3 ವರ್ಷದಲ್ಲಿ 7 ಫ್ಲಾಪ್, ₹800 ಕೋಟಿ ನಷ್ಟ, ಆದರೂ ಕೈ ತುಂಬಾ ಸಿನಿಮಾ; ಯಾರೀ ನಟ?
ಒಂದು ಕಾಲದಲ್ಲಿ ಈ ಸ್ಟಾರ್ ನಟಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗುತ್ತಿತ್ತು. ನಿರ್ಮಾಪಕರಿಗೆ ಈ ನಟನ ಡೇಟ್ಸ್ ಸಿಗೋದೇ ಕಷ್ಟ ಅನ್ನುವಂತಹ ಸ್ಥಿತಿಯಿತ್ತು. ನಿರಂತರವಾಗಿ ಹಿಟ್ ಸಿನಿಮಾಗಳನ್ನು ಕೊಟ್ಟುತ್ತಾ ಬಂದಿದ್ದ ನಟನ ದಿಢೀರನೇ ಸೋಲಿನ ಸರದಾರ ಎನಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಈ ನಟ ಅಭಿನಯಿಸಿದ ಸಿನಿಮಾಗಳು ಹೀನಾಯವಾಗಿ ಸೋತಿವೆ.
ಯಶಸ್ಸಿನ ಉತ್ತುಂಗದಲ್ಲಿರುವಾಗ ತಾರೆಯರು ತಪ್ಪು ಮಾಡುವುದಕ್ಕೆ ಹೋಗಬಾರದು. ಒಂದೇ ಒಂದು ತಪ್ಪು ಮಾಡಿದರೂ, ವೃತ್ತಿ ಬದುಕಿನಲ್ಲಿ ಹೀನಾಯವಾಗಿ ಸೋಲು ಕಾಣುವ ಸಾಧ್ಯತೆಗಳು ಇರುತ್ತವೆ. ಅಷ್ಟಕ್ಕೂ ನಾವು ಹೇಳುವುದಕ್ಕೆ ಹೊರಟಿರೋ ಆ ನಟ ಮತ್ಯಾರೂ ಅಲ್ಲ ಬಾಲಿವುಡ್‌ನ ಗ್ಯಾರಂಟಿ ಸ್ಟಾರ್ ಅಕ್ಷಯ್ ಕುಮಾರ್. ಇತ್ತೀಚೆಗೆ ಈ ಸ್ಟಾರ್ ನಟನ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದೆ.

ಹಾಗಂತ ಆಫರ್‌ಗಳೇನು ಕಮ್ಮಿ ಆಗಿಲ್ಲ. ಕೈ ತುಂಬಾ ಸಿನಿಮಾಗಳಿಗೆ. ಬಾಲಿವುಡ್ ನಿರ್ಮಾಪಕರು ಅಕ್ಷಯ್ ಕುಮಾರ್ ಜೊತೆ ಸಿನಿಮಾಗಳನ್ನು ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. 40 ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಅಕ್ಷಯ್ ಕುಮಾರ್ ಸೋಲುತ್ತಿರುವುದೇಕೆ? ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಸಿನಿಮಾ ಗೆದ್ದಿಲ್ಲ ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಭಾರತೀಯ ಚಿತ್ರರಂಗದಲ್ಲಿ ಅಕ್ಷಯ್ ಕುಮಾರ್ ಮೂರು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಆರಂಭದ ದಿನಗಳಲ್ಲಿ ಅಕ್ಷಯ್ ಕುಮಾರ್‌ಗೆ ಸಕ್ಸಸ್ ಅಂತ ಸಿಕ್ಕಿದ್ದು ಕಡಿಮೆ. ಮೊದಲ ಹತ್ತು ವರ್ಷ ಗೆಲುವಿಗಿಂತ ಸೋಲನ್ನು ಕಂಡಿದ್ದೇ ಹೆಚ್ಚು. ಆದರೆ, ನಂತರದ ದಿನಗಳು ಅಕ್ಷಯ್ ಕುಮಾರ್‌ಗೆ ಆಶಾದಾಯಕವಾಗಿದ್ದವು. ಆದರೆ, ಇತ್ತೀಚೆಗೆ ಯಾಕೋ ಅವರಿಗೆ ಗೆಲುವು ಸಿಗುತ್ತಿಲ್ಲ. ಅದರಲ್ಲೂ ಕಳೆದ ಮೂರು ವರ್ಷಗಳಲ್ಲಿ ನಿರಂತರ ಸಿಕ್ಕಿದ್ದು ಬರೀ ಸೋಲು.
ಅಕ್ಷಯ್ ಕುಮಾರ್ ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ ಏಳು ಫ್ಲಾಪ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಒಂದಕ್ಕಿಂತ ಒಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ದುರಂತವನ್ನು ಕಂಡಿದೆ. 'ಬಚ್ಚನ್ ಪಾಂಡೆ', 'ಸಾಮ್ರಾಟ್ ಪೃಥ್ವಿರಾಜ್', 'ರಕ್ಷಾ ಬಂಧನ್', 'ರಾಮ್ ಸೇತು', 'ಸೆಲ್ಫಿ', 'ಮಿಷನ್ ರಾಣಿಗಂಜ್' ಹಾಗೂ ಇತ್ತೀಚೆಗೆ ತೆರೆಕಂಡಿರೋ 'ಬಡೇ ಮಿಯ್ಯಾ ಚೋಟೆ ಮಿಯ್ಯಾ' ಸಿನಿಮಾಗಳು ಬಾಲಿವುಡ್‌ಗೆ ಸಿಕ್ಕಾಪಟ್ಟೆ ನಷ್ಟ ಮಾಡಿವೆ.

ಕಳೆದ ಮೂರು ವರ್ಷಗಳಲ್ಲಿ ಅಕ್ಷಯ್ ಕುಮಾರ್ ನಟಿಸಿದ ಒಂದೇ ಒಂದು ಸಿನಿಮಾ ಹಿಟ್ ಲಿಸ್ಟ್ ಸೇರಿದೆ. ಅದು 'ಓ ಮೈ ಗಾಡ್ 2'. ಈ ಸಿನಿಮಾ ಬಿಟ್ಟರೆ, ಮತ್ಯಾವುದೇ ಸಿನಿಮಾವೂ ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದೇ ಇಲ್ಲ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಈ ಏಳು ಸಿನಿಮಾಗಳಿಂದ ನಿರ್ಮಾಪಕರು ಸುಮಾರು 800 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾವನ್ನು 300 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ, ಗಳಿಕೆ ಮಾಡಿದ್ದು ಕೇವಲ 90 ಕೋಟಿ ರೂಪಾಯಿ. ಹಾಗೇ ಇತ್ತೀಚೆಗೆ ತೆರೆಕಂಡ 'ಬಡೇ ಮಿಯ್ಯಾ ಚೋಟೆ ಮಿಯ್ಯಾ' ಸಿನಿಮಾವನ್ನು 350 ಕೋಟಿ ರೂಪಾಯಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ, ಗಳಿಸಿದ್ದು ಬರೀ 100 ಕೋಟಿ ರೂಪಾಯಿ.
ಆದರೆ, ಇಷ್ಟೊಂದು ಫ್ಲಾಪ್‌ಗಳನ್ನು ಕೊಟ್ಟಿದ್ದರೂ, ಅಕ್ಷಯ್ ಕುಮಾರ್‌ಗೆ ಸಿನಿಮಾಗಳ ಕೊರತೆ ಏನಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಅಕ್ಷಯ್ ಕುಮಾರ್ ನಟಿಸಿದ ಬರೋಬ್ಬರಿ 10 ಸಿನಿಮಾಗಳು ರಿಲೀಸ್ ಆಗಲಿವೆ. ಅದರಲ್ಲಿ ಸೂರರೈ ಪೋಟ್ರು ಸಿನಿಮಾ ಹಿಂದಿ ರಿಮೇಕ್ 'ಸರ್ಫಿರಾ', 'ಸಿಂಗಂ ಅಗೈನ್', 'ಖೇಲ್ ಖೇಲ್ ಮೇ', 'ಸ್ಕೈ ಫೋರ್ಸ್', 'ಕಣ್ಣಪ್ಪ', 'ಜಾಲಿ ಎಲ್‌ಎಲ್‌ಬಿ 3', 'ವೆಲ್‌ಕಮ್ ಟು ದಿ ಜಂಗಲ್', 'ಶಂಕರ','ಹೇರಾ ಪೇರಿ 3', 'ವೇದಾತ್ ಮರಾಠೆ ವೀರ್ ದೌಡ್ಲೆ ಸಾತ್' (ಮರಾಠಿ) ಸಿನಿಮಾಗಳಿವೆ. ಮುಂದಿನ ಎರಡು ವರ್ಷ ಸಕ್ಸಸ್ ಸಿಗುವ ನಿರೀಕ್ಷೆಯಿದೆ.


Click it and Unblock the Notifications











