Madhuri Dixit: ಮಾಧುರಿ ದೀಕ್ಷಿತ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ? ಧಕ್ ಧಕ್ ಬೆಡಗಿ ಕೊಟ್ಟ ಕಾರಣವೇನು?

ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಮೆರೆದ ನಾಯಕಿಯರು ಸಿನಿಮಾರಂಗದಿಂದ ಹೊರ ಬಂದ್ಮೇಲೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆಲ ನಟಿಯರಿಗೆ ರಾಜಕೀಯ ರಂಗದಲ್ಲಿಯೂ ಯಶಸ್ಸು ಸಿಕ್ಕಿದೆ. ಕೇವಲ ನಟಿಯಾಗಿ ಅಷ್ಟೇ ಅಲ್ಲ. ರಾಜಕಾರಣಿಯಾಗಿಯೂ ಜನಪ್ರಿಯತೆ ಪಡಿದುಕೊಂಡಿದ್ದಾರೆ. ಆದರೆ, ಕೆಲವರು ಮಾತ್ರ ಈ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಅವರನ್ನು ಪಾಲಿಟಿಕ್ಸ್‌ಗೆ ಕರೆದುಕೊಂಡು ಬರುವ ಪ್ರಯತ್ನ ಮಾಡಿದರೂ, ಸಾಧ್ಯವಾಗಿಲ್ಲ. ಇಂತಹವರಲ್ಲಿ ಮಾಧುರಿ ದೀಕ್ಷಿತ್ ಕೂಡ ಇಬ್ಬರು.

ಅಭಿಮಾನಿಗಳ ಪಾಲಿಗೆ 'ಧಕ್ ಧಕ್ ಬೆಡಗಿ' ಅಂತಲ್ಲೇ ಜನಪ್ರಿಯವಾಗಿರುವ ನಟಿ ಮಾಧುರಿ ದೀಕ್ಷಿತ್. ಆದರೆ, ಕಳೆದ ಕೆಲವು ತಿಂಗಳಿನಿಂದ ಮಾಧುರಿ ದೀಕ್ಷಿತ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆಂಬ ಸುದ್ದಿ ಹರಿದಾಡುತ್ತಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿಯೂ ಮಾಧುರಿ ದೀಕ್ಷಿತ್ ಸ್ಪರ್ಧಿಸುತ್ತಾರೆಂಬ ಸುದ್ದಿ ಕೇಳಿ ಬಂದಿತ್ತು. ಆಗಲೂ ಮಾಧುರಿ ದೀಕ್ಷಿತ್ ರಾಜಕೀಯಕ್ಕೆ ಎಂಟ್ರಿ ಕೊಡಲಿಲ್ಲ. ಹಾಗಂತ ಅವರ ರಾಜಕೀಯ ಪ್ರವೇಶದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು.

Bollywood actress Madhuri Dixit clarifies about joining Politics after rumours

ಹಾಗಿದ್ದರೆ, ಬಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ನಟಿ ಮಾಧುರಿ ದೀಕ್ಷಿತ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ? ಯಾವ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ? ಯಾವ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುತ್ತಾರೆ? ರಾಜಕೀಯ ಪ್ರವೇಶದ ಬಗ್ಗೆ ಎದ್ದಿರೋ ಊಹಾ-ಪೋಹಾಗಳಿವೆ 'ಧಕ್ ಧಕ್' ಬೆಡಗಿ ಕೊಟ್ಟ ಕಾರಣವೇನು? ತಿಳಿಯುವುದಕ್ಕೆ ಮುಂದೆ ಓದಿ.

ಕೊನೆಗೂ ಮಾಧುರಿ ದೀಕ್ಷಿತ್ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಎಎನ್‌ಐ ನೀಡಿದ ಸಂದರ್ಶನದಲ್ಲಿ ಬಹಳ ದಿನಗಳಿಂದ ರಾಜಕೀಯ ಪ್ರವೇಶದ ಬಗ್ಗೆ ಹರಿದಾಡುತ್ತಿದ್ದ ಸುದ್ದಿಗಳ ಬಗ್ಗೆ ಮಾಧುರಿ ದೀಕ್ಷಿತ್ ಕ್ಲಾರಿಟಿ ಕೊಟ್ಟಿದ್ದಾರೆ. ಈ ಮೂಲಕ ಇಲ್ಲಿವರೆಗೂ ಅವರ ಅಭಿಮಾನಿಗಳಲ್ಲಿ ಇದ್ದ ಗೊಂದಲಗಳನ್ನು ಬಾಲಿವುಡ್ ನಟಿ ನಿವಾರಿಸಿದ್ದಾರೆ.

ಮಾಧುರಿ ದೀಕ್ಷಿತ್ ಬಹಳ ದಿನಗಳಿಂದ ಕೇಳಿ ಬರುತ್ತಿದ್ದ ರಾಜಕೀಯ ಪ್ರವೇಶದ ಬಗೆಗಿನ ಗಾಳಿ ಸುದ್ದಿಗಳಿಗೆ ಅಂತಿಮವಾಗಿ ತೆರೆ ಎಳೆದಿದ್ದಾರೆ. " ತಾನು ರಾಜಕೀಯ ಮಾಡುವುದಕ್ಕಾಗಿ ಹುಟ್ಟಿದವರಲ್ಲ. ಕಲಾವಿದೆಯಾಗಿ ತಾನು ಮಾಡುವ ಪಾತ್ರ ಜನರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ" ಎಂದು ಮಾಧುರಿ ದೀಕ್ಷಿತ್ ಅಭಿಪ್ರಾಯಪಟ್ಟಿದ್ದಾರೆ. 2024ರ ಲೋಕಸಭೆ ಚುನಾವಣೆಯ ಸಮಯದಲ್ಲಿ ಮಾಧುರಿ ಪುಣೆ ಇಲ್ಲವೇ ಮಹಾರಾಷ್ಟ್ರದ ಬೇರೊಂದು ಕ್ಷೇತ್ರದಿಂದ ಸ್ಪರ್ಧಿಸಬಹುದೆಂಬ ಚರ್ಚೆ ಎದ್ದಿತ್ತು. ಆದರೆ, ರಾಜಕೀಯದ ಕಡೆಗೆ ಸುಳಿಯಲೇ ಇಲ್ಲ.

Bollywood actress Madhuri Dixit clarifies about joining Politics after rumours

ಇಲ್ಲಿಂದ ಮಾಧುರಿ ದೀಕ್ಷಿತ್ ಯಾವುದೇ ಸಂದರ್ಶನಗಳನ್ನು ಕೊಟ್ಟರೂ ರಾಜಕೀಯದ ಬಗ್ಗೆನೇ ಪ್ರಶ್ನೆಗಳು ಎದುರಾಗುತ್ತಿದ್ದವು. ಆದ್ರೀಗ ತನ್ನಲ್ಲಿರುವ ರಾಜಕೀಯ ನಿಲುವು ಏನು ಅನ್ನೋದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ. "ನಾನು ಕಲಾವಿದೆಯಾಗಿ ರೂಪುಗೊಂಡಿದ್ದೇನೆ. ನನಗೆ ರಾಜಕೀಯ ಮಾಡುವುದಕ್ಕೆ ಬರುವುದಿಲ್ಲ. ಒಬ್ಬ ಕಲಾವಿದರೆಯಾಗಿಯೇ ನಾನು ಜಾಗೃತಿ ಮೂಡಿಸಬಹುದು, ಜನರಿಗೆ ಸಹಾಯ ಮಾಡಬಹುದು. ನನ್ನ ಆಲೋಚನೆಯನ್ನು ಹಂಚಿಕೊಳ್ಳುವುದಕ್ಕೆ ರಾಜಕೀಯವೇ ಬೇಕಿಲ್ಲ. ನನ್ನನ್ನು ಹೀಗೆ ನೋಡಿಕೊಳ್ಳುತ್ತೇನೆ" ಎಂದು ಮಾಧುರಿ ದೀಕ್ಷಿತ್ ಅಭಿಪ್ರಾಯ ಪಟ್ಟಿದ್ದಾರೆ.

ಮಾಧುರಿ ದೀಕ್ಷಿತ್ ಅವರ ಈ ನಿರ್ಧಾರಕ್ಕೆ ಅವರು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವಂತೆ ಒತ್ತಡವನ್ನೂ ಹಾಕಿದ್ದಾರೆ. ಸದ್ಯ ಮಾಧುರಿ ದೀಕ್ಷಿತ್ ಕೂಡ ವೃತ್ತಿ ಜೀವನದತ್ತ ಗಮನ ಹರಿಸಿದ್ದಾರೆ. 'ಮಿಸೆಸ್ ದೇಶಪಾಂಡೆ' ಎನ್ನುವ ವೆಬ್ ಸೀರಿಸ್ ಅಲ್ಲಿ ನಟಿಸಿದ್ದು, ಇದೇ ಡಿಸೆಂಬರ್ 19ರಂದು ಜಿಯೋ ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಆಗಲಿದೆ. ನಾಗೇಶ್ ಕುಕುನೂರು ಈ ವೆಬ್ ಸೀರಿಸ್ ಅನ್ನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಅವರ ಲುಕ್ ಹಾಗೂ ಖದರ್ ಸಖತ್ ಕಿಕ್ ಕೊಟ್ಟಿದೆ.

More from Filmibeat

English summary
Bollywood actress Madhuri Dixit clarifies about joining Politics after rumours.
Read more about: madhuri dixit actress politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X