಪರ್ ಹೀರೊ 'ಶಕ್ತಿಮಾನ್'?
'ಶಕ್ತಿಮಾನ್' ಸೂಪರ್ ಹೀರೊವನ್ನು ಮತ್ತೆ ತೆರೆಮೇಲೆ ತರಲು ಸೋನಿ ಪಿಕ್ಚರ್ಸ್ ನಿರ್ಧರಿಸಿದೆ. 'ಶಕ್ತಿಮಾನ್' ಸೀರಿಯಲ್‌ನ ಹಕ್ಕುಗಳನ್ನೂ ಪಡೆದುಕೊಂಡಿದೆ. ಫೆಬ್ರವರಿ 11ರಂದು 'ಶಕ್ತಿಮಾನ್' ಸಿನಿಮಾ ಬಗ್ಗೆ ಸಣ್ಣದೊಂದು ಟೀಸರ್ ಅನ್ನು ಬಿಟ್ಟು ಅನೌನ್ಸ್ ಮಾಡಲಾಗಿತ್ತು. ಸೋನಿ ಸಂಸ್ಥೆ ಜೊತೆ ಮಾಜಿ ಸಿನಿಮಾ ಪತ್ರಕರ್ತರಾದ ಪ್ರಶಾಂತ್ ಸಿಂಗ್ ಹಾಗೂ ಮಧುರ್ಯಾ ವಿನಯ್ ಕೈ ಜೋಡಿಸಿದ್ದಾರೆ. ಈ ಹಿಂದೆ 'ಶಕ್ತಿಮಾನ್' ಅವತಾರದಲ್ಲಿ ನಟಿಸಿದ್ದ ಮುಖೇಶ್ ಖನ್ನಾ ಕೂಡ ತಮ್ಮ ಭೀಷ್ಮ್ ಇಂಟರ್‌ನ್ಯಾಷನಲ್ ಸಂಸ್ಥೆ ಮೂಲಕ ಸಿನಿಮಾ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ.

3 ಪಾರ್ಟ್‌ನಲ್ಲಿ 'ಶಕ್ತಿಮಾನ್'
'ಶಕ್ತಿಮಾನ್' ಸಿನಿಮಾ ಸುಮಾರು 520 ಕಂತುಗಳಲ್ಲಿ ಪ್ರಸಾರವಾಗಿತ್ತು. ಹೀಗಾಗಿ ಸೋನಿ ಸಂಸ್ಥೆ ಈ ಸಿನಿಮಾವನ್ನು ಮೂರು ಭಾಗಗಳಲ್ಲಿ ತೆರೆ ಮೇಲೆ ತರಲು ನಿರ್ಧರಿಸಿದೆ. ಈ ಹಿಂದೆ ಬಾಲಿವುಡ್ ಸೂಪರ್‌ಸ್ಟಾರ್ ಒಬ್ಬರು 'ಶಕ್ತಿಮಾನ್' ಅವತಾರವೆತ್ತುತ್ತಾರೆ ಎನ್ನಲಾಗಿತ್ತು. ಆದ್ರೀಗ ನಕುಲ್ ಮೆಹ್ತಾ ಹೆಸರು ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ನಿರ್ಮಾಣ ಸಂಸ್ಥೆಗಳು ಇನ್ನೂ ಅಧಿಕೃತ ಮಾಹಿತಿಯನ್ನು ಹೊರ ಹಾಕಿಲ್ಲ.


Click it and Unblock the Notifications











