Kangana Ranaut: ಮಾಟ-ಮಂತ್ರ ಮಾಡಿಸಿದ್ದರ ಬಗ್ಗೆ ಬಾಯ್ಬಿಟ್ಟ ಕಂಗನಾ, ಪಾಯಲ್: ಏನಿದು ಕಥೆ?
ಬಾಲಿವುಡ್ ನಟಿ ಕಂಗನಾ ರನೌತ್ ಸದಾ ಸುದ್ದಿಯಲ್ಲಿರುವ ನಟಿ. ಒಂದಲ್ಲ ಒಂದು ಕಾರಣಕ್ಕೆ ಕಂಗನಾ ಸದ್ದಿಯಲ್ಲಿ ಇರುತ್ತಾರೆ. ಕಾಂಟ್ರವರ್ಸಿ ಅಂದ್ರೆ, ಕಂಗನಾ. ಕಂಗನಾ ಅಂದ್ರೆ ಕಾಂಟ್ರವರ್ಸಿ ಎನ್ನುವಂತಾಗಿದೆ. ಇದೇ ವೇಳೆ ಕಂಗನಾ ರನೌತ್ ರಿಯಾಲಿಟಿ ಶೋ ನಿರೂಪಕಿಯಾಗಿಯೂ ಸದ್ದು ಮಾಡುತ್ತಿದ್ದಾರೆ.
ಕಂಗನಾ ರನೌತ್ ವಿವಾದಿತ ಹೇಳಿಕೆಗಳಂತೆ ರಿಯಾಲಿಟಿ ಶೋ ಕೂಡ ಸೌಂಡ್ ಮಾಡುತ್ತಿದೆ. ರಿಯಾಲಿಟಿ ಶೋನಲ್ಲಿ ಕಂಗನಾ ಜೊತೆಗೆ ಭಾಗವಹಿಸಿದ ಸ್ಪರ್ಧಿಗಳೂ ಕೂಡ ಬೇಜಾನ್ ಸದ್ದು ಒಂದಲ್ಲ ಒಂದು ವಿವಾದ ಸೃಷ್ಟಿ ಮಾಡುತ್ತಲೇ ಇದ್ದಾರೆ. ಈ ಬಾರಿ ಬಾಲಿವುಡ್ ನಟಿ ಪಾಯಲ್ ರೊಹಟ್ಗಿ ಜೊತೆ ಕಂಗನಾ ರನೌತ್ ಕೂಡ ಸುದ್ದಿಯಲ್ಲಿದ್ದಾರೆ.
ಬಾಲಿವುಡ್ ಒಂದು ಸಾಗರವಿದ್ದಂತೆ. ಇಲ್ಲಿ ಅವಕಾಶಕ್ಕಾಗಿ ನಟಿ-ನಟಿಯರು ಪ್ರತಿ ದಿನ ಪರದಾಡುತ್ತಾರೆ. ಕೆಲವರು ಒಂದೊಳ್ಳೆ ಅವಕಾಶಕ್ಕಾಗಿ ಸಿಕ್ಕಾಪಟ್ಟೆ ಕಷ್ಟು ಪಡುತ್ತಾರೆ. ಇಂತಹ ಅವಕಾಶಕ್ಕೆ ಬಾಲಿವುಡ್ ನಟಿಯರು ಮಾಟ-ಮಂತ್ರ ಮಾಡಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಬಾಲಿವುಡ್ ನಟಿ ಪಾಯಲ್ ರೊಹಟ್ಗಿ ಹಾಗೂ ಕಂಗನಾ ರನೌತ್ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮಾಟ-ಮಂತ್ರ ಮಾಡಿಸಿದ್ದರಂತೆ ಪಾಯಲ್
ಕಂಗನಾ ನಡೆಸಿ ಕೊಡುತ್ತಿರುವ ರಿಯಾಲಿಟಿ ಶೋನಲ್ಲಿ ಬಾಲಿವುಡ್ ನಟಿ ಪಾಯಲ್ ಎಲಿಮಿನೇಷನ್ ಲೆವೆಲ್‌ನಲ್ಲಿದ್ದಾರೆ. ಇವರೊಂದಿಗೆ ಇನ್ನೂ ಕೆಲವು ಸ್ಪರ್ಧಿಗಳೂ ಇದ್ದಾರೆ. ಈ ಎಲಿಮಿನೇಷನ್‌ನಿಂದ ತಪ್ಪಿಸಿಕೊಳ್ಳಲು ಅವರ ಬಗ್ಗೆ ಗೊತ್ತಿರದ ರಹಸ್ಯವೊಂದನ್ನು ತಿಳಿಸಬೇಕಾಗಿತ್ತು. ಸ್ವತ: ಕಂಗನಾ ಎಲಿಮಿನೇಟ್ ಆಗಿರುವ ಸ್ಪರ್ಧಿಗಳಿಗೆ ಇಂತಹದ್ದೊಂದು ಟಾಸ್ಕ್ ನೀಡಿದ್ದರು. ಆಗ ಪಾಯಲ್ ಅವಕಾಶಕ್ಕಾಗಿ ಮಾಟ-ಮಂತ್ರ ಮಾಡಿಸಿದ್ದಾಗಿ ತಿಳಿಸಿದ್ದಾರೆ.

ನಟಿ ಪಾಯಲ್ ಹೇಳಿದ್ದೇನು?
ಕಂಗನಾ ಕೇಳಿದ ಪ್ರಶ್ನೆಗೆ ಬಾಲಿವುಡ್ ನಟಿ ಪಾಯಲ್ ಕಟು ಸತ್ಯವೊಂದನ್ನು ಹೊರಹಾಕಿದ್ದಾರೆ. ಸುಮಾರು 15 ವರ್ಷಗಳಿಂದ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು. ಒಂದು ಹಂತದಲ್ಲಿ ಸತತ ಸೋಲುಗಳನ್ನು ಕಂಡಿದ್ದರು. ಈ ವೇಳೆ ಅವಕಾಶಗಳೇ ಸಿಕ್ಕಿರಲಿಲ್ಲ. ಆಗ ಅವಕಾಶ ಪಡೆಯಲು ನಿರ್ಮಾಪಕರೊಬ್ಬರನ್ನು ವಶೀಕರಣ ಮಾಡಿಸಲು ಮಾಟ ಮಾಂತ್ರ ಮಾಡಿಸಿದ್ದೆ. ಮುಂಬೈನಲ್ಲೇ ವಶೀಕರಣ ಮಾಡುವ ವ್ಯಕ್ತಿಯನ್ನು ಸಂಪರ್ಕಿಸಿದ್ದಾಗಿ ಹೇಳಿದ್ದಾರೆ.

ಕಂಗನಾ ಬ್ಯಾಕ್ ಮ್ಯಾಜಿಕ್ ಬಗ್ಗೆ ಹೇಳಿದ್ದೇನು?
ಪಾಯಲ್ ಅವಕಾಶಕ್ಕಾಗಿ ಮಾಟ-ಮಂತ್ರ ಮಾಡಿಸಿದ್ದರ ಬಗ್ಗೆ ಹೇಳುತ್ತಿದ್ದಂತೆ ಕಂಗನಾ ಕೂಡ ಮುಕ್ತವಾಗಿ ಮಾತಾಡಿದ್ದಾರೆ. "ನನ್ನ ಬಾಯ್‌ಫ್ರೆಂಡ್ ಕೂಡ ನಾನು ಬ್ಲ್ಯಾಕ್ ಮ್ಯಾಜಿಕ್ ಮಾಡಿಸಿದ್ದೇನೆ." ಎಂದು ಆರೋಪ ಮಾಡಿದ್ದರು ಎಂದು ಹೇಳಿದ್ದಾರೆ. ಕಂಗನಾ ಬಾಲಿವುಡ್‌ನಲ್ಲಿ ಆಗತಾನೆ ನೆಲೆಯೂರುತ್ತಿದ್ದ ಕಾಲ ಆಗ ಕಂಗನಾ ಮೇಲೆ ಇಂತಹದ್ದೊಂದು ಆರೋಪ ಮಾಡಲಾಗಿತ್ತು. ಆ ಘಟನೆಯನ್ನು ಕಂಗನಾ ನೆನೆಪಿಸಿಕೊಂಡಿದ್ದಾರೆ.

ಪಾಯಲ್‌ಗೆ ಕಂಗನಾ ಬುದ್ದಿವಾದ
ಕೇವಲ ಆರು ವರ್ಷಗಳ ಹಿಂದಷ್ಟೇ ಕಂಗನಾ ರನೌತ್ ವಿರುದ್ಧ ಬ್ಲ್ಯಾಕ್ ಮ್ಯಾಜಿಕ್ ಆರೋಪ ಮಾಡಿದ್ದರು. ಈ ವೇಳೆ ಕಂಗನಾ ರನೌತ್ ಬಾಲಿವುಡ್ ನಟಿ ಪಾಯಲ್‌ಗೆ ಬುದ್ದಿ ಹೇಳಿದ್ದಾರೆ. "ಅವಕಾಶಕ್ಕಾಗಿ ಇದೆಲ್ಲವನ್ನೂ ಮಾಡಬೇಡಿ. ನೀವು ಬುದ್ದಿವಂತರು, ಪ್ರತಿಭಾವಂತರು. ನಿಮ್ಮ ಪ್ರತಿಭೆಯಿಂದಲೇ ಜನರ ಮನಸ್ಸನ್ನು ಗೆಲ್ಲಿ." ಎಂದು ಕಂಗನಾ ರನೌತ್ ಬುದ್ದಿವಾದ ಹೇಳಿದ್ದಾರೆ.


Click it and Unblock the Notifications










