ಹೆಂಗಿದ್ದ ನಟ ಹೆಂಗಾದ ನೋಡಿ; ಪಾತ್ರಕ್ಕಾಗಿ 30 ಕೆಜಿ ತೂಕ ಇಳಿಸಿಕೊಂಡ ರಣ್‌ದೀಪ್ ಹೂಡ!
ಬಾಲಿವುಡ್‌ನಲ್ಲಿ ಪಾತ್ರಗಳ ಮೇಲೆ ಪ್ರಯೋಗಗಳನ್ನು ಮಾಡುವ ನಟ ರಣ್‌ದೀಪ್ ಹೂಡ. ತನ್ನ ವೃತ್ತಿ ಬದುಕಿನಲ್ಲಿ ಮೆಗಾ ಹಿಟ್ ಸಿನಿಮಾಗಳು ಸಿಗದೇ ಹೋದರೂ, ಈತ ನಟಿಸಿದ ಸಿನಿಮಾಗಳು ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡಿದ್ದು ಇವೆ. ಯಾಕಂದ್ರೆ, ರಣ್‌ದೀಪ್ ಹೂಡ ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಹಾಗಿರುತ್ತವೆ.
ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ ಕುರಿತಾದ ಸಿನಿಮಾವೊಂದು ನಿರ್ಮಾಣ ಆಗಿದೆ. ಅದುವೇ 'ಸ್ವತಂತ್ರ ವೀರ ಸಾವರ್ಕರ್'. ಈ ಸಿನಿಮಾ ಇದೇ ಮಾರ್ಚ್ 22ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಇದೇ ಬೆನ್ನಲ್ಲೇ ರಣ್‌ದೀಪ್ ಹೂಡ ಹಂಚಿಕೊಂಡು ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ರಣ್‌ದೀಪ್ ಹೂಡ ಇದೇ 'ಸ್ವತಂತ್ರ ವೀರ ಸಾವರ್ಕರ್' ಸಿನಿಮಾದಲ್ಲಿ ವೀರ್ ಸಾವರ್ಕರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಇತ್ತೀಚೆಗೆ ತೂಕ ಇಳಿಸಿಕೊಂಡಿರುವ ಫೋಟೊವನ್ನು ಶೇರ್ ಮಾಡಿಕೊಂಡಿದ್ದರು. ಆ ಫೋಟೊ ನೋಡಿ ಸಿನಿ ಪ್ರಿಯರು ಬೆಚ್ಚಿಬಿದ್ದಿದ್ದಾರೆ. ಪಾತ್ರಕ್ಕಾಗಿ ರಣ್‌ದೀಪ್ ಹೂಡ ಬದಲಾದ ರೀತಿ ಕಂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
30 ಕೆಜಿ ತೂಕ ಇಳಿಸಿಕೊಂಡ ರಣ್‌ದೀಪ್
ವೀರ್ ಸಾವರ್ಕರ್ ಕುರಿತಾದ 'ಸ್ವತಂತ್ರ ವೀರ ಸಾವರ್ಕರ್' ಸಿನಿಮಾಗಾಗಿ ರಣ್‌ದೀಪ್ ಹೂಡ ಬರೋಬ್ಬರಿ 30 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ರಿಲೀಸ್ ಇನ್ನೇನು ಮೂರು ದಿನಗಳು ಬಾಕಿ ಉಳಿದಿವೆ ಅನ್ನುವಾಗಲೇ ಸ್ವತ: ರಣ್‌ದೀಪ್ ಹೂಡ ಈ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಬದಲಾವಣೆಯನ್ನು ಕಂಡ ನೆಟ್ಟಿಗರು ಹಾಲಿವುಡ್ ನಟ ಕ್ರಿಸ್ಟಿಯನ್ ಬೇಲ್ ಜೊತೆ ರಣ್‌ದೀಪ್ ಹೂಡನನ್ನು ಹೋಲಿಕೆ ಮಾಡುತ್ತಿದ್ದಾರೆ.

ತೂಕ ಇಳಿಸಿಕೊಂಡಿದ್ದೇಗೆ?
ವೀರ್ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಎಎನ್‌ಐಗೆ ರಣ್‌ದೀಪ್ ಹೂಡ ತೂಕ ಕಳೆದುಕೊಂಡಿದ್ದರ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. "ರಣ್‌ದೀಪ್ ಹೂಡ ಜೊತೆ ಹಲವು ಬಾರಿ ಚರ್ಚೆ ಮಾಡಿದ್ದೇನೆ. ಸಾಕಷ್ಟು ಶ್ರಮವಹಿಸಿ ಈ ಸಿನಿಮಾ ಮಾಡಿದ್ದಾರೆ. ಸುಮಾರು 30 ಕೆಜಿ ತೂಕ ಕಳೆದುಕೊಂಡಿದ್ದಾರೆ." ಎಂದು ರಂಜಿತ್ ಸಾವರ್ಕರ್ ಹೇಳಿದ್ದಾರೆ. ಈ ಪಾತ್ರದಕ್ಕಾಗಿ ರಣ್‌ದೀಪ್ ಹೂಡ ಸುಮಾರು ನಾಲ್ಕು ತಿಂಗಳುಗಳ ಕಾಲ ಒಂದು ದಿನ ಒಂದು ಖರ್ಜೂರ ಹಾಗೂ ಒಂದು ಲೋಟ ಹಾಲು ಅಷ್ಟೇ ಸೇವಿಸುತ್ತಿದ್ದಾರೆಂದು ಕೆಲವು ದಿನಗಳ ಹಿಂದಷ್ಟೇ ವರದಿಯಾಗಿತ್ತು. ಆದರೆ, ಈ ವಿಷಯವನ್ನು ರಣ್‌ದೀಪ್ ಹೂಡ ತಳ್ಳಿ ಹಾಕಿದ್ದರು.
ಡಟ್ ಬಗ್ಗೆ ಏನಂದಿದ್ದರು ಹೂಡ?
ಒಂದು ಖರ್ಜೂರ ಹಾಗೂ ಒಂದು ಕಪ್ ಹಾಲಿನ ಹೊರತಾಗಿಯೂ ತನ್ನ ಡಯೆಟ್ ಪ್ಲಾನ್ ಬೇರೆನೇ ಇತ್ತು ರಣ್‌ದೀಪ್ ಹೂಡ ಹೇಳಿದ್ದರು. ಅವರ ಸಹೋದರಿ ಅಂಜಲಿ ಹೂಡ ಸಂಗ್ವಾನ್ ಅವರ ಸಲಹೆ ಮೇರೆಗೆ ಡಯೆಟ್ ಪ್ಲಾನ್ ಆಗಿತ್ತು ಎಂದು ಈ ಹಿಂದೆಯೇ ಟೈಮ್ಸ್ ಆಫ್ ಇಂಡಿಯಾಗೆ ಹೇಳಿಕೊಂಡಿದ್ದರು. ಆದರೂ ಈ ಸಿನಿಮಾದ ಜರ್ನಿ ಅಷ್ಟೊಂದು ಸುಲಭದ್ದಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಅಭಿಮಾನಿಗಳ ರಿಯಾಕ್ಷನ್ ಏನು?
ರಣ್‌ದೀಪ್ ಹೂಡ ಫೋಟೊ ನೋಡಿ ಥ್ರಿಲ್ ಆಗಿರೋ ನೆಟ್ಟಿಗರು ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. " ಇವರು ನಮ್ಮ ಕ್ರಿಶ್ವಿಯನ್ ಬೇಲ್" ಎಂದು ಒಬ್ಬರು ಹಾಲಿವುಡ್ ನಟನಿಗೆ ಹೋಲಿಕೆ ಮಾಡಿ ಕಮೆಂಟ್ ಮಾಡಿದ್ದಾರೆ. " ಆ ಶ್ರದ್ಧೆಯನ್ನು ಒಮ್ಮೆ ನೋಡಿ. ಹಾಟ್ಸ್ ಆಫ್.." ಎಂದು ಮತ್ತೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. "ನೀವು ಸರಬ್‌ಜಿತ್ ಸಿನಿಮಾಗಾಗಿಯೂ ಹೀಗೆ ಮಾಡಿದ್ರಿ. ನಿಮ್ಮ ಮೇಲೆ ಅಪಾರ ಗೌರವವಿದೆ" ಎಂದು ಹೇಳಿದ್ದರು.


Click it and Unblock the Notifications











