ಗ್ರೀಸ್‌ನಲ್ಲಿ 'ಆದಿಪುರುಷ್' ನಟಿ ಕೃತಿ ಸನನ್ ಸಿಗರೇಟು ಸೇದಿದ್ದು ನಿಜವೇ?; ಅಮ್ಮ ಟ್ವೀಟ್ ವೈರಲ್ ಆಗಿದ್ದೇಕೆ?

'ಆದಿಪುರುಷ್' ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿಸಿದ್ದ ಬಾಲಿವುಡ್ ನಟಿ ಕೃತಿ ಸನನ್ ವಿವಾದವೊಂದಕ್ಕೆ ಸಿಕ್ಕಿಕೊಂಡಿದ್ದಾರೆ. ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಸಲುವಾಗಿ ಸ್ನೇಹಿತರು ಹಾಗೂ ಸಹೋದರಿಯೊಂದಿಗೆ ಗ್ರೀಸ್‌ಗೆ ತೆರಳಿದ್ದಾರೆ. ಈ ವೇಳೆ ಕೃತಿ ಸನನ್ ಅವರದ್ದೇ ಎನ್ನಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ವಿಡಿಯೋ ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ.

ಈ ವಿಡಿಯೋದಲ್ಲಿ ಬಾಲಿವುಡ್ ನಟಿ ಕೃತಿ ಸನನ್ ಧೂಮಪಾನ ಮಾಡುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕೆ ಶುರುವಾಗಿದೆ. ಇದೇ ವೇಳೆ ನಟಿ ಕೃತಿ ಸನನ್ ಅವರ ತಾಯಿ ಗೀತಾ ಸನನ್ ಹಳೆಯ ಟ್ವೀಟ್ ಕೂಡ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ.

Bollywood actress Kriti Sanon post new video with sister after smoking Viral Video controversy

ಕೃತಿ ಸನನ್ ಸ್ಮೋಕಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿರುವ ವಿಡಿಯೋ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಕೃತಿ ಸನನ್ ಬೆಂಬಲಕ್ಕೆ ನಿಂತಿದ್ದಾರೆ. ಸಿನಿಮಾ ತಾರೆಯೊಬ್ಬರು ಖಾಸಗಿ ಜೀವನ ಕಳೆಯುತ್ತಿರುವಾಗ ಅವರ ವಿಡಿಯೋ ಮಾಡುವುದು ತಪ್ಪು ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ಅವರ ಲೈಫ್ ಅನ್ನು ಅವರು ಎಂಜಾಯ್ ಮಾಡುವುದಕ್ಕೆ ಬಿಡಿ ಎಂದೂ ಹೇಳುತ್ತಿದ್ದಾರೆ. ಇದೇ ವೇಳೆ ಕೃತಿ ಸನನ್ ತಾಯಿ ಗೀತಾ ಸನನ್ ಅವರ ಹಳೆಯ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಕೃತಿ ಸನನ್ ಸ್ಮೋಕಿಂಗ್ ಮಾಡುತ್ತಿರುವ ವಿಡಿಯೋದಲ್ಲಿನ ಅಸಲಿಯತ್ತು ಏನು ಅನ್ನೋದು ಇನ್ನೂ ಗೊತ್ತಾಗಬೇಕಿದೆ. ಆದರೆ, ಈ ವಿಡಿಯೋ ಹೊರಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಕಾರಣ ಈ ಹಿಂದೆ ಕೃತಿ ಸನನ್ ನೀಡಿದ ಒಂದು ಸಂದರ್ಶನ. ಅದರಲ್ಲಿ 'ಆದಿಪುರುಷ್' ನಟಿ ಕೃತಿ ಸನನ್ ತಾನು ಧೂಮಪಾನ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದರು. ಈಗ ಇದನ್ನೇ ಇಟ್ಟುಕೊಂಡು ಟೀಕೆ ಮಾಡುವುದಕ್ಕೆ ಶುರು ಮಾಡುತ್ತಿದ್ದಾರೆ.

Bollywood actress Kriti Sanon post new video with sister after smoking Viral Video controversy

2017ರಲ್ಲಿ ಕೃತಿ ಸನನ್ ಅಭಿಮಾನಿಯೊಬ್ಬರು ಆಕೆ ಸ್ಮೋಕಿಂಗ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿ, ಇದು 'ಬರೇಲಿ ಕಿ ಬರ್ಫಿ' ಸಿನಿಮಾ ದೃಶ್ಯದ ಫೋಟೋ. ಕೇವಲ ಸಿನಿಮಾಗಾಗಿ ಕೃತಿ ಸನನ್ ಸ್ಮೋಕಿಂಗ್ ಮಾಡಿದ್ದರು. ಹೀಗಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ ಎಂದು ಬರೆದು ಪೋಸ್ಟ್ ಮಾಡಿದ್ದರು. ಅದಕ್ಕೆ ಕೃತಿ ಸನನ್ ತಾಯಿ ಕೂಡ ಪ್ರತಿಕ್ರಿಯೆ ನೀಡಿದ್ದರು. "ಕೃತಿ ಸನನ್ ಧೂಮಪಾನ ಮಾಡುವುದಿಲ್ಲ. ಜೊತೆಗೆ ತನ್ನ ಜೊತೆಗಿರುವವರಿಗೂ ಸ್ಮೋಕಿಂಗ್ ಬಿಟ್ಟು ಬಿಡುವಂತೆ ಹೇಳುತ್ತಾರೆ" ಎಂದಿದ್ದರು. ಈ ಟ್ವೀಟ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈಗ ಗೀಸ್ ಪ್ರವಾಸದಲ್ಲಿರುವ ಕೃತಿ ಸನನ್ ಸ್ಮೋಕಿಂಗ್ ಮಾಡುತ್ತಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದ್ದು, ಇದೇ ಟ್ವೀಟ್‌ಗಳನ್ನು ಇಟ್ಟುಕೊಂಡು ನಟಿಯನ್ನು ಟೀಕಿಸಲಾಗುತ್ತಿದೆ. ಹೀಗಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಕೃತಿ ಸನನ್ ಬೆಂಬಲಕ್ಕೆ ನಿಂತಿದ್ದಾರೆ. ಧೂಮಪಾನ ಅವರ ವೈಯಕ್ತಿಕ ವಿಚಾರ ಎನ್ನುವ ಅರ್ಥದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇಷ್ಟೆಲ್ಲ ವಿವಾದ ಆದರೂ, ಕೃತಿ ಸನನ್ ತಲೆಕೆಡಿಸಿಕೊಂಡಿಲ್ಲ. ತನ್ನ ಸಹೋದರಿ ನುಪುರ್ ಸನನ್ ಜೊತೆಗಿನ ಪ್ರವಾಸದಲ್ಲಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ವೇಳೆ ಕೃತಿ ಸನನ್ ತನ್ನ ಬಾಯ್‌ಫ್ರೆಂಡ್ ಅಮೆರಿಕ ಮೂಲದ ಉದ್ಯಮಿ ಕಬೀರ್ ಬಾಹಿಯಾ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆಂದು ಸುದ್ದಿಯಾಗುತ್ತಿದೆ.

More from Filmibeat

English summary
Actress Kriti Sanon smoking video controversy
Read more about: actress bollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X