ಕೃತಿ ಸೆನನ್‌ಗೆ ಬ್ಯಾಕ್ ಟು ಬ್ಯಾಕ್ ಸೋಲು: ಪ್ರಭಾಸ್ ಕೈಯಲ್ಲಿ ಬಾಲಿವುಡ್‌ ಬ್ಯೂಟಿ ಭವಿಷ್ಯ?

ಬಾಲಿವುಡ್‌ನಲ್ಲಿ ಬ್ಯೂಟಿ ಕೃತಿ ಸೆನನ್‌ ಒಳ್ಳೆ ಸಿನಿಮಾಗಳಲ್ಲಿ ನಟಿಸಿದ ನಟಿ. ಕೋವಿಡ್‌ಗಿಂತ ಮುಂಚೆ ಈ ನಟಿಯ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿವೆ. ಆದರೆ, ಇತ್ತೀಚೆಗೆ ಯಾಕೋ ಕೃತಿ ಸೆನನ್ ಸಿನಿಮಾಗಳು ನೆಲಕ್ಕಚ್ಚುತ್ತಿವೆ.

ಕೃತಿ ಸೆನನ್ ನಟಿಸಿದ ಸಿನಿಮಾಗಳು ಒಂದರ ಹಿಂದೊಂದು ಸೋಲುಗಳನ್ನು ಕಾಣುತ್ತಿದೆ. ಇದು ಬಾಲಿವುಡ್‌ನಲ್ಲಿ ಸಿಕ್ಕಾ ಪಟ್ಟೆ ಚರ್ಚೆಯಾಗುತ್ತಿದೆ. ಕೃತಿಯಲ್ಲಿರುವ ಇನ್ನು ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲಲೇ ಬೇಕಿದೆ. ಇಲ್ಲದೆ ಹೋದಲ್ಲಿ ಕೃತಿ ವೃತ್ತಿ ಭವಿಷ್ಯಕ್ಕೆ ಕುತ್ತು ಬರುತ್ತೆ ಅಂತಲೇ ಚರ್ಚೆಯಾಗುತ್ತಿದೆ.

ಬಾಲಿವುಡ್‌ನ ವಿವಾದಾತ್ಮಕ ಕ್ರಿಟಿಕ್ ಕೆಆರ್‌ಕೆ ಕೂಡ ಕೃತಿ ಸೆನನ್ ವಿರುದ್ಧ ಕಿಡಿಕಾರಿದ್ದಾರೆ. ಇನ್ನೊಂದು ಕಡೆ ಕೃತಿ ಸೆನನ್ ಭವಿಷ್ಯ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಕೈಯಲ್ಲಿದೆ ಅಂತಾನೂ ಮಾತಾಡಿಕೊಳ್ಳುತ್ತಿದ್ದಾರೆ. ಅಸಲಿಗೆ ಕೃತಿ ವೃತ್ತಿ ಬದುಕಿನಲ್ಲಿ ಅಂತಹದ್ದೇನಾಗುತ್ತಿದೆ?

ಕೃತಿಗೆ ಒಂದರ ಹಿಂದೊಂದು ಸೋಲು

ಕೃತಿಗೆ ಒಂದರ ಹಿಂದೊಂದು ಸೋಲು

ಕೃತಿ ಸೆನನ್ ಅದೃಷ್ಟ ನಿಜಕ್ಕೂ ಸರಿಯಾಗಿಲ್ಲ. ಇತ್ತೀಚೆಗೆ ಈ ಬಾಲಿವುಡ್ ಬ್ಯೂಟಿ ನಟಿಸಿದ ಸಿನಿಮಾಗಳು ಒಂದರ ಹಿಂದೊಂದು ಸೋಲು ಕಾಣುತ್ತಿದೆ. ಅರ್ಜುನ್ ಕಪೂರ್ ನಟಿಸಿದ 'ಪಾಣಿಪತ್' ನಿಂತ ಶುರುವಾಗಿದ್ದ ಸೋಲು ಎರಡು ದಿನಗಳ ಹಿಂದೆ ತೆರೆಕಂಡ 'ಶೆಹಜಾದ' ಸಿನಿಮಾದವರೆಗೂ ಮುಂದುವರೆದಿದೆ. ಹೀಗಾಗಿಯೇ ಬಾಲಿವುಡ್‌ನಲ್ಲಿ ಕೃತಿ ಸೆನನ್ ಸಿನಿಮಾ ಬಗ್ಗೆ ಗಂಭೀರವಾದ ಚರ್ಚೆಯಂತೂ ಆಗುತ್ತಿದೆ. ಇತ್ತ ಕೆಆರ್‌ಕೆ ಕೂಡ ಈ ನಟಿಯ ವಿರುದ್ಧ ತಿರುಗಿಬಿದ್ದಿದ್ದಾರೆ.

ನಾಲ್ಕು ಸಿನಿಮಾಗಳು ಸೋಲು

ನಾಲ್ಕು ಸಿನಿಮಾಗಳು ಸೋಲು

ಕೃತಿ ಸೆನನ್ ನಟಿಸಿದ ನಾಲ್ಕು ಸಿನಿಮಾಗಳು ಒಂದ ಹಿಂದೊಂದು ಸೋಲು ಕಂಡಿವೆ. ರಾಜ್‌ಕುಮಾರ್ ರಾವ್ ಜೊತೆ ನಟಿಸಿದ 'ಹಮ್‌ ದೋ ಹಮಾರೆ ದೋ', ಅಕ್ಷಯ್ ಕುಮಾರ್ ಸಿನಿಮಾ 'ಬಚ್ಚನ್ ಪಾಂಡೆ', ವರುಣ್ ಧವನ್ ಸಿನಿಮಾ 'ಭೇಡಿಯಾ' ಹಾಗೂ ಕಾರ್ತಿಕ್ ಆರ್ಯನ್ ಜೊತೆ ನಟಿಸಿದ 'ಶೆಹಜಾದ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ಹೀಗಾಗಿ ಬಾಲಿವುಡ್ ಮಂದಿ ಕೃತಿ ಸೆನನ್ ವಿರುದ್ಧ ಅಪ್‌ಸೆಟ್ ಆಗಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಪ್ರಭಾಸ್ ಕೈಯಲ್ಲಿ ಕೃತಿ ಭವಿಷ್ಯ

ಪ್ರಭಾಸ್ ಕೈಯಲ್ಲಿ ಕೃತಿ ಭವಿಷ್ಯ

ಕೃತಿ ಸೆನನ್ ನಟಿಸಿದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಆದಿಪುರುಷ್'. ಪ್ರಭಾಸ್ ಜೊತೆ ನಟಿಸಿದ ಸಿನಿಮಾ ಇದೇ ವರ್ಷ ಜೂನ್‌ಗೆ ರಿಲೀಸ್ ಆಗುತ್ತಿದೆ. ಈ ಸಿನಿಮಾ ಮೇಲೆ ಕೃತಿ ಸೆನನ್ ಭವಿಷ್ಯ ನಿಂತಿದೆ. ಆದರೆ, ರಿಲೀಸ್ ಆಗಿರೋ ಒಂದೇ ಒಂದು ಟೀಸರ್‌ಗೆ ನೆಗೆಟಿವ್ ರಿಪೋರ್ಟ್ ಸಿಕ್ಕಿದೆ. ಹೀಗಾಗಿ 'ಆದಿಪುರುಷ್' ಕೂಡ ಸೋತರೇ ಕೃತಿ ಸಂಕಷ್ಟ ಎದುರಾಗೋದು ಗ್ಯಾರಂಟಿ. ಆದರೆ, ಪ್ರಭಾಸ್ ರಾಮನಾಗಿ ನಟಿಸುತ್ತಿರೋದ್ರಿಂದ ಕೃತಿಗೆ ಭವಿಷ್ಯ ಚಿಕ್ಕದೊಂದು ಹೋಪ್ ಇದೆ.

ಕೃತಿ ವಿರುದ್ಧ ಕೆಆರ್‌ಕೆ ಕಿಡಿ

'ಶೆಹಜಾದ' ಸೋಲಿನ ಬಳಿಕ ಕೃತಿ ಸೆನನ್ ವಿರುದ್ಧ ಕೆಆರ್‌ಕೆ ಕಿಡಿ ಕಾಡಿದ್ದಾರೆ. ಕೃತಿ ತೆಗಳುವ ಭರಾಟೆಯಲ್ಲಿ 'ಆದಿಪುರುಷ್' ಸಿನಿಮಾವನ್ನೂ ಎಳೆದು ತಂದಿದ್ದಾರೆ. "ಕೃತಿ ಸೆನನ್ ಜಲ್ವಾ ನೋಡುವುದು ಬಾಕಿಯಿದೆ. ₹600 ಕೋಟಿ ಬೆಜೆಟ್ ಸಿನಿಮಾ ಆದಿಪುರುಷ್ ಸಿನಿಮಾದ ನಾಯಕಿ ಕೂಡ ಇವರೇನೆ. ಜೈ ಹೋ ಕೃತಿ ಸೆನನ್." ಎಂದು ಕೆಆರ್‌ಕೆ ಕಿಡಿಕಾರಿದ್ದಾರೆ.

More from Filmibeat

English summary
Bollywood actress Kriti Sanon Back-to-back failures: can Prabhas save her?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X