"ಮಗನೆ ನಿನ್ನ ಯೋಗ್ಯತೆಗಿಂತ ದೊಡ್ಡ ಮನೆಯನ್ನೇ ತಗೋ"; ಈ ನಟನಿಗೆ ಶಾರುಖ್ ಹೀಗೆ ಸಲಹೆ ಕೊಟ್ಟಿದ್ದಿದ್ದೇಕೆ?

ಬಾಲಿವುಡ್‌ನ ಅದ್ಭುತ ನಟರ ಪಟ್ಟಿಯಲ್ಲಿ ರಾಜ್‌ಕುಮಾರ್ ರಾವ್ ಹೆಸರು ಮುಂಚೂಣಿಯಲ್ಲಿ ಇರುತ್ತೆ. ಇಲ್ಲಿ ನೆಲೆ ಕಂಡುಕೊಳ್ಳಲು ಈ ನಟ ಕಳೆದ ಹಲವು ವರ್ಷಗಳಿಂದ ನಾನಾ ರೀತಿಯ ಕಷ್ಟ ಪಟ್ಟಿದ್ದರು. ಸೂಪರ್‌ಸ್ಟಾರ್‌ಗಳ ಮಧ್ಯೆ ತನ್ನದೇ ವಿಶಿಷ್ಠ ಸಿನಿಮಾಗಳನ್ನು ಮಾಡುತ್ತಾ, ಅದರಲ್ಲೇ ಯಶಸ್ಸುನ್ನು ಕಂಡುಕೊಂಡಿ ನಟನೀತ.

ಇಷ್ಟು ಕಷ್ಟ ಪಟ್ಟದ್ದಕ್ಕೆ ಈಗ ಯಶಸ್ಸು ಅವರನ್ನು ಹಿಂಬಾಲಿಸಿಕೊಂಡು ಬಂದಿದೆ. ಮುಂಬೈ ಅಂತಹ ಮಹಾನಗರದಲ್ಲಿ 44 ಕೋಟಿ ರೂಪಾಯಿ ಬೆಲೆ ಬಾಳುವ ಪ್ರಾಪರ್ಟಿಯನ್ನು ಖರೀದಿ ಮಾಡಿದ್ದಾರೆ. ಈ ವಿಷಯ ಬಾಲಿವುಡ್‌ ಅಂಗಳದಲ್ಲಿ ಚರ್ಚೆಯಾಗುತ್ತಿದೆ. ಅಂದ್ಹಾಗೆ ಈ ಪ್ರಾಪರ್ಟಿಯನ್ನು ಮತ್ತೊಬ್ಬ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಬಳಿಕ ಖರೀದಿ ಮಾಡಿರುವುದು ವಿಶೇಷ.

Rajkumar Rao brought 44 crore property

ಅಂದ್ಹಾಗೆ, ಈ ಪ್ರಾಪರ್ಟಿಯನ್ನು ನಿನ್ನೆ ಮೊನ್ನೆ ಖರೀದಿ ಮಾಡಿದ್ದಲ್ಲ. ಸುಮಾರು ಎರಡು ವರ್ಷಗಳ ಹಿಂದೆನೇ ಈ ಜಾಹ್ನವಿ ಕಪೂರ್‌ನಿಂದ ಈ ಪ್ರಾಪರ್ಟಿಯನ್ನು ಖರೀದಿ ಮಾಡಿದ್ದರು. ಆ ವೇಳೆ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಈ ನಟನಿಗೆ ಹೇಳಿದ ಮಾತನ್ನು ಹಿಂದೊಮ್ಮೆ ನೆನೆಪಿಸಿಕೊಂಡಿದ್ದಾರೆ.

ರಾಜ್‌ಕುಮಾರ್ ರಾವ್ ಬಾಲಿವುಡ್ ಕಿಂಗ್ ಶಾರುಖ್ ಖಾನ್ ದೊಡ್ಡ ಅಭಿಮಾನಿ. ತಾನು ಇಷ್ಟು ದೊಡ್ಡ ಬೆಲೆಯ ಪ್ರಾಪರ್ಟಿಯನ್ನು ಖರೀದಿ ಮಾಡುವುದಕ್ಕೆ ಕಿಂಗ್ ಪ್ರೇರಣೆಯೇ ಕಾರಣವೆಂದು ರಾಜ್‌ಕುಮಾರ್ ರಾವ್ ಹೇಳಿಕೊಂಡಿದ್ದಾರೆ. ಮುಂಬೈ ಅಂತಹ ಮಹಾನಗರಿಯಲ್ಲಿ 44 ಕೋಟಿ ರೂಪಾಯಿ ಬೆಲೆಯ ಆಸ್ತಿ ಖರೀದಿ ಮಾಡಿದ್ದರ ಹಿಂದೆ ಶಾರುಖ್ ಖಾನ್ ನೀಡಿದ ಅತೀ ದೊಡ್ಡ ಸಲಹೆ ಇದೆ ಎಂದು ರಾಜ್‌ಕುಮಾರ್ ರಾವ್ ಹೇಳಿಕೊಂಡಿದ್ದರು.

ಒಮ್ಮೆ ಶಾರುಖ್ ಖಾನ್ ತನಗೆ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದಾಗಿ ಹೇಳಿಕೊಂಡಿದ್ದಾರೆ. " ಶಾರುಖ್ ಸರ್ ನನ್ನ ಬಳಿ ಒಂದು ಮಾತು ಹೇಳಿದ್ದರು. ಮಗನೇ ಯಾವಾಗದರೂ ನಿನಗೆ ಮನೆಯನ್ನು ಖರೀದಿ ಮಾಡಬೇಕು ಅಂತ ಅನಿಸಿದರೆ, ನಿನ್ನ ಯೋಗ್ಯತೆಯಿಂದ ಸ್ವಲ್ಪ ಜಾಸ್ತಿನೇ ಖರೀದಿಸು. ಯಾಕಂದ್ರೆ, ಇದನ್ನು ಆ ದೇವರ ನೋಡುತ್ತಿರುತ್ತಾನೆ. ಹಾಗೇ ನೀನು ಆ ಮನೆಯನ್ನು ಉಳಿಸಿಕೊಳ್ಳುವುದಕ್ಕೆ ಹೆಚ್ಚು ಕೆಲಸ ಮಾಡುತ್ತೀಯಾ ಎಂದು ಹೇಳಿದ್ದರು. ಅದನ್ನು ನಾನು ಗಂಭೀರವಾಗಿ ಪರಿಗಣಿಸಿದೆ." ಎಂದು ರಾಜ್‌ಕುಮಾರ್ ರಾವ್ ಹೇಳಿದ್ದಾರೆ.

Rajkumar Rao brought 44 crore property

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ 2020ರಲ್ಲಿ ಮುಂಬೈನಲ್ಲಿ ಈ ಪ್ರಾಪರ್ಟಿಯನ್ನು 39 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರು. 3456 ಚದರ ಅಡಿಯುಳ್ಳ ಈ ಮೂರು ಅಂತಸ್ತಿನ ಈ ಫ್ಲಾಟ್ ಇದು. ಇದನ್ನು 2022ರಲ್ಲಿ ರಾಜ್‌ಕುಮಾರ್ ರಾವ್ 44 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರು. ಅದನ್ನು ಪತ್ನಿ ಪತ್ರಲೇಖಾ ಜೊತೆ ಸೇರಿ ತಮಗೆ ಬೇಕಾದ ಹಾಗೆ ಡಿಸೈನ್ ಮಾಡಿದ್ದಾರೆ.

ಶಾರುಖ್ ಖಾನ್ ಕೂಡ ಈಗ 200 ಕೋಟಿ ರೂಪಾಯಿ ಬೆಲೆ ಬಾಳುವ 'ಮನ್ನತ್' ಅನ್ನು ತನ್ನ ಯೋಗ್ಯತೆ ಮೀರಿ ಖರೀದಿ ಮಾಡಿದ್ದರು. ಅವರಿಗೆ ಮನೆಯ ವಿನ್ಯಾಸ ಮಾಡುವುದಕ್ಕೂ ಹಣವಿರಲಿಲ್ಲ. ಇಂಟಿರಿಯರ್ ಡಿಸೈನರ್ ಆ ಮನೆಯನ್ನು ವಿನ್ಯಾಸ ಮಾಡುವುದಕ್ಕೆ ಕೇಳಿದ ಹಣ ಆಗ ಶಾರುಖ್ ಖಾನ್ ಪಡೆಯುತ್ತಿದ್ದ ತಿಂಗಳ ಸಂಭಾವನೆಯನ್ನು ಮೀರಿತ್ತು. ಆಗ ಗೌರಿ ಖಾನ್ ಸ್ವತ: ವಿನ್ಯಾಸಕ್ಕೆ ಇಳಿದಿದ್ದರು ಎಂದು ಶಾರುಖ್ ಖಾನ್ ಹೇಳಿಕೊಂಡಿದ್ದಾರೆ.

More from Filmibeat

English summary
Bollywood Actor Rajkumar Rao brought 44 crore house in Mumbai remembered Shah Rukh Khan Words
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X