ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಅನಿಲ್ ಅರೋರಾ ಆತ್ಮಹತ್ಯೆ? ಕಾರಣ ಏನು?

ಬಾಲಿವುಡ್‌ ಬ್ಯೂಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಅನ್ನೋ ಅಘಾತಕಾರಿ ಸುದ್ದಿ ಹೊರಬಿದ್ದಿದೆ. ಅನಿಲ್ ಅರೋರಾ ವಾಸಿಸುತ್ತಿದ್ದ ಬಿಲ್ಟಿಂಗ್‌ನ ಆರನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸುದ್ದಿ ಹರಿದಾಡುತ್ತಿದೆ. ಆದರೆ, ಆತ್ಮಹತ್ಯೆ ಮಾಡಿಕೊಂಡಿದ್ದರ ನಿಖರವಾದ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಸದ್ಯ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ಮಾಡುತ್ತಿದೆ.

ಮಲೈಕಾ ಅರೋರಾ ತಂದೆ ಮುಂಬೈನ ಬಾಂದ್ರಾದಲ್ಲಿ ನೆಲೆಸಿದ್ದರು. 75 ವರ್ಷದ ಅನಿಲ್ ಅರೋರಾ ಭಾರತದ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ತಂದೆ ಆತ್ಮಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಮಲೈಕಾ ಅರೋರಾ ಮುಂಬೈಗೆ ಹಿಂತಿರುಗಿದ್ದಾರೆ. ಹಾಗೇ ಇನ್ನೊಬ್ಬ ಪುತ್ರಿ ಹಾಗೂ ನಟಿ ಅಮೃತ್ ಅರೋರಾ ಸಹ ಮುಂಬೈಗೆ ಮರಳಿದ್ದಾರೆ.

Bollywood actress Malaika Arora father Anil Arora dies by jumping of the building

ಮಲೈಕಾ ಅರೋರಾ ಮಾಜಿ ಪತಿ ಅರ್ಬಾಜ್ ಖಾನ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಮುಂಬೈನ ಬಾಂದ್ರಾದಲ್ಲಿರುವ ಅನಿಲ್ ಅರೋರಾ ನಿವಾಸ ಆಯೆಷಾ ಮಾನರ್‌ ಮುಂದೆ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅನಿಲ್ ಅರೋರಾ ಮೃತದೇಹವನ್ನು ಪೋಸ್ಟ್ ಮಾರ್ಟಮ್‌ಗಾಗಿ ಕಳುಹಿಸಿಕೊಡಲಾಗಿದೆ. ಈ ಘಟನೆ ಇಂದು (ಸೆಪ್ಟೆಂಬರ್ 11) ಬೆಳಗ್ಗೆ ಸುಮಾರು 10.30ಕ್ಕೆ ಸಂಭವಿಸಿದೆ ಎಂದು ವರದಿಯಾಗಿದೆ.

ಆದರೆ, ಮಲೈಕಾ ಅರೋರಾ ತಂದೆ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಅಥವಾ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದ್ದಾರಾ? ಅನ್ನೋ ಗೊಂದಲವಿದೆ. ಮಲೈಕಾ ಅರೋರಾ ಆತ್ಮೀಯರು ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಹೇಳಿದ್ದು, ಪೊಲೀಸರ ಪಂಚನಾಮದಲ್ಲಿ ಬೆಳಕಿಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಖಚಿತವಾಗಿ ಅನಿಲ್ ಅರೋರಾ ಆತ್ಮಹತ್ಯೆಗೆ ಶರಣಾಗಿದ್ದಾರಾ? ಅನ್ನೋದಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಮಲೈಕಾ ಅರೋರಾ 11 ವರ್ಷವಿರುವಾಗಲೇ ತಂದೆ ಅನಿಲ್ ಅರೋರಾ ಹಾಗೂ ತಾಯಿ ಜಾಯ್ಸ್ ಪಾಲಿಕಾರ್ಪ್ ಇಬ್ಬರೂ ಬೇರೆಯಾಗಿದ್ದರು. ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಮಲೈಕಾ ಅರೋರಾ ಪೋಷಕರ ವಿಚ್ಛೇದನದಿಂದ ತನ್ನ ಜೀವನದ ಮೇಲೆ ಎಷ್ಟೆಲ್ಲ ಪರಿಣಾಮ ಬೀರಿತು ಅನ್ನೋದನ್ನು ಹೇಳಿಕೊಂಡಿದ್ದರು. ಅಲ್ಲದೆ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತನ್ನ ತಾಯಿ ನಿಭಾಯಿಸಿದ್ದಕ್ಕೆ, ಅವರಿಗೆ ಮೆಚ್ಚುಗೆಯನ್ನೂ ಸೂಚಿಸಿದ್ದರು.

Bollywood actress Malaika Arora father Anil Arora dies by jumping of the building

ತಂದೆ ಅನಿಲ್ ಅರೋರಾ ಪಂಜಾಬ್ ಮೂಲದವರಾಗಿದ್ದು, ತಾಯಿ ಜಾಯ್ಸ್ ಪಾಲಿಕಾರ್ಪ್ ಕೇರಳ ಮೂಲದ ಕ್ರಿಶ್ವಿಯನ್ ಧರ್ಮಕ್ಕೆ ಸೇರಿದವರಾಗಿದ್ದರು. ಅನಿಲ್ ಅರೋರಾ ಮರ್ಚೆಂಟ್ ನೆವಿಯಲ್ಲಿ ಕೆಲಸ ಮಾಡುತ್ತಿದ್ದರು. 75 ವರ್ಷದ ಅನಿಲ್ ಅರೋರಾ ಕಳೆದ ವರ್ಷ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮಲೈಕಾ ಅರೋರಾ ಹಾಗೂ ಅವರ ತಾಯಿ ಆಸ್ಪತ್ರೆಗೆ ಹೋಗಿ ಆರೋಗ್ಯವನ್ನು ವಿಚಾರಿಸಿದ್ದರು. ಅವರಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇತ್ತಾ ಅನ್ನೋ ಮಾಹಿತಿ ರಿವೀಲ್ ಆಗಿರಲಿಲ್ಲ.

ಇನ್ನೊಂದು ಕಡೆ ಮಲೈಕಾ ಅರೋರಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಪೋಸ್ಟ್ ಮಾಡಿದ್ದರು. " ನಿಮ್ಮ ಖುಷಿಗಾಗಿ ಖುಷಿ ಪಡುವ ಹಾಗೂ ನಿಮ್ಮ ದುಃಖವನ್ನು ತಮ್ಮದೇ ದುಃಖವೆಂದುಕೊಳ್ಳುವ ಜನರನ್ನು ಯಾವಾಗಲೂ ಗಮನಿಸುತ್ತಿರಿ. ಅವರು ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಪಡೆಯಲು ಯೋಗ್ಯರು" ಎಂದು ಮಲೈಕಾ ಅರೋರಾ ಬರೆದುಕೊಂಡಿದ್ದರು. ಈ ಪೋಸ್ಟ್ ನೋಡಿ ಅರ್ಜುನ್ ಕಪೂರ್ ಜೊತೆಗಿನ ಬ್ರೇಕಪ್ ಬಗ್ಗೆ ಮಲೈಕಾ ಮಾತಾಡಿದ್ದಾರೆಂದು ಚರ್ಚೆಯಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಮಲೈಕಾಗೆ ಮತ್ತೊಂದು ಆಘಾತ ಸಂಭವಿಸಿದೆ.

More from Filmibeat

English summary
Bollywood actress Malaika Arora father Anil Arora dies by jumping of the building:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X