ದೀಪಿಕಾ ಸಹಿಯಲ್ಲೇ ಇದೆ ಏಳು–ಬೀಳಿನ ಕಹಿ ಸತ್ಯ: 'D'&'W' ಅಕ್ಷರದಲ್ಲೇ ಭವಿಷ್ಯದ ಗುಟ್ಟು!
ಸೆಲೆಬ್ರೆಟಿಗಳು ಅಂದರೇನೆ ಹಾಗೇ. ಅವರು ಕೂತರೂ ನಿಂತರೂ ಸುದ್ದಿಯಾಗುತ್ತಾರೆ. ಇನ್ನೊಂದು ಕಡೆ ತಾರೆಯರ ಅಭಿಮಾನಿಗಳಿಗೆ ಅವರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು ಅನ್ನೋ ಹಂಬಲ. ಸ್ಟಾರ್‌ಗಳು ಧರಿಸೋ ಕಾಸ್ಟ್ಯೂಮ್, ಮೇಕಪ್, ಹೇರ್‌ಸ್ಟೈಲ್ ಎಲ್ಲವನ್ನೂ ಕುತೂಹಲದಿಂದಲೇ ನೋಡುತ್ತಾರೆ. ಮತ್ತೆ ಕೆಲವರಿಗೆ ಸಖತ್ ಇಂಟ್ರೆಸ್ಟಿಂಗ್ ಅಂತ ಅನಿಸೋದು ತಾರೆಯರ ಸಹಿ.
ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ಕೋಟ್ಯಾಂತರ ಫ್ಯಾನ್ಸ್ ಅಲ್ಲಿ ಕೆಲವರಿಗೆ ದೀಪಿಕಾ ಎಜ್ಯುಕೇಶನ್, ದೀಪಿಕಾ ಬಾಲ್ಯ ಎಲ್ಲವನ್ನೂ ತಿಳಿದುಕೊಳ್ಳಬೇಕು ಅನ್ನೋ ಹಂಬಲ. ಅದರಲ್ಲಿ ಕೆಲವರಿಗೆ ದೀಪಿಕಾ ಹೇಗೆ ಸಹಿ ಮಾಡುತ್ತಾರೆ ಅನ್ನೋ ಕುತೂಹಲವಿರುತ್ತೆ.

ಸೆಲೆಬ್ರೆಟಿಗಳ ಲೈಫ್ ಜರ್ನಿಯಂತೆ ಅವರ ಸಹಿ ಕೂಡ ಅಷ್ಟೇ ಸುಂದರವಾಗಿರುತ್ತೆ. ಇವರ ಸಿಗ್ನೇಚರ್‌ನಲ್ಲೇ ಸಕ್ಸಸ್ ಅನ್ನು ಹುಡುಕುವವರೂ ಇದ್ದಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ದೀಪಿಕಾ ಪಡುಕೋಣೆ ಸಹಿ ಹರಿದಾಡುತ್ತಿದೆ. ಈ ಸಹಿಯ ಬಗ್ಗೆ ಹಲವರು ವಿಶ್ಲೇಷಣೆ ಕೂಡ ಮಾಡಿದ್ದಾರೆ.
ದೀಪಿಕಾ ಪಡುಕೋಣೆ ಸಹಿ ಹೇಗಿದೆ?
ಬಾಲಿವುಡ್ ಪದ್ಮಾವತಿ, ಗುಳಿ ಕೆನ್ನೆಯ ಚೆಲುವೆ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ದಕ್ಷಿಣ ಭಾರತ ಮೂಲಕ ನಟಿಯೊಬ್ಬರು ಬಾಲಿವುಡ್‌ನಲ್ಲಿ ನಂ 1 ನಟಿಯಾಗಿ ಮರೆಯುತ್ತಿದ್ದಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಸಿನಿಮಾ 'ಪಠಾಣ್' ಬಾಲಿವುಡ್ ಬಾಕ್ಸಾಫೀಸ್‌ನ ಎಲ್ಲಾ ದಾಖಲೆಗಳನ್ನೂ ಮುರಿದು ಮುನ್ನುಗಿದೆ. ಈ ಬೆನ್ನಲ್ಲೇ ಈ ನಟಿಯ ಸಹಿಯ ಪೋಟೊವೊಂದು ಹರಿದಾಡುತ್ತಿದೆ.

ದೀಪಿಕಾ ಪಡುಕೋಣೆ ಸಹಿ ನೋಡಿದಾಗ ನೀಟ್ ಅಂಡ್ ಕ್ಲಿಯರ್ ಅಂತ ಅನಿಸುತ್ತೆ. ಇದೇ ದೀಪಿಕಾ ಸಹಿಯನ್ನು ಇಟ್ಟುಕೊಂಡು ವಿಶ್ಲೇಷಣೆ ಮಾಡಲಾಗಿದೆ. ದೀಪಿಕಾ ಸಹಿ ಮಾಡಿದ ಶೈಲಿ, ಅಕ್ಷರಗಳ ವಿನ್ಯಾಸ ಹ್ಯಾಂಡ್ ರೈಟಿಂಗ್ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅವರ ಸ್ವಭಾವ, ಸಕ್ಸಸ್ ಎಲ್ಲವನ್ನೂ ವಿವರಣೆ ಮಾಡಲಾಗಿದೆ.
ದೀಪಿಕಾ 'ಸಹಿ'ಯ ಹೈಲೈಟ್ ಏನು?
ದೀಪಿಕಾ ಪಡುಕೋಣೆ ಸಹಿಯಲ್ಲಿಯೇ ಆಕೆಯ ಸಕ್ಸಸ್ ಅಡಗಿದೆ. ಸಿಗ್ನೇಚರ್ ಎಕ್ಸ್‌ಪರ್ಟ್ ಪ್ರಕಾರ, ದೀಪಿಕಾ ಉತ್ತಮ ಲೀಡರ್‌ಶಿಫ್ ಕ್ವಾಲಿಟಿ ಇರುವ ನಟಿ. ಅವರ ಫೀಲ್ಡ್‌ನಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ. ಅಲ್ಲದೆ ಹೊಸ ಬದಲಾವಣೆ ತರುತ್ತಾರೆ. ಟಾಪ್‌ಗೆ ಏರುವುದಕ್ಕೆ ಎಷ್ಟು ಕಷ್ಟ ಬೇಕಾದರೂ ಪಡುತ್ತಾರೆ. ಈ ಹಿಂದೆ ಸಿಕ್ಕ ಯಶಸ್ಸಿಗಿಂತ ಇನ್ನೊಂದು ಹಂತಕ್ಕೆ ಏರುವುದಕ್ಕೆ ಪ್ರಯತ್ನ ಪಡುತ್ತಲೇ ಇರುತ್ತಾರೆ.
ದೀಪಿಕಾ ಪಡುಕೋಣೆ ತುಂಬಾ ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಆದರೆ, ಎಲ್ಲದನ್ನೂ ಕಿವಿಗೆ ಹಾಕಿಕೊಳ್ಳುವುದಕ್ಕೆ ಹೋಗುವುದಿಲ್ಲ. ವಿವಾದ, ಸಲಹೆ, ಟೀಕೆಗಳನ್ನು ಕೇಳಿಸಿಕೊಳ್ಳುವುದಿಲ್ಲ. ಎಚ್ಚರಿಕೆ ಕೊಡುವ ಜನರ ಬಗ್ಗೆ ತಲೆನೂ ಕೆಡಿಸಿಕೊಳ್ಳದ ಪ್ರವೃತ್ತಿ ಎಂದು ಸಿಗ್ನೇಚರ್ ಸ್ಪೆಷಲಿಸ್ಟ್ ಪರೇಶ್ ಚಿಟ್ನಿಸ್ ಬ್ಲಾಗ್‌ವೊಂದರಲ್ಲಿ ಬರೆದಿದ್ದಾರೆ.
'W' ಅಂತ ಕಾಣುವ 'D' ವಿಶೇಷತೆಯೇನು?
ದೀಪಿಕಾ ಪಡುಕೋಣೆ ಮೊದಲನೇ ಅಕ್ಷರ 'D' ನೋಡುವುದಕ್ಕೆ 'W' ಅಂತ ಕಾಣುತ್ತೆ. ಇದರ ಪ್ರಕಾರ, ದೀಪಿಕಾಗೆ ರಿಲೇಷನ್‌ಶಿಪ್‌ನಲ್ಲಿ ಇರುವುದಕ್ಕೆ ಇಷ್ಟ. ಆದರೆ, ಕೆಲವು ದಿನಗಳ ಬಳಿಕ ಅದರಿಂದ ಹೊರಬರುತ್ತಾರೆ. ಹಾಗೇ ಸಂಬಂಧವನ್ನು ರಹಸ್ಯವಾಗಿಡುವುದಕ್ಕೆ ಇಷ್ಟ ಪಡುತ್ತಾರೆ.
'P' ಪದ ದೊಡ್ಡದಾಗಿದ್ದು, ಕುಟುಂಬವನ್ನು ಬಯಸುತ್ತಾರೆ. ಫ್ಯಾಮಿಲಿ ಲೈಫ್ ಬಗ್ಗೆ ಸಾಕಷ್ಟು ಪ್ಲ್ಯಾನ್ ಇಟ್ಟುಕೊಂಡಿದ್ದಾರೆ. ಅಲ್ಲದೆ ದೀಪಿಕಾ ಪಡುಕೋಣೆ ತುಂಬಾನೇ ಎಮೋಷನಲ್ ವ್ಯಕ್ತಿ. ಇವರು ಕಾಂಪ್ರಮೈಸ್ ಆಗುವ ವ್ಯಕ್ತಿಯಲ್ಲ. ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಎಂದು ಎಕ್ಸ್‌ಪರ್ಟ್‌ಗಳು ಹೇಳುತ್ತಾರೆ. ಒಟ್ಟಾರೆ, ದೀಪಿಕಾ ಪಡುಕೋಣೆ ನೋಡಿ ಆಕೆಯದ್ದು ಟಫ್ ಕ್ಯಾರೆಕ್ಟರ್ ಎಂದು ಹೇಳಲಾಗಿದೆ.


Click it and Unblock the Notifications











