ಐಷಾರಾಮಿ ಕಾರುಗಳಿದ್ದರೂ ಸೈಫ್ ಅಲಿ ಖಾನ್‌ ಜೀವ ಉಳಿಸಿದ್ದು ಆಟೋ ರಿಕ್ಷಾ; ಮುಂಜಾನೆ ಮಂಜಲ್ಲಿ ಏನಾಯ್ತು?

ಇಂದು (ಜನವರಿ 16) ಬೆಳ್ಳಂಬೆಳಗ್ಗೆನೇ ಬಾಲಿವುಡ್ ಬೆಚ್ಚಿಬಿದ್ದಿತ್ತು. ಗಾಢ ನಿದ್ದೆಯಲ್ಲಿದ್ದ ಸೈಫ್ ಅಲಿ ಖಾನ್ ಮನೆಗೆ ಕಳ್ಳರು ನುಗ್ಗಿದ್ದರು. ರಾತ್ರಿ ಸುಮಾರು 2.30ಕ್ಕೆ ಸ್ಟಾರ್ ನಟನ ಮನೆಯಲ್ಲಿ ಕೂಗಾಟ ಚೀರಾಟ ನಡೆಯುತ್ತಿತ್ತು. ಮನೆಯೊಳಗೆ ಕಳ್ಳರು ಎಂಟ್ರಿ ಕೊಟ್ಟಿದ್ದರು. ಇದನ್ನು ನೋಡಿ ಮನೆ ಕೆಲಸದವಳು ಚೀರಿಕೊಂಡಿದ್ದಳು. ಇದನ್ನು ಕೇಳಿಸಿಕೊಂಡ ಸೈಫ್ ಅಲಿ ಖಾನ್ ರಕ್ಷಣೆಗೆ ಧಾವಿಸಿದ್ದರು.

ಸೈಫ್ ಅಲಿ ಖಾನ್ ಮನೆಯೊಳಗೆ ನುಗ್ಗಿದ್ದ ಕಳ್ಳ ಮಕ್ಕಳ ರೂಮಿಗೆ ನುಗ್ಗಲು ಯತ್ನಿಸುತ್ತಿದ್ದ. ಅದನ್ನು ತಡೆಯಲು ಸೈಫ್ ಅಲಿ ಖಾನ್ ಮುಂದಾಗಿದ್ದರು. ಆ ವೇಳೆ ಇಬ್ಬರ ನಡುವೆ ಕಾದಾಟ ನಡೆದಿದೆ. ಈ ಹೊತ್ತಲ್ಲಿ ಸೈಫ್ ಅಲಿ ಖಾನ್‌ಗೆ ಕಳ್ಳ ಚಾಕುವಿನಿಂದ ಮನಸ್ಸಿಗೆ ಬಂದಂತೆ ಇರಿದಿದ್ದಾನೆ. ಎಡ ಗೈ, ಕುತ್ತಿಗೆ, ಬೆನ್ನು ಹುರಿ ಸೇರಿದಂತೆ ಹಲವೆಡೆ ಗಾಯಗಳಾಗಿ ಸೈಫ್ ಅಲಿಖಾನ್ ದೇಹದಿಂದ ರಕ್ತ ಸೋರಿಕೆಯಾಗುತ್ತಿತ್ತು. ಇದು ಇತ್ತೀಚೆಗೆ ಬಂದ ವರದಿ. ಅಸಲಿಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.

Bollywood actor Saif Ali Khan life saved by son Ibrahim Ali Khan and Auto rickshaw driver

ನಟ ಸೈಫ್ ಅಲಿ ಖಾನ್ ಅನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಬೇಕಿತ್ತು. ಈ ವೇಳೆ ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪಿಸಿದ್ದು ಒಬ್ಬ ಆಟೋ ರಿಕ್ಷಾ ಡ್ರೈವರ್. ಅವರ ಸಹಾಯಕ್ಕೆ ನೆರವಾಗಿದ್ದು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್. ಆದರೆ, ಮನೆಯಲ್ಲಿ ಅಷ್ಟೊಂದು ಐಷಾರಾಮಿ ಕಾರುಗಳಿದ್ದರೂ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು ಯಾಕೆ?

ಕಳ್ಳ ಸೈಫ್ ಅಲಿ ಖಾನ್ ಚಾಕುವಿನಿಂದ ಇರಿದ ಬಳಿಕ ನಟನ ನೆರವಿಗೆ ತಕ್ಷಣವೇ ಬಂದಿದ್ದು 24 ವರ್ಷದ ಪುತ್ರ ಇಬ್ರಾಹಿಂ ಅಲಿ ಖಾನ್. ನಸುಕಿನ ಜಾದವದಲ್ಲಿ ಈತನೇ ತನ್ನ ತಂದೆಯನ್ನು ಆಟೋ ರಿಕ್ಷಾದಲ್ಲಿ ಮುಂಬೈನ ಬಾಂದ್ರಾ ನಿವಾಸದಿಂದ ಪ್ರತಿಷ್ಟಿತ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದ ಎಂದು ಎನ್‌ಡಿ ಟಿವಿ ವರದಿ ಮಾಡಿದೆ. ಸೈಫ್ ಮೇಲೆ ಅಟ್ಯಾಕ್ ಆದ ಬಳಿಕ ಏನಾಯ್ತು ಅಂದರೆ..

Bollywood actor Saif Ali Khan life saved by son Ibrahim Ali Khan and Auto rickshaw driver

ಪತಿ ಸೈಫ್ ಅಲಿ ಖಾನ್‌ಗೆ ಚಾಕು ಇರಿಯುತ್ತಿದ್ದಂತೆ ಕರೀನಾ ಕಪೂರ್ ಗಾಬರಿಕೊಂಡಿದ್ದರು. ತಕ್ಷಣವೇ ಸೈಫ್ ಪುತ್ರ ಇಬ್ರಾಹಿಂ ಅಲಿ ಖಾನ್‌ಗೆ ಕರೆ ಮಾಡಿದ್ದರು. ತಕ್ಷಣವೇ ಓಡಿ ಬಂದ ಇಬ್ರಾಹಿಂ ತಂದೆಯನ್ನು ಆಸ್ಪತ್ರೆಗೆ ಸೇರಿಸುವುದಕ್ಕೆ ಮುಂದಾಗಿದ್ದರು. ಆದರೆ, ಮನೆಯಲ್ಲಿದ್ದ ಐಷಾರಾಮಿ ಕಾರುಗಳು ನಿಂತಿದ್ದವು. ಆದರೆ, ಅವರ ಕಾರು ಡ್ರೈವರ್ ಎಲ್ಲರೂ ಮನೆಗೆ ಹೋಗಿದ್ದರು. ಹೀಗಾಗಿ ಚಾಲಕರು ಇರಲಿಲ್ಲ. ತಕ್ಷಣಕ್ಕೆ ಬೆಳಗ್ಗೆ 3 ಗಂಟೆ ಸುಮಾರಿಗೆ ಇಬ್ರಾಹಿಂ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸೈಫ್ ಅಲಿ ಖಾನ್ ವಾಸವಿದ್ದ ಸದ್ಗುರು ಶರಣ್ ಅಪಾರ್ಟ್​ಮೆಂಟ್‌ನಿಂದ ಮುಂಬೈನ ಪ್ರತಿಷ್ಟಿತ ಲೀಲಾವತಿ ಆಸ್ಪತ್ರೆಗೆ ಹೆಚ್ಚು ಕಡಿಮೆ ಎರಡು ಕಿಲೋ ಮೀಟರ್ ಅಂತರವಿದೆ. ಅಲ್ಲಿವರೆಗೂ ಆಟೋದಲ್ಲಿಯೇ ಕರೆದುಕೊಂಡು ಹೋಗಲಾಗಿತ್ತು. ಎಂತಹ ಐಷಾರಾಮಿ ಕಾರುಗಳು ಮನೆಯಲ್ಲಿ ಇದ್ದರೂ, ಇಂತಹ ಸಮಯದಲ್ಲಿ ಅವುಗಳು ಉಪಯೋಗಕ್ಕೆ ಬರಲಿಲ್ಲ ಅನ್ನೋದು ವಿಪರ್ಯಾಸ.

ಇನ್ನು ಕಳ್ಳ ಮನೆಯೊಳಗೆ ನುಗ್ಗಿ ಚಾಕುವಿನಿಂದ ಇರಿಯುವ ಸಂದರ್ಭದಲ್ಲಿ ಕರೀನಾ ಕಪೂರ್ ಖಾನ್ ಮನೆಯೊಳಗೆ ಇದ್ದರು ಎನ್ನಲಾಗಿದೆ. ಜೊತೆಗೆ ಅವರ ಇಬ್ಬರು ಮಕ್ಕಳು ಕೂಡ ಮನೆಯಲ್ಲಿಯೇ ಇದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. ಅಂದ್ಹಾಗೆ ಸೈಫ್ ಹಾಗೂ ಮೊದಲ ಪತ್ನಿ ಅಮ್ರಿತಾ ಸಿಂಗ್ ಅವರ ಪುತ್ರನೇ ಇಬ್ರಾಹಿಂ ಅಲಿ ಖಾನ್. ತಂದೆ ಎರಡನೇ ಮದುವೆಯ ಬಳಿಕವೂ ಅನ್ಯೋನ್ಯವಾಗಿ ಇದ್ದಾರೆ.

More from Filmibeat

English summary
Bollywood actor Saif Ali Khan life saved by son Ibrahim Ali Khan and auto-rickshaw driver;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X