»   » ಚಿತ್ರ ಬಿಡುಗಡೆ: ಛೇ.. ಹೀಗಾಗಬಾರದಿತ್ತು ಎಂದ ನಟಿ ಪ್ರಿಯಾಂಕ

ಚಿತ್ರ ಬಿಡುಗಡೆ: ಛೇ.. ಹೀಗಾಗಬಾರದಿತ್ತು ಎಂದ ನಟಿ ಪ್ರಿಯಾಂಕ

Posted By:
Subscribe to Filmibeat Kannada

ಬಹು ತಾರಾಗಣದ, ಬಹು ಕೋಟಿ ಬಜೆಟಿನ ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಚಿತ್ರೋದ್ಯಮದ ಲಾಭನಷ್ಟದ ದೃಷ್ಟಿಯಲ್ಲೂ ಒಳ್ಳೆಯದಲ್ಲ, ಪ್ರೇಕ್ಷಕ ಕೂಡಾ ಯಾವ ಚಿತ್ರ ನೋಡೋದು, ಬಿಡೋದು ಅನ್ನೋ ಗೊಂದಲಕ್ಕೀಡಾಗುವುದೂ ಸಹಜ.

ಬಾಲಿವುಡ್ ಚಿತ್ರೋದ್ಯಮದಲ್ಲಿ ಬಹು ತಾರಾಗಣದ ಚಿತ್ರಗಳು ಒಂದೇ ದಿನ ಬಿಡುಗಡೆಯಾದ ಉದಾಹರಣೆಗಳು ಕಮ್ಮಿ.

ಆದರೆ ಅಪರೂಪಕ್ಕೆ ಎನ್ನುವಂತೆ ಇದೇ ಬರುವ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಎರಡು ದೊಡ್ಡ ಬಜೆಟಿನ ಸಿನಿಮಾಗಳು ಒಂದೇ ದಿನದಂದು ತಮ್ಮ ಚಿತ್ರದ ಬಿಡುಗಡೆಗೆ ಪೂರ್ವ ತಯಾರಿ ನಡೆಸಿಕೊಂಡಿವೆ..

ಇದರಿಂದ ಎರಡೂ ಚಿತ್ರತಂಡಗಳಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ ಎನ್ನುವ ಸುದ್ದಿ ಬಾಲಿವುಡ್ ಲೋಕದಲ್ಲಿ ಹರಿದಾಡಲಾರಂಭಿಸಿದೆ.

ಆದರೆ, ಈ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಒಂದೇ ದಿನ ತಮ್ಮ ತಮ್ಮ ಚಿತ್ರಗಳು ಕ್ಲ್ಯಾಷ್ ಆಗುತ್ತಿರುವುದಕ್ಕೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹೀಗಾಗಬಾರದಿತ್ತು ಎಂದಿದ್ದಾರೆ. ಮುಂದೆ ಓದಿ..

ಸೆಟ್ಟೇರುವಾಗಲೇ ಡೇಟ್ ಘೋಷಣೆ

ಸಾಮಾನ್ಯವಾಗಿ ದೊಡ್ಡ ಬಜೆಟಿನ ಸಿನಿಮಾಗಳು ಸೆಟ್ಟೇರುವಾಗಲೇ ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸುವುದು ಹಿಂದಿ ಚಿತ್ರೋದ್ಯಮದಲ್ಲಿ ಹೆಚ್ಚುಕಮ್ಮಿ ನಡೆದುಕೊಂಡು ಬರುತ್ತಿರುವ ಪದ್ದತಿ.

ಬಾಜೀರಾವ್ ಮಸ್ತಾನಿ

ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಬಾಜೀರಾವ್ ಮಸ್ತಾನಿ ಚಿತ್ರ ಕ್ರಿಸ್ಮಸ್ ಸಮಯದಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ರಣವೀರ್ ಸಿಂಗ್, ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ ಮುಂತಾದವರಿದ್ದಾರೆ. (ಚಿತ್ರದಲ್ಲಿ ಸಂಜಯ್ ಲೀಲಾ ಬನ್ಸಾಲಿ)

ಪ್ರಿಯಾಂಕ ಬೇಸರ

ಎರಡು ದೊಡ್ಡ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು unfortunate ಎಂದಿರುವ ಪ್ರಿಯಾಂಕ, ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡುವುದು ನನ್ನ ಕೈಯಲಿಲ್ಲ ಎಂದಿದ್ದಾರೆ.

ದಿಲ್ವಾಲೆ

ರೋಹಿತ್ ಶೆಟ್ಟಿ ನಿರ್ದೇಶನದ ದಿಲ್ವಾಲೆ ಚಿತ್ರ ಕೂಡಾ ಇದೇ ಸಮಯದಲ್ಲಿ ಅಂದರೆ ಡಿಸೆಂಬರ್ ಹದಿನೆಂಟಕ್ಕೆ ಬಿಡುಗಡೆಯಾಗುತ್ತಿದೆ. ಶಾರೂಖ್ ನಿರ್ಮಿಸಿ, ನಟಿಸುತ್ತಿರುವ ಈ ಚಿತ್ರದ ಇತರ ತಾರಾಗಣದಲ್ಲಿ ಕಾಜೋಲ್, ವರುಣ್ ಧವನ್, ಕೃತಿ ಸಾನನ್ ಮುಂತಾದವರಿದ್ದಾರೆ.

ಮರಾಠಿ ಪೇಶ್ವೆ ಬಾಜಿರಾವ್

ಮರಾಠಿ ಪೇಶ್ವೆ ಬಾಜಿರಾವ್ ಜೀವನ ಕಥಾದಾರಿತ ಚಿತ್ರ ಬಾಜಿರಾವ್ ಮಸ್ತಾನಿ. ಬಾಜಿರಾವ್ ಪಾತ್ರದಲ್ಲಿ ರಣವೀರ್ ಸಿಂಗ್, ಈತನ ಮೊದಲ ಪತ್ನಿಯ ಪಾತ್ರದಲ್ಲಿ ಪ್ರಿಯಾಂಕ, ಎರಡನೇ ಪತ್ನಿಯ ಪಾತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ.

ಚೆನ್ನೈ ಎಕ್ಸ್ ಪ್ರೆಸ್ ನಂತರದ ಚಿತ್ರ

ನಿರ್ಮಾಪಕರಿಗೆ ಭರ್ಜರಿ ಫಸಲು ತಂದುಕೊಟ್ಟ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ನಂತರ ರೋಹಿತ್ ಶೆಟ್ಟಿ ಮತ್ತೆ ಶಾರೂಖ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

English summary
Bollywood actress Priyanka Chopra said, Bajirao Mastani and Dilwale movie release date clash is unfortunate.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada