ಅತ್ತೆಯೊಂದಿಗೆ ಮಹಾಕುಂಭಮೇಳದಲ್ಲಿ ಕತ್ರಿನಾ ಕೈಫ್; ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ನಟಿ
ಉತ್ತರ ಪ್ರದೇಶದ ಮಹಾಕುಂಭ ಮೇಳ ಯಶಸ್ವಿಯಾಗಿ ನಡೆಯುತ್ತಿದೆ. ಇದೇ ವರ್ಷ ಜನವರಿ 13ರಿಂದ ಮಹಾಕುಂಭ ಮೇಳ ಆರಂಭ ಆಗಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಇದು ಮುಗಿದು ಹೋಗುತ್ತೆ. ಇನ್ನು ಎರಡು ದಿನ ಅಂದರೆ, ಫೆಬ್ರವರಿ 26ರಂದು ಕೊನೆಗೊಳ್ಳಲಿದೆ. ಹೀಗಾಗಿ ಭಕ್ತರು ಹಾಗೂ ಸಿನಿಮಾ ತಾರೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಂದು (ಫೆಬ್ರವರಿ 24) ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ಭೇಟಿ ಕೊಟ್ಟಿದ್ದಾರೆ.
ಕತ್ರಿನಾ ಕೈಫ್ ತನ್ನ ಅತ್ತೆ ವೀಣಾ ಕೌಶಲ್ ಅವರೊಂದಿಗೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದು, ನಾನೇ ಪುಣ್ಯವಂತೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮಹಾಕುಂಭ ಮೇಳಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಳೆದ ಒಂದೂವರೆ ತಿಂಗಳಿಂದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳವನ್ನು ಆಚರಣೆ ಮಾಡಲಾಗುತ್ತಿದೆ. ವಿಶ್ವದ ಮೂಲೆ ಮೂಲೆಯಿಂದ ಭಕ್ತರು, ಸಾಧು ಸಂತರು, ಅಘೋರಿಗಳು, ಸಿನಿಮಾ ತಾರೆಯರು,ರಾಜಕೀಯ ಮುಖಂಡರು ಆಗಮಿಸಿದ್ದಾರೆ. ಈ ಪುಣ್ಯ ಕ್ಷೇತ್ರದಲ್ಲಿರುವ ತಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಈಗ ಆ ಸಾಲಿಗೆ ಕತ್ರಿನಾ ಕೈಫ್ ಕೂಡ ಸೇರಿಕೊಂಡಿದ್ದಾರೆ.
ಬಾಲಿವುಡ್ ನಟಿ ಕತ್ರಿನಾ ಕೈಫ್ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಮಹಾಕುಂಭದ ಅನುಭವವನ್ನು ಪಡೆದುಕೊಂಡಿದ್ದಾರೆ. ಪ್ರಯಾಗ್‌ರಾಜ್‌ಗೆ ಭೇಟಿ ಕೊಟ್ಟ ಬಳಿಕ ಅಲ್ಲಿನ ಶಕ್ತಿ, ಧಾರ್ಮಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅಲ್ಲಿಮ ಪರಮಾರ್ಥ ನಿಕೇತನ್ ಶಿಬಿರಕ್ಕೆ ಭೇಟಿಕೊಟ್ಟು ಸ್ವಾಮೀಜಿಯ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಅದರ ವಿಡಿಯೋ ಹಾಗೂ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿವೆ.
ಪರಮಾರ್ಥ ನಿಕೇತನ್ ಶಿಬಿರದಲ್ಲಿ ಸ್ವಾಮಿ ಚಿದಾನಂದ ಸರಸ್ವತಿ ಹಾಗೂ ಸಾಧ್ವಿ ಭಗವತಿ ಸರಸ್ವತಿ ಇವರನ್ನು ಭೇಟಿ ಮಾಡಿ, ಅವರ ಆಶೀರ್ವಾದವನ್ನು ಪಡೆದಿದ್ದಾರೆ. ಆನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಮಹಾಕುಂಭಮೇಳಕ್ಕೆ ಬಂದಾಗ ಇಲ್ಲಿಗೆ ಬರಲು ಸಾಧ್ಯವಾಗಿದ್ದು ನಿಜಕ್ಕೂ ನನ್ನ ಅದೃಷ್ಟ. ನಾನು ಇಲ್ಲಿಗೆ ಬಂದಿದ್ದಕ್ಕೆ ನನಗೆ ನಿಜಕ್ಕೂ ಸಂತೋಷವಾಗಿದೆ. ಸ್ವಾಮಿ ಚಿದಾನಂದ ಸರಸ್ವತಿ ಅವರ ಜೊತೆ ಇದ್ದೇನೆ. ಅವರೊಂದಿಗೆ ಸಂವಾದ ನಡೆಸಿದ್ದೇನೆ. ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದೇನೆ. ಇಲ್ಲಿ ಇರುವುದಕ್ಕೆ ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ" ಎಂದು ಕತ್ರಿನಾ ಕೈಫ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಹಾಗೇ ನಾನು ಈಗಷ್ಟೇ ಇಲ್ಲಿಗೆ ಬಂದಿದ್ದೇನೆ. ಇನ್ನೂ ನನಗೆ ಅನುಭವ ಆಗಬೇಕು. ಆದರೆ, ಇಲ್ಲಿನ ಎನರ್ಜಿ, ಎಲ್ಲವೂ ಇಷ್ಟ ಆಗಿದೆ. ಇನ್ನೂ ಸ್ವಲ್ಪ ಹೊತ್ತು ಸ್ವಾಮೀಜಿ ಜೊತೆ ಕೂರುತ್ತೇನೆ. ಅವರೊಂದಿಗೆ ಮಾತಾಡುತ್ತೇನೆ. ಇದು ಈ ದಿನದ ಆರಂಭ ಅಷ್ಟೇ. ಇಡೀ ದಿನ ಇಲ್ಲಿಯೇ ಕಾಲ ಕಳೆಯುತ್ತೇನೆ" ಎಂದು ಬಾಲಿವುಡ್ ನಟಿ ಕತ್ರಿನಾ ಕೈಫ್ ಉತ್ಸಾಹ ತೋರಿಸಿದ್ದಾರೆ.
ವಿಕ್ಕಿ ಕೌಶಲ್ ಜೊತೆ ವಿವಾಹವಾದ ಬಳಿಕ ಕತ್ರಿನಾ ಕೈಫ್ ಹೆಚ್ಚು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅತ್ತೆಯೊಂದು ಹಬ್ಬ ಹರಿದಿನಗಳ ಆಚರಣೆ ಮಾಡುತ್ತಾರೆ. ಆ ಫೋಟೊ ಹಾಗೂ ವಿಡಿಯೋಗಳನ್ನು ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಗುಲಾಬಿ ಬಣ್ಣದ ಟ್ರೆಡಿಷನಲ್ ಪಂಜಾಬಿ ಡ್ರೆಸ್‌ನಲ್ಲಿ ಕತ್ರಿಕಾ ಕೈಫ್ ಕಾಣಿಸಿಕೊಂಡಿದ್ದರು. ಕುಂಭಮೇಳದಲ್ಲಿ ಕತ್ರಿನಾ ಕೈಫ್ ಅವರನ್ನು ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.


Click it and Unblock the Notifications











