ಮದುವೆ ಬಳಿಕ ಆಲಿಯಾ ಭಟ್‌ ಕೈ ಹಿಡಿದ ಅದೃಷ್ಟ: ಹಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ

ಆಲಿಯಾ ಭಟ್ ಬಾಲಿವುಡ್‌ನ ನಂಬರ್‌ ಒನ್ ನಟಿ. ಈಕೆ ಮುಟ್ಟಿದ ಸಿನಿಮಾಗಳೆಲ್ಲಾ ಬಾಕ್ಸಾಫೀಸ್‌ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಬಾಚಿಕೊಂಡಿವೆ. ಇತ್ತೀಚೆಗೆ ತೆರೆಕಂಡ ಎರಡು ಸಿನಿಮಾಗಳೂ ಕೂಡ ಬಾಕ್ಸಾಫೀಸ್ ಅನ್ನು ಚಿಂದಿ ಮಾಡಿವೆ. 'RRR' ಹಾಗೂ 'ಗಂಗೂಬಾಯಿ ಕಾಠಿಯಾವಾಡಿ' ಎರಡೂ ಸಿನಿಮಾಗಳೂ ಬಾಕ್ಸಾಫೀಸ್ ಸಕ್ಸಸ್ ಕಂಡಿವೆ.

ಇದೇ ಯಶಸ್ಸಿನ ಬೆನ್ನಲ್ಲೇ ಆಲಿಯಾ ಭಟ್ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದಾರೆ. ಗೆಳೆಯ ರಣ್‌ಬೀರ್ ಕಪೂರ್‌ರನ್ನು ವಿವಾಹವಾಗಿದ್ದು, ಆಲಿಯಾ ಭಟ್ ಖುಷಿಯಾಗಿದ್ದಾರೆ. ಇದೇ ವೇಳೆ ಆಲಿಯಾ ಭಟ್‌ಗೆ ಹಾಲಿವುಡ್‌ ಸಿನಿಮಾಗೂ ಆಫರ್ ಸಿಕ್ಕಿದ್ದು, ಮೊದಲ ಸಿನಿಮಾದ ಶೂಟಿಂಗ್ ಕೂಡ ಆರಂಭ ಆಗಿದೆ.

ಬಾಲಿವುಡ್ ಜೊತೆಗೆ ಆಲಿಯಾ ಹಾಲಿವುಡ್‌ ಸಿನಿಮಾ ಜರ್ನಿ ಆರಂಭ ಆಗಿದೆ. ಇದೇ ವೇಳೆ ಮೊದಲ ಹಾಲಿವುಡ್ ಸಿನಿಮಾ ಬಗ್ಗೆ ಭಯ ಆಗುತ್ತಿದೆ ಎಂದು ಆಲಿಯಾ ಭಟ್ ಬರೆದುಕೊಂಡಿದ್ದಾರೆ. ಹಾಗಿದ್ದರೆ ಆಲಿಯಾ ಭಟ್ ಮೊದಲ ಹಾಲಿವುಡ್ ಸಿನಿಮಾ ಯಾವುದು? ಯಾವಾಗಿಂದ ಶೂಟಿಂಗ್ ಆರಂಭ? ಎಂದು ತಿಳಿದುಕೊಳ್ಳಲು ಮುಂದೆ ಓದಿ.

ಮೊದಲ ಹಾಲಿವುಡ್ ಸಿನಿಮಾ ಯಾವುದು?

ಮೊದಲ ಹಾಲಿವುಡ್ ಸಿನಿಮಾ ಯಾವುದು?

ಆಲಿಯಾ ಭಟ್ ಮೊದಲ ಹಾಲಿವುಡ್ ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ಅದುವೇ 'ಹಾರ್ಟ್ ಆಫ್ ಸ್ಟೋನ್'. ಒಂದು ದಿನಗಳ ಹಿಂದಷ್ಟೇ ಈ ಸಿನಿಮಾವನ್ನು ಅನೌನ್ಸ್ ಮಾಡಲಾಗಿತ್ತು. ಈಗ 'ಹಾರ್ಟ್ ಆಫ್ ಸ್ಟೋನ್' ತಂಡವನ್ನು ಆಲಿಯಾ ಭಟ್ ಸೇರಿಕೊಂಡಿದ್ದಾರೆ. ಮದುವೆಗೂ ಮುನ್ನವೇ ತನ್ನ ಮುಂದಿನ ಗುರಿ ಹಾಲಿವುಡ್ ಸಿನಿಮಾ ಎಂದು ಹೇಳಿದ್ದರು. ನುಡಿದಂತೆಯೇ ಮೊದಲ ಹಾಲಿವುಡ್‌ ಸಿನಿಮಾದಲ್ಲಿ ಆಲಿಯಾ ಭಟ್ ಬಣ್ಣ ಹಚ್ಚುತ್ತಿದ್ದಾರೆ.

ಆಲಿಯಾ ಭಟ್‌ಗೆ ಭಯ

ಆಲಿಯಾ ಭಟ್ ಹಾಲಿವುಡ್‌ಗೆ ಹಾರಿದ್ದೇನೋ ನಿಜ. ಇದು ಆಲಿಯಾ ಕನಸು ಕೂಡ ಹೌದು. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಶೇರ್ ಮಾಡಿದ್ದಷ್ಟೆ ಅಲ್ಲದೆ, ಭಯ ಆಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. " ನಾನು ನನ್ನ ಮೊದಲ ಹಾಲಿವುಡ್‌ ಸಿನಿಮಾ ನಟಿಸಲು ಹೋಗುತ್ತಿದ್ದೇನೆ. ನನಗೆ ಮತ್ತೆ ನಾನು ಹೊಸಬಳು ಎಂದು ಅನಿಸುತ್ತಿದೆ. ನನಗೆ ತುಂಬಾನೇ ಭಯ ಆಗುತ್ತಿದೆ. ನನಗೆ ವಿಶ್ ಮಾಡಿ." ಎಂದು ಆಲಿಯಾ ತನ್ನ ಫ್ಯಾನ್ಸ್‌ಗೆ ಕೇಳಿಕೊಂಡಿದ್ದಾರೆ.

'ಹಾರ್ಟ್ ಆಫ್ ಸ್ಟೋನ್' ಸ್ಟೋರಿಯೇನು?

'ಹಾರ್ಟ್ ಆಫ್ ಸ್ಟೋನ್' ಸ್ಟೋರಿಯೇನು?

'ಹಾರ್ಟ್ ಆಫ್ ಸ್ಟೋನ್' ಸಿನಿಮಾ ಸಿನಿಮಾ ಒಂದು ತಿಂಗಳ ಹಿಂದಷ್ಟೆ ಅನೌನ್ಸ್ ಆಗಿದೆ. ಇದೊಂದು ಅಮೆರಿಕದ ಗೂಢಾಚಾರಿಯ ಕಥೆ. ರಾಚಲ್ ಸ್ಟೋನ್ ಅನ್ನೋ ಏಜೆಂಟ್ ತಾನು ಕೆಲಸ ಮಾಡುವ ಸಂಸ್ಥೆಯ ಅಪಕಾರಿ ಹಾಗೂ ಮೌಲ್ಯಯುತವಾದ ವಸ್ತುವನ್ನು ಕಳೆದುಕೊಂಡಾಗ, ಆಕೆ ಹೇಗೆ ಕಾರ್ಯ ಪ್ರವೃತ್ತಳಾಗುತ್ತಾಳೆ ಎಂಬುದು ಕಥೆ. ಈ ಸ್ಟೋರಿಯಲ್ಲಿ ಆಲಿಯಾ ಭಟ್‌ಗೆ ಯಾವ ಪಾತ್ರ ಸಿಕ್ಕಿದೆ ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಆದರೆ, ಹಾಲಿವುಡ್ ನಟಿ ಗಾಲ್ ಗಾಬೊಟ್ ಅಂತ ಹಾಲಿವುಡ್ ಸ್ಟಾರ್ ನಟಿಯೊಂದು ಆಲಿಯಾ ಸ್ಕ್ರೀನ್ ಶೇರ್ ಮಾಡಿಕೊಳ್ಳಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಆಲಿಯಾ ಭಟ್ ಸಿನಿಮಾ

ನೆಟ್‌ಫ್ಲಿಕ್ಸ್‌ನಲ್ಲಿ ಆಲಿಯಾ ಭಟ್ ಸಿನಿಮಾ

ಆಲಿಯಾ ಭಟ್ ಮೊದಲ ಹಾಲಿವುಡ್‌ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇರುವುದಿಲ್ಲ. ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ನೆಟ್‌ಫ್ಲಿಕ್ಸ್ ಈ ಸಿನಿಮಾವನ್ನು ವಿಶ್ವದಾದ್ಯಂತ ರಿಲೀಸ್ ಮಾಡಲಿದೆ. ಥಾಮಸ್ ಹಾರ್ಪೆರ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದು, ಚಳಿಗಾಲದಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರೈಬರ್ ಅನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಆಲಿಯಾ ಭಟ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಮಾತು ಕೂಡ ಹೇಳಿಬರುತ್ತಿದೆ.

More from Filmibeat

English summary
Bollywood Actress Alia Bhatt First Hollywood Movie Heart Of Stone Started With Gal Gadot, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X