200 ಕೋಟಿ ಸುಲಿಗೆ ಪ್ರಕರಣ: ದುಬೈ ಹಾರಲು ಹೊರಟಿದ್ದ ಜಾಕ್ವೆಲಿನ್ ತಡೆದ ಏರ್‌ಪೋರ್ಟ್‌ ಅಧಿಕಾರಿಗಳು

ಶ್ರೀಲಂಕಾದ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. 200 ಕೋಟಿ ವಂಚನೆ ಕೇಸ್‌ನಲ್ಲಿ ಈ ಬಾಲಿವುಡ್‌ ಬ್ಯೂಟಿಯ ಹೆಸರು ತಳುಕು ಹಾಕಿಕೊಳ್ಳುತ್ತಲೇ ವಿವಾದಕ್ಕೆ ಸಿಲುಕಿದ್ದಾಳೆ. ಪ್ರಭಾವಿಗಳನ್ನು ನಂಬಿಸಿ ಕೋಟಿ ಕೋಟಿ ಹಣ ಸುಲಿಗೆ ಮಾಡುತ್ತಿದ್ದ ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಹೆಸರು ತಳುಕು ಹಾಕಿಕೊಂಡಿದೆ. ಈಗ ಮುಂಬೈ ಏರ್‌ಪೋರ್ಟ್‌ನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್‌ ಅನ್ನು ತಡೆದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಜಾಕ್ವೆಲಿನ್ ಫರ್ನಾಂಡೀಸ್ ಇತ್ತೀಚೆಗೆ ಕಿಚ್ಚ ಸುದೀಪ್ ನಟಿಸುತ್ತಿರುವ ವಿಕ್ರಾಂತ್ ರೋಣ ಮೂಲಕ ಸ್ಯಾಂಡಲ್‌ವುಡ್‌ಗೂ ಎಂಟ್ರಿಕೊಟ್ಟಿದ್ದಳು. ಕಿಚ್ಚನೊಂದಿಗೆ ಹೆಜ್ಜೆ ಹಾಕಿ ಹೋಗಿರುವ ಈ ನಟಿ ಕನ್ನಡದಲ್ಲೇ ಮಾತಾಡಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದಳು. ಇದೇ ನಟಿ ಈಗ ವಿವಾದಕ್ಕೆ ಸಿಲುಕಿದ್ದು, 200 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧ ಜಾಕ್ವೆಲೀನ್ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ದುಬೈಗೆ ಹಾರಲು ಹೊರಟಿದ್ದ ನಟಿಯನ್ನು ಮುಂಬೈ ಏರ್‌ಪೋರ್ಟ್‌ನಲ್ಲಿ ತಡೆಯಲಾಗಿತ್ತು.

ದುಬೈಗೆ ಹಾರಲು ಹೊರಟಿದ್ದ ಜಾಕ್ವೆಲಿನ್ ತಡೆದ ಅಧಿಕಾರಿಗಳು

ದುಬೈಗೆ ಹಾರಲು ಹೊರಟಿದ್ದ ಜಾಕ್ವೆಲಿನ್ ತಡೆದ ಅಧಿಕಾರಿಗಳು

ಜಾಕ್ವೆಲಿನ್ ಫರ್ನಾಂಡೀಸ್ ಭಾನುವಾರ (ಡಿಸೆಂಬರ್ 5) ದಂದು ದುಬೈಗೆ ಪ್ರಯಾಣ ಬೆಳೆಸಲು ಮುಂಬೈ ಏರ್‌ಪೋರ್ಟ್‌ಗೆ ಬಂದಿದ್ದಳು. ಈ ವೇಳೆ ಏರ್‌ಪೋರ್ಟ್ ಅಧಿಕಾರಿಗಳು ಜಾಕ್ವೆಲಿನ್ ಅನ್ನು ಕೆಲ ಕಾಲ ತಡೆದು ನಿಲ್ಲಿಸಿದ್ದರು. 200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ತಳುಕು ಹಾಕಿಕೊಂಡಿರುವುದರಿಂದ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಅಕ್ಟೋಬರ್ ಕೊನೆಯ ವಾರ ಜಾಕ್ವೆಲಿನ್‌ಗೆ ಲುಕ್ ಔಟ್ ಸರ್ಕೂಲರ್ ಅನ್ನು ನೀಡಲಾಗಿತ್ತು. ಈ ಸಂಬಂಧ ಏರ್‌ಫೋರ್ಟ್‌ನಲ್ಲಿ ತಡೆದು ನಿಲ್ಲಿಸಲಾಗಿತ್ತು. ಬಳಿಕ ಅಧಿಕಾರಿಗಳು ದುಬೈಗೆ ಪ್ರಯಾಣ ಮಾಡಲು ಅನುಮತಿ ನೀಡಿದ್ದರು.

ದುಬಾರಿ ಕಾರು, ಕುದುರೆ, ಆಭರಣ ಪಡೆದಿದ್ದ ಜಾಕ್

ದುಬಾರಿ ಕಾರು, ಕುದುರೆ, ಆಭರಣ ಪಡೆದಿದ್ದ ಜಾಕ್

ಸುಕೇಶ್ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ದುಬಾರಿ ಉಡುಗೊರೆಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಸುಕೇಶ್ ಹಾಗೂ ಜಾಕ್ವೆಲಿನ್ ಇಬ್ಬರೂ ಕೆಲ ಕಾಲ ಡೇಟಿಂಗ್ ನಡೆಸುತ್ತಿದ್ದಿದ್ದು ಬೆಳಕಿಗೆ ಬಂದಿದೆ. ಈ ವೇಳೆ ಸುಕೇಶ್, ಜಾಕ್ವೆಲಿನ್‌ಗೆ ದುಬಾರಿ ಬಿಎಂಡಬ್ಲ್ಯೂ ಕಾರು, ಅರೇಬಿಯಾದ ಕುದುರೆ, 4 ದುಬಾರಿ ಬೆಲೆ ಬೆಕ್ಕು, ಒಂದು ಫೋನ್ ಹಾಗೂ ಆಭರಣಗಳನ್ನು ನೀಡಿದ್ದನು. ಅಲ್ಲದೆ ಜಾಕ್ವೆಲಿನ್ ಖಾತೆಗೆ ಹಣವನ್ನೂ ವರ್ಗಾವಣೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.

ಇಡಿ ಅಧಿಕಾರಿಗಳಿಂದ 7000 ಪುಟಗಳ ಚಾರ್ಜ್ ಶೀಟ್

ಇಡಿ ಅಧಿಕಾರಿಗಳಿಂದ 7000 ಪುಟಗಳ ಚಾರ್ಜ್ ಶೀಟ್

200 ಕೋಟಿ ವಂಚಕ ಸುಕೇಶ್ ಚಂದ್ರಶೇಖರ್ ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಈ ಸಂಬಂಧ, ಇಡಿ ಅಧಿಕಾರಿಗಳು ಶನಿವಾರ (ಡಿಸೆಂಬರ್ 4) ದಂದು ಸುಮಾರು 7000 ಪುಟಗಳ ಚಾರ್ಜ್ ಶೀಟ್ ಅನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಇದರಲ್ಲಿ ಜಾಕ್ವೆಲಿನ್ ಹಾಗೂ ಸುಕೇಶ್ ಚಂದ್ರಶೇಖರ್ ನಡುವಿನ ಹಣ ವರ್ಗಾವಣೆಯ ಬಗ್ಗೆ ಮಾಹಿತಿ ಕೂಡ ಇದೆ ಎನ್ನಲಾಗಿದೆ. ಈಗಾಗಲೇ ಎರಡು ಬಾರಿ ಸುಕೇಶ್ ವಿಚಾರಣೆ ಮಾಡಲಾಗಿದ್ದು, ಅಧಿಕಾರಿಗಳು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ್ದಾರೆ.

ಸುಕೇಶ್ ಹಾಗೂ ಜಾಕ್ವೆಲಿನ್ ಮುತ್ತಿನ ಫೋಟೊ ಲೀಕ್

ಸುಕೇಶ್ ಹಾಗೂ ಜಾಕ್ವೆಲಿನ್ ಮುತ್ತಿನ ಫೋಟೊ ಲೀಕ್

ಕೆಲವು ದಿನಗಳ ಹಿಂದೆ ಜಾಕ್ವೆಲಿನ್ ಹಾಗೂ ಸುಕೇಶ್ ಚಂದ್ರಶೇಖರ್ ಮುತ್ತಿನ ಫೋಟೋಗಳು ಲೀಕ್ ಆಗಿ ಸಂಚಲನ ಸೃಷ್ಟಿಸಿದ್ದವು. ತನಿಖೆ ವೇಳೆ ಜಾಕ್ವೆಲೀನ್ ಹಾಗೂ ಸುಕೇಶ್ ಇಬ್ಬರು ಡೇಟಿಂಗ್ ಮಾಡುತ್ತಿದ್ದಿದ್ದು ಬೆಳಕಿಗೆ ಬಂದಿತ್ತು. ಆದರೆ, ಜಾಕ್ ಮಾತ್ರ ಡೇಟಿಂಗ್ ವಿಚಾರವನ್ನು ತಿರಸ್ಕರಿಸಿದ್ದಳು. ಆದರೆ, ಸ್ವತ: ಜಾಕ್ವೆಲಿನ್‌ ವಂಚಕ ಸುಕೇಶ್‌ಗೆ ಮುತ್ತಿಡುತ್ತಿರುವ ಫೋಟೋ ವೈರಲ್ ಆಗುತ್ತಿದ್ದಂತೆ ಬಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

More from Filmibeat

English summary
Bollywood actress Jacqueline Fernandez was stopped at Mumbai Airport when she was leaving for Dubai. Later, she was allowed to go.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X