"ತಂದೆ–ಮಗನ ಜೊತೆ ಮಲಗಿದ್ದ ಏಕೈಕ ನಟಿ": ರೊಚ್ಚಿಗೆದ್ದು 3 ಸಾವಿರ ಕೇಸ್ ದಾಖಲಿಸಿದ ಸೆಲಿನಾ ಜೇಟ್ಲಿ!
ಸ್ವಯಂ ಘೋಷಿತಾ ಬಾಲಿವುಡ್ ವಿಮರ್ಶಕ ಉಮೈರ್ ಸಂಧು ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ಸೆಲಿನಾ ಜೇಟ್ಲಿ ವಿರುದ್ಧ ಉಮೈರ್ ಸಂಧು ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ವಿರುದ್ಧ ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಕಿಡಿಕಾರುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಕೆಟ್ಟದಾಗಿ ಕಮೆಂಟ್ ಮಾಡಿದವರಿಗೆ ಪಾಠ ಕಲಿಸಲೇ ಬೇಕು ಅಂತ ತೀರ್ಮಾನಿಸಿದ್ದಾರೆ. ಉಮೈರ್ ಸಂಧು ಅಂತಹವರ ವಿರುದ್ಧ ಕಾನೂನು ಸಮರ ಸಾರುವುದಕ್ಕೆ ಮುಂದಾಗಿದ್ದಾರೆ.

ಹಾಗಂತ ಕೇವಲ ಉಮೈರ್ ಸಂಧು ಅಷ್ಟೇ ಅಲ್ಲ. ತಮ್ಮ ವಿರುದ್ಧ ಕೆಮೆಂಟ್ ಮಾಡಿದವರ ವಿರುದ್ಧವೂ ಕೇಸ್ ದಾಖಲಿಸಿದ್ದಾರೆ. ಈ ವಿಷಯವನ್ನು ಸ್ವತ: ಸೆಲಿನಾ ಜೇಟ್ಲಿಯೇ ಬಹಿರಂಗಪಡಿಸಿದ್ದಾರೆ. ಈಗಾಗಲೇ ಸುಮಾರು 3 ಸಾವಿರ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತೆಂದು ಹೇಳಿದ್ದಾರೆ.
ಉಮೈರ್ ಸಂಧು ಇತ್ತೀಚೆಗೆ ಸೆಲಿನಾ ಜೇಟ್ಲಿ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿದ್ದರು. " ಬಾಲಿವುಡ್‌ನಲ್ಲಿ ತಂದೆ ಮತ್ತು ಮಗ (ಫಿರೋಜ್ ಖಾನ್ ಮತ್ತು ಫರ್ದೀನ್ ಖಾನ್) ಜೊತೆ ಹಲವು ಬಾರಿ ಮಲಗಿದ್ದ ಏಕೈಕ ನಟಿ ಸೆಲಿನಾ ಜೇಟ್ಲಿ" ಎಂದು ಟ್ವೀಟ್ ಮಾಡಿದ್ದರು. ಇದು ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಟ್ವೀಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಸೆಲಿನಾ ಜೇಟ್ಲಿ ಸಿಡಿದೆದ್ದಿದ್ದರು. " ಮಿಸ್ಟರ್ ಸಂಧು.. ಮೊದಲು ನೀನು ಒಳ್ಳೆ ಡಾಕ್ಟರ್ ಹತ್ತಿರ ಹೋಗಿ ತೋರಿಸಿಕೋ.. ಆ ಬಳಿಕಷ್ಟೇ ಲೈಂಗಿಕ ಸಮಸ್ಯೆಯಿಂದ ಮುಕ್ತರಾಗುತ್ತೀರಿ" ಎಂದು ಕಿಡಿ ಕಾರಿದ್ದರು.

ಇಷ್ಟೇ ಅಲ್ಲದೆ ನಕಲಿ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಟ್ವಿಟರ್‌ಗೂ ಟ್ಯಾಗ್ ಮಾಡಿ ದೂರು ಸಲ್ಲಿಸಿದ್ದರು. ಸದ್ಯ ಉಮೈರ್ ಸಂಧು ಹಾಗೂ ಸೆಲಿನಾ ಜೇಟ್ಲಿ ವಿರುದ್ಧ ಕಮೆಂಟ್ ಮಾಡಿರುವವರ ವಿರುದ್ಧ ಸಮರ ಸಾರಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟಿಗಳ ವಿರುದ್ಧ ಅವಹೇಳಕಾರಿ ಪೋಸ್ಟ್ ಮಾಡೋದು ಹೊಸತೇನಲ್ಲ. ಆದರೆ, ಕೆಲವೊಮ್ಮೆ ಗಡಿದಾಟಿ ಕಮೆಂಟ್‌ಗಳನ್ನು ಮಾಡುತ್ತಾರೆ. ಇದರ ವಿರುದ್ಧ ಸೆಲಿನಾ ಜೇಟ್ಲಿ ಕಿಡಿಕಾರಿದ್ದಾರೆ. ವೈಯಕ್ತಿಕ ಜೀವನದ ಬಗ್ಗೆ ಕಮೆಂಟ್ ಮಾಡುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಸೆಲಿನಾ ಜೇಟ್ಲಿ ಈ ಹಿಂದೆಯೇ ಸಂದರ್ಶನದಲ್ಲಿ ಫಿರೋಜ್ ಖಾನ್ ಬಗ್ಗೆ ಮಾತಾಡಿದ್ದರು. ಫಿರೋಜ್ ಖಾನ್ ಉತ್ತಮ ಸ್ನೇಹಿತ ಹಾಗೂ ತಂದೆಯಂತೆ ಎಂದು ಹೇಳಿದ್ದರು. "ಫಿರೋಜ್ ಖಾನ್ ಯಾವಾಗಲೂ ನನ್ನನ್ನು ಸೆಲಿನ್ ಎಂದೇ ಕರೆಯುತ್ತಿದ್ದರು" ಎಂದು ಹೇಳಿದ್ದರು.


Click it and Unblock the Notifications










