»   » ಮದ್ಯಪಾನ, ಧೂಮಪಾನ ತ್ಯಜಿಸಲು ಶಾರುಖ್ ಪ್ಲಾನ್

ಮದ್ಯಪಾನ, ಧೂಮಪಾನ ತ್ಯಜಿಸಲು ಶಾರುಖ್ ಪ್ಲಾನ್

Posted By:
Subscribe to Filmibeat Kannada

"ಮಹಿಳೆಯರ ಗೌರವಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಮಹಿಳೆಯರನ್ನು ಎಂದಿಗೂ ನೋಯಿಸಬಾರದು' ಎಂದು ತಮ್ಮ ಮಕ್ಕಳಿಗೆ ಯಾವಾಗಲು ಹೇಳುವ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್, ಈಗ ತಮ್ಮ ಆರೋಗ್ಯ ದೃಷ್ಟಿಯಿಂದ ಹೇಳಿಕೆಯೊಂದನ್ನು ನೀಡಿ ಸುದ್ದಿಯಲ್ಲಿದ್ದಾರೆ.['ಮಹಿಳೆಯರಿಗೆ ಅಗೌರವ ತೋರಿದರೆ ತಲೆ ಕತ್ತರಿಸುತ್ತೇನೆ': ಶಾರುಖ್]

50 ವರ್ಷದ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ತಮ್ಮ ಆರೋಗ್ಯ ದೃಷ್ಟಿಯಿಂದ ನೀಡಿರುವ ಹೇಳಿಕೆ, ತೀರ ಹೆಚ್ಚು ಮದ್ಯಪಾನ ಮತ್ತು ಧೂಮಪಾನ ವ್ಯಸನಿಗಳಿಗೆ ಒಂದು ರೀತಿಯ ಸಂದೇಶ ಎಂದರೂ ತಪ್ಪಾಗಲಾರದು. ಅವರು ಹೇಳಿದ್ದಾದರೂ ಏನು? ಇಲ್ಲಿದೇ ನೋಡಿ ಡೀಟೇಲ್ಸ್..

ಆರೋಗ್ಯಕರ ಜೀವನಕ್ಕೆ ಶಾರುಖ್ ನಿರ್ಧಾರ

ಶಾರುಖ್ ಖಾನ್ ಉತ್ತಮ ಆರೋಗ್ಯಕರ ಜೀವನಕ್ಕಾಗಿ ಮದ್ಯಪಾನ ಮತ್ತು ಸಿಗರೇಟ್ ಸೇವನೆ ತ್ಯಜಿಸುವುದಾಗಿ ಹೇಳಿದ್ದಾರೆ. ಹೀಗೆ ಹೇಳಿದ್ದು ಏಕೆ ಗೊತ್ತೇ?...

ಮುಖ್ಯ ಕಾರಣ ಇದೇ..

50 ವರ್ಷದ ಕಿಂಗ್ ಖಾನ್ ತಮ್ಮ ಮೂರು ಮಕ್ಕಳ ಜೊತೆಗೆ ಹೆಚ್ಚು ವರ್ಷಗಳನ್ನು ಕಳೆಯುವ ಹಂಬಲದಿಂದ ಡ್ರಿಂಗ್ಸ್ ಮತ್ತು ಸಿಗರೇಟ್ ಸೇವನೆ ಬಿಡುವುದಾಗಿ ಹೇಳಿಕೊಂಡಿದ್ದಾರೆ.[ಶಾರುಖ್ ಮುಂದಿನ ಚಿತ್ರದಲ್ಲಿ ರಣಬೀರ್ ಮಾಜಿ ಪ್ರಿಯತಮೆಯರು?]

ಶಾರುಖ್ ಗೆ ಮಗನ ಜತೆಗೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲವಂತೆ..

ಇಂಡಿಯಾ ಟುಡೇ ಸಮಾವೇಶದಲ್ಲಿ ಭಾಗವಹಿಸಿದ್ದ ಶಾರುಖ್ ಖಾನ್ ತಮ್ಮ ಕುಟುಂಬದ ಬಗ್ಗೆಯೂ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ "50 ವರ್ಷದ ಒಬ್ಬ ತಂದೆಯಾಗಿ 4 ವರ್ಷದ ನನ್ನ ಮಗ ಅಬ್ರಾಂ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಭಯ ನನ್ನನ್ನು ಕಾಡಿದೆ" ಎಂದು ಹೇಳಿಕೊಂಡಿದ್ದಾರೆ.[ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]

20-25 ವರ್ಷಗಳನ್ನು ಮಕ್ಕಳ ಜೊತೆ ಕಳೆಯುವ ಆಸೆ

ಶಾರುಖ್ ಖಾನ್ ತಮ್ಮ ಮಕ್ಕಳ ಜೊತೆ 20-25 ವರ್ಷ ಹಾಯಾಗಿ ಕಳೆಯುವ ದೊಡ್ಡ ಆಸೆ ಇರುವುದರಿಂದ, ಆರೋಗ್ಯಕರ ಜೀವನಶೈಲಿಗಾಗಿ ಮದ್ಯಪಾನ, ಧೂಮಪಾನ ಮಾಡುವುದನ್ನು ಬಿಟ್ಟುಬಿಡುವುದಾಗಿ ಹೇಳಿದ್ದಾರೆ.

ನನಗೆ ತಂದೆ ತಾಯಿ ಮಹತ್ವ ಏನು ಗೊತ್ತು..

15 ವರ್ಷದ ಬಾಲಕನಾಗಿರುವಾಗಲೇ ತಂದೆ-ತಾಯಿ ಕಳೆದುಕೊಂಡಿರುವ ಶಾರುಖ್, "ನನ್ನ ಮಕ್ಕಳು ನನ್ನ ರೀತಿ ತಂದೆ ಪ್ರೀತಿ ಕಳೆದುಕೊಳ್ಳಬಾರದು ಎಂಬ ಕಾಳಜಿ ಮತ್ತು ಬಯಕೆ ಇದೆ. ಆದ್ದರಿಂದ ಆರೋಗ್ಯಕರ ಮತ್ತು ಸಂತೋಷದ ಜೀವನ ನಡೆಸಲು ಹೆಚ್ಚು ವ್ಯಾಯಾಮ ಮಾಡುತ್ತೇನೆ" ಎಂದಿದ್ದಾರೆ.

ಮದ್ಯಪಾನ ಮತ್ತು ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ

ಮದ್ಯಪಾನ ಮತ್ತು ಧೂಮಪಾನ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ತಿಳಿದು ಸಹ ಹಲವರು ವ್ಯಸನಿಗಳಾಗುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಶಾರುಖ್ ಖಾನ್ ಅವರ ಈ ನಿರ್ಧಾರ ತಮ್ಮ ಮಕ್ಕಳೊಂದಿಗೆ ಮತ್ತು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಎಂಬ ಬಹುಮುಖ್ಯ ವಿಷಯ ಎಲ್ಲರ ಗಮನಕ್ಕೆ ಬಂದರೆ, ಬಹುಶಃ ಅವರ ಅಭಿಮಾನಿಗಳು ಸಹ ಮದ್ಯಪಾನ ಮತ್ತು ಧೂಮಪಾನ ತ್ಯಜಿಸುವ ಮನಸ್ಸು ಮಾಡಬಹುದು ಅಲ್ಲವೇ?..

English summary
Bollywood Superstar Shah Rukh Khan, a doting father to three, says he is planning to quit smoking and drinking and adopt a healthier lifestyle to enable himself spend more time with his children.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada