ವಿಲಕ್ಷಣ ಕಥೆಯುಳ್ಳ ಸೈಕಾಲಜಿಕಲ್ ಕಿರುಚಿತ್ರ 'ಮನೋರಂಜನ್' ರಿಲೀಸ್

ಬಾಲಿವುಡ್ ನಟಿ ಗುಲ್ ಪನಾಗ್ ಅಭಿನಯದ ಕಿರುಚಿತ್ರ 'ಮನೋರಂಜನ್' ರಿಲೀಸ್ ಆಗಿದೆ . ಗುಲ್ ಪನಾಗ್ ನಟಿಸಿ, ನಿರ್ಮಿಸಿದ ಕಿರುಚಿತ್ರ ಇದಾಗಿದೆ. ಇದೊಂದು ಪಕ್ಕಾ ಸೈಕಾಲಜಿಕಲ್, ಸಸ್ಪೆಸ್ ಸಿನಿಮಾ. ಈ ಸಿನಿಮಾದಲ್ಲಿ ಗುಲ್ ಪನಾಗ್ 'ಲಲಿತಾ' ಎಂಬ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಿರು ಚಿತ್ರ ಈಗ ಯೂಟ್ಯೂಬ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ.

'ಅಂಕುರ್ ಅರೋರಾ ಮರ್ಡರ್ ಕೇಸ್' ಮತ್ತು 'ಸಮ್ಮರ್ 2007'ನಂತಹ ವಿಮರ್ಶಾತ್ಮಕ ಸಿನಿಮಾಗಳನ್ನು ನಿರ್ದೇಶಿಸಿರುವ ಸುಹೈಲ್ ತಾತಾರಿ ಈ ಚಿತ್ರದ ನಿರ್ದೇಶಕ. ರಾಜಸ್ಥಾನದ ಒಂದು ಸಣ್ಣ ಹಳ್ಳಿಯಲ್ಲಿ ಸಾಧಾರಣ ಜೀವನ ನಡೆಸುತ್ತಿರುವ ಲಲಿತಾಳ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಅನಿರೀಕ್ಷಿತ ಅತಿಥಿಯ ಆಗಮನದಿಂದ ಪ್ರವಾಸ ಹೊರಟ ಕುಟುಂಬದ ಯೋಜನೆ ಹೇಗೆ ತಲೆಕೆಳಗಾಗುತ್ತೆ. ಹಲವು ನಿಗೂಢ ಘಟನೆ ಎದುರಾಗುತ್ತದೆ. ಈ ಸನ್ನಿವೇಶಗಳು ಪ್ರೇಕ್ಷಕರು ಥ್ರಿಲ್ ನೀಡಲಿದೆ ಎನ್ನುತ್ತಿದೆ ಚಿತ್ರತಂಡ.

ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರಿಗೆ 'ಮನೋರಂಜನ್' ಕಿಕ್

'ಮನೋರಂಜನ್' ಕಿರುಚಿತ್ರದ ನಾಯಕಿ ಲಿಲಿತಾ ( ಗುಲ್‌ ಪನಾಗ್) ಪಾತ್ರ ಪ್ರತಿಯೊಬ್ಬ ಪ್ರೇಕ್ಷಕನನ್ನೂ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಹಾಗಂತ ಈ ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾದಲ್ಲಿ ' ಹಾರಿಬಿದ್ದು ದಿಗಿಲುಗೊಳ್ಳುವ' ಸನ್ನಿವೇಶಗಳು ಇರುವುದಿಲ್ಲ. ಆದರೂ ನಿಗೂಢತೆ ಮತ್ತು ಭಯದ ಸನ್ನಿವೇಶಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಕಿರುಚಿತ್ರವೊಂದು ಈ ಮಟ್ಟಿಗೆ ಯಶಸ್ವಿಯಾಗಲು ಲೇಖಕ, ನಟ-ಲೇಖಕ, ಸುಖಮನಿ ಸಾದನಾ ಅವರಿಗೆ ಸಲ್ಲುತ್ತದೆ. ಸುಖಮನಿ ಬಾಲಿವುಡ್ ಚಲನಚಿತ್ರಗಳು, ಒಟಿಟಿ ವೇದಿಕೆಗಳಿಗೆ ಕಥೆ ಬರೆದ ಅನುಭವವಿದೆ. ಇದರೊಂದಿಗೆ ಹಲವಾರು ಸುಪ್ರಸಿದ್ಧ ವೆಬ್ ಸೀರೀಸ್‍ಗಳಲ್ಲೂ ನಟಿಸಿದ್ದಾರೆ.

Bollywood actress gul panag acted short film manoranjan released

ರೈಲ್ವೆ ಸ್ಟೇಶನ್ ಮಾಸ್ಟರ್ ಆಗಿರುವ ಪತಿ ಸತ್ಯನಾರಾಯಣ ಜೊತೆ ಲಲಿತಾಳ ಸಹಜ ಸಂಬಂಧದಿಂದ ಶುರುವಾಗಿ 19-ವರ್ಷದ ಮನೆಯ ಅತಿಥಿ ಚಿರಾಗ್‍ನೊಂದಿಗಿನ ಆಕೆಯ ಆತ್ಮವಿಶ್ವಾಸದ ನಡೆಯವರೆಗೂ ಸಿನಿಮಾ ಥ್ರಿಲ್ಲಿಂಗ್ ಅಂತ ಅನಿಸುತ್ತೆ. ನಿಗೂಢತೆಯನ್ನು ಕಾಪಾಡಿಕೊಳ್ಳುತ್ತಲೇ ಲಲಿತಾಳ ವೈವಿಧ್ಯಮಯ ಸಂಬಂಧಗಳ ಮೂಲಕ ಯಶಸ್ವಿಯಾಗಿ ಹಾದುಹೋಗುವ ಎಂದು ಚಿತ್ರತಂಡ ಹೇಳಿಕೊಂಡಿದೆ.

'ಮನೋರಂಜನ್' ಕಿರುಚಿತ್ರದ ಬಗ್ಗೆ ಏನಂತಾರೆ ಗುಲ್ ಪನಾಗ್

'ಮನೋರಂಜನ್' ಚಿತ್ರ ನಟಿ, ನಿರ್ಮಾಪಕಿ ಗುಲ್ ಪನಾಗ್‌ಗೆ ಖುಷಿ ಕೊಟ್ಟಿದೆ. ನಟಿ ಗುಲ್ ಪನಾಗ್, " ಈ ಚಿತ್ರವು ಕೊನೆಯ ಫ್ರೇಮ್‍ವರೆಗೂ ಪ್ರೇಕ್ಷಕರ ಆಸಕ್ತಿಯನ್ನು, ಕೌತುಕತೆಯನ್ನು ಹಿಡಿದಿಡುವಂತಹ ಸಾಮರ್ಥ್ಯ ಹೊಂದಿದೆ. ಭಯಹುಟ್ಟಿಸುವ ಚಿತ್ರಗಳಲ್ಲಿ ಖಂಡಿತವಾಗಿಯೂ ಇದೊಂದು ತಾಜಾ ಸೇರ್ಪಡೆ. ಪ್ರೇಕ್ಷಕರು ಈ ಚಿತ್ರದ ಪ್ರತಿಯೊಂದು ಕ್ಷಣವನ್ನೂ ಆನಂದಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಎಂದು ಹೇಳಿದ್ದಾರೆ.

Bollywood actress gul panag acted short film manoranjan released

ಕಿರುಚಿತ್ರದ ನಿರ್ದೇಶಕ ಸುಹೈಲ್ ತಾತಾರಿ ಕೂಡ ಲಲಿತಾ ಪಾತ್ರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. "ಲಲಿತ ಎಂಬ ಪಾತ್ರದ ಸುತ್ತ ಹೆಣೆದ ಅತಿಸೂಕ್ಷ್ಮವಾದ ಕಥೆಯಿದು. ಈ ಚಿತ್ರದಲ್ಲಿ ನಿಗೂಢತೆಯು ನಿಧಾನವಾಗಿ ಮತ್ತು ಹಂತ ಹಂತವಾಗಿ ಅನಾವರಣಗೊಳ್ಳುತ್ತಾ ಹೋಗುತ್ತೆ. ಪ್ರೇಕ್ಷಕರನ್ನು ಕೊನೆಯವರೆಗೂ ತಬ್ಬಿಬ್ಬುಗೊಳ್ಳುವಂತೆ ಮಾಡುತ್ತೆ." ಎಂದಿದ್ದಾರೆ. "ಗುಲ್ ಪನಾಗ್ 'ಮನೋರಂಜನ್‍' ಮೂಲ ಪರಿಕಲ್ಪನೆಯೊಂದಿಗೆ ಬಂದಿದ್ದರು. ಬಳಿಕ ಅದು ಹೊಸ ರೂಪ ಪಡೆಯುತ್ತಾ ಹೋಯಿತು. ಈ ಪರಿಕಲ್ಪನೆಯನ್ನು ಕೇಳುತ್ತಲೇ ನಾನು ಕೂಡಲೇ ನನ್ನ ಸಮ್ಮತಿ ಸೂಚಿಸಿಬಿಟ್ಟೆ, ಏಕೆಂದರೆ ಈ ವರ್ಗದ ಚಿತ್ರಗಳು ನನ್ನ ನೆಚ್ಚಿನ ಚಿತ್ರಗಳಾಗಿವೆ." ಎನ್ನುತ್ತಾರೆ ಲೇಖಕ ಸುಖಮನಿ.

More from Filmibeat

English summary
Bollywood actress Gul Panag acted short film manoranjan released. It is completly a psychological short movie. Sohail Thatharia is the director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X