ಬಾಲಿವುಡ್ ನಟ ವರುಣ್ ಧವನ್ ಚಿಕ್ಕಮ್ಮ ಕೊರೊನಾ ವೈರಸ್‌ಗೆ ಬಲಿ
ಅಮೆರಿಕದಲ್ಲಿ ನೆಲೆಸಿದ್ದ ಬಾಲಿವುಡ್ ನಟ ವರುಣ್ ಧವನ್ ಅವರ ಚಿಕ್ಕಮ್ಮ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಸುಮಾರು ಎಂಟು ವಾರಗಳಿಂದ ಅವರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರು ಎನ್ನಲಾಗಿದೆ.
ನಟ ವರುಣ್ ಧವನ್ ಈ ದುಃಖಕರ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಚಿಕ್ಕಮ್ಮ ಜತೆಗಿನ ಫೋಟೊವನ್ನು ಹಂಚಿಕೊಂಡಿರುವ ಅವರು, 'ಲವ್ ಯೂ ಮಾಶಿ.. ರಿಪ್' ಎಂದು ಬರೆದಿದ್ದಾರೆ. ಅದರ ಜತೆಗೆ ಗಾಯತ್ರಿ ಮಂತ್ರವನ್ನೂ ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ವರುಣ್ ಧವನ್, ತಮ್ಮ ಸಂಬಂಧಿಯೊಬ್ಬರಲ್ಲಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಬಂದಿದ್ದಾಗಿ ತಿಳಿಸಿದ್ದರು. 'ಅದೀಗ ನಮ್ಮ ಮನೆಗೆ ತೀರಾ ಹತ್ತಿರವಾಗಿಬಿಟ್ಟಿದೆ. ನಿಮಗೆ ಗೊತ್ತಿರುವವರೊಬ್ಬರಿಗೆ ಅದು ಆಗುವವರೆಗೂ ನೀವು ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಅದರ ತೀಕ್ಷ್ಣತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ' ಎಂದು ತಿಳಿಸಿದ್ದಾರೆ.

ವರುಣ್ ಅವರ ಚಿಕ್ಕಮ್ಮನ ಸಾವಿಗೆ ಬಾಲಿವುಡ್‌ನ ತಾರೆಯರು ಸಂತಾಪ ವ್ಯಕ್ತಪಡಿಸಿದ್ದಾರೆ. ನಟಿಯರಾದ ದಿಯಾ ಮಿರ್ಜಾ, ಸೋಫಿ ಚೌಧರಿ, ಸೋನಲ್ ಚೌಹಾಣ್, ಸೋನಮ್ ಕಪೂರ್, ಮಲೈಕಾ ಕಪೂರ್, ನುಶ್ರತ್ ಬರೂಚಾ ಮುಂತಾದವರು ಆಘಾತ ವ್ಯಕ್ತಪಡಿಸಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.
'ಕೋವಿಡ್ ಎಷ್ಟು ಕ್ರೂರಿಯೆಂದರೆ, ಚಿಕ್ಕಮ್ಮನ ಮಗಳು ಪ್ರತಿದಿನ ಆಸ್ಪತ್ರೆಯ ಹೊರಗೆ ಕಾರ್‌ನಲ್ಲಿ ಕುಳಿತುಕೊಂಡು ಆಕೆಗಾಗಿ ಪ್ರಾರ್ಥಿಸುತ್ತಿದ್ದಳು. ಆದರೆ ಆಸ್ಪತ್ರೆಯ ಒಳಗೆ ಹೋಗಿ ಅಮ್ಮನನ್ನು ನೋಡಲು ಅವಕಾಶವಿರಲಿಲ್ಲ' ಎಂದು ವರುಣ್ ಸಂಬಂಧಿ, ನಿರ್ದೇಶಕ ಕುನಾಲ್ ಕೊಹ್ಲಿ ತಿಳಿಸಿದ್ದಾರೆ.


Click it and Unblock the Notifications










