ಟಾಪ್‌ಲೆಸ್ ಆದ ಲಂಕಾ ಬ್ಯೂಟಿ: ಮತ್ತೆ ವೈರಲ್ ಆಯ್ತು ಫೋಟೊ
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇತ್ತೀಚೆಗೆ ಸಿನಿಮಾಗಿಂತ ಹೆಚ್ಚಾಗಿ ವಿವಾದದಿಂದಲೇ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ತಿಂಗಳಿಂದ ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಹೆಸರು ತಳುಕು ಹಾಕಿಕೊಂಡಿದೆ. ಇದೇ ಸಂಬಂಧ ಹಲವು ವಿಚಾರಣೆಯನ್ನೂ ಎದುರಿಸಿದ್ದಾರೆ.
ಶ್ರೀಲಂಕಾದ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ 2009ರಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೂ ಸೂಪರ್‌ಸ್ಟಾರ್ ಜೊತೆನೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾಧಿಸಿದ್ದಾರೆ. ಆದರೆ, ಒಂದೇ ಒಂದು ತಪ್ಪು ಹೆಜ್ಜೆ ಇಷ್ಟು ವರ್ಷದ ಸಾಧನೆ ಮಣ್ಣುಪಾಲಾಗುವಂತೆ ಮಾಡಿದೆ.

ವಂಚಕ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಹೆಸರು ತಳುಕು ಹಾಕಿಕೊಳ್ಳುತ್ತಿದ್ದಂತೆ ಅವಕಾಶಗಳೂ ಕೂಡ ಕಡಿಮೆಯಾಗಿವೆ. ಬಾಲಿವುಡ್‌ನಲ್ಲೂ ಜಾಕ್ವೆಲಿನ್ ಹೆಚ್ಚು ಆಕ್ಟಿವ್ ಆಗಿಲ್ಲ. ಈಗ ಇದ್ದಕ್ಕಿದ್ದಂತೆ ಜಾಕ್ವೆಲೀನ್ ಫರ್ನಾಂಡೀಸ್ ಟಾಪ್‌ಲೆಸ್ ಫೋಟೊ ಶೇರ್ ವೈರಲ್ ಆಗುತ್ತಿದೆ. ಶ್ರೀಲಂಕಾ ಬ್ಯೂಟಿಯ ಹಾಟ್ ಫೋಟೊ ಕಂಡು ಪಡ್ಡೆ ಹುಡುಗರ ಹೃದಯ ಮತ್ತೆ ಸದ್ದು ಮಾಡೋಕೆ ಶುರು ಮಾಡಿದೆ.
ಬಾಲಿವುಡ್ ಫ್ಯಾಷನ್ ಐಕಾನ್
ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್ ಚಿತ್ರರಂಗದ ಫೇಮಸ್ ನಟಿ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಅಭಿಮಾನಿಗಳು ಇವರನ್ನು ಹಿಂಬಾಲಿಸುತ್ತಾರೆ. ಈ ಕಾರಣಕ್ಕೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಗ್ಲಾಮರಸ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಗ್ರ್ಯಾಂಡ್ ಲುಕ್‌ನಲ್ಲಿ ಮುಂಚುತ್ತಿದ್ದರು. ಸಿಕ್ಕಾಪಟ್ಟೆ ಹಾಟ್ ಫೋಟೊಗಳನ್ನು ಶೇರ್ ಮಾಡಿ ಹುಡುಗರ ಎದೆ ಬಡಿತವನ್ನು ಹೆಚ್ಚಿಸುತ್ತಿದ್ದರು.
ಜಾಕ್ವೆಲಿನ್ ಸ್ಟೈಲ್ ಹಾಗು ಲುಕ್‌ಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಈ ಕಾರಣಕ್ಕೆ ಬಾಲಿವುಡ್‌ನ ಫ್ಯಾಷನ್ ಐಕಾನ್ ಎಂಬ ಪಟ್ಟನೂ ಸಿಕ್ಕಿತ್ತು. ಈಗ ಸುಮಾರು ಆರು ವರ್ಷಗಳ ಹಿಂದಿನ ಒಂದು ಫೋಟೊ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಟಾಪ್‌ಲೆಸ್ ಫೋಟೊ ಮತ್ತೆ ವೈರಲ್
2017ರಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಇನ್‌ಸ್ಟಾಗ್ರಾಂನಲ್ಲಿ ಹಾಟ್ ಫೋಟೊಗಳನ್ನು ಶೇರ್ ಮಾಡಿದ್ದರು. ಆ ಫೋಟೊ ಆಗಲೂ ಕೂಡ ಬಾರೀ ಸದ್ದು ಮಾಡಿತ್ತು. ಈ ಟಾಪ್‌ಲೆಸ್ ಫೋಟೊದಲ್ಲಿ ಜಾಕ್ವೆಲಿನ್ ತನ್ನ ತಲೆಕೂದಲಿನಿಂದ ಎದೆ ಭಾಗವನ್ನು ಮುಚ್ಚಿಕೊಂಡಿದ್ದರು. ಈ ಫೋಟೊಗಳು ಅಂದು ಅಭಿಮಾನಿಗಳನ್ನು ಕೆರಳಿಸಿತ್ತು. ಅದೇ ಈಗ ಮತ್ತೆ ಸದ್ದು ಮಾಡುತ್ತಿದೆ.
ಜಾಕ್ವೆಲಿನ್ ಬಿಂದಾಸ್ ಫೋಸ್ ನೀಡುವುದಕ್ಕೆ ಹೆದರುವುದಿಲ್ಲ. ಯಾವುದೇ ಮುಜುಗರವಿಲ್ಲದೆ ಹಾಟ್ ಲುಕ್ ಕೊಡುತ್ತಾರೆ. 2017ರಲ್ಲೂ ಹೀಗೆ ಟಾಪ್‌ಲೆಸ್ ಲುಕ್ ಕೊಟ್ಟಿದ್ದರು. ಹಾಗಂತ ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಜಾಕ್ವೆಲಿನ್ ಟಾಪ್‌ಲೆಸ್ ಲುಕ್ ಕೊಟ್ಟು ಮಿಂಚಿದ್ದರು.
'ಫತೇಹ' ಸಿನಿಮಾದಲ್ಲಿ ಜಾಕ್ವೆಲಿನ್ ಬ್ಯುಸಿ
ಜಾಕ್ವೆಲಿನ್ ಫರ್ನಾಂಡೀಸ್ ಇನ್‌ಸ್ಟಾಗ್ರಾಂನಲ್ಲಿ ಸುಮಾರು 66 ಮಿಲಿಯನ್ ಫಾಲೋವರ್ಸ್ ಇದ್ದಾರೆ. ವಿವಾದಗಳಲ್ಲಿ ಸಿಕ್ಕಿಕೊಂಡರೂ ಜಾಕ್ವೆಲಿನ್‌ಗೆ ಅಭಿಮಾನಿಗಳೇನು ಕಮ್ಮಿಯಾಗಿಲ್ಲ. ಆದರೆ, ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದು ಅಭಿಮಾನಿಗಳನ್ನು ನಿರಾಸೆ ಮಾಡಿರೋದಂತೂ ನಿಜ.
ಸದ್ಯ ಜಾಕ್ವೆಲಿನ್ ಫರ್ನಾಂಡೀಸ್ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಸೋನು ಸೂದ್ ನಟಿಸುತ್ತಿರುವ 'ಫತೇಹ' ಸಿನಿಮಾದಲ್ಲಿ ಜಾಕ್ವೆಲಿನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗಳ ಬಗ್ಗೆ ಎಲ್ಲರಲ್ಲೂ ನಿರೀಕ್ಷೆಯಿದೆ.


Click it and Unblock the Notifications











