ಭೀಕರ ರಸ್ತೆ ಅಪಘಾತ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ನಟಿ ಶಬಾನಾ ಅಜ್ಮಿ

ಭೀಕರ ರಸ್ತೆ ಅಪಘಾತದಲ್ಲಿ ಬಾಲಿವುಡ್ ನಟಿ ಶಬಾನಾ ಅಜ್ಮಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ನಟಿ ಶಬಾನಾ ಅಜ್ಮಿ ಪಾರಾಗಿದ್ದಾರೆ.

ಘಟನೆಯ ಹಿನ್ನಲೆ: ನಿನ್ನೆ (ಶನಿವಾರ) ಮುಂಬೈ-ಪೂಣೆ ಎಕ್ಸ್ ಪ್ರೆಸ್ ವೇಯಲ್ಲಿ ಡ್ರೈವರ್ ನೊಂದಿಗೆ ನಟಿ ಶಬಾನಾ ಅಜ್ಮಿ ಮತ್ತು ಪತಿ ಜಾವೇದ್ ಅಖ್ತರ್ ಪ್ರಯಾಣಿಸುತ್ತಿದ್ದರು. ಮಹಾರಾಷ್ಟ್ರದ ರಾಯ್ ಘಡ ಜಿಲ್ಲೆಯ ಖಾಲಾಪುರ (ಮುಂಬೈನಿಂದ ಸುಮಾರು 60 ಕಿ.ಮೀ ದೂರ) ಸಮೀಪದಲ್ಲಿ ಶಬಾನಾ ಅಜ್ಮಿ ಪ್ರಯಾಣಿಸುತ್ತಿದ್ದ ಕಾರು ಟ್ರಕ್ ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಾಯಗೊಂಡ ಶಬಾನಾ ಅಜ್ಮಿ ಮತ್ತು ಕಾರು ಚಾಲಕನನ್ನು ಕೂಡಲೆ ನವಿ ಮುಂಬೈನ ಎಂ.ಜಿ.ಎಂ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಬಳಿಕ ಕೋಕಿಲಬೆನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕಾರಿನಲ್ಲೇ ಇದ್ದ ಜಾವೇದ್ ಅಖ್ತರ್ ಗೆ ಸಣ್ಣ ಪುಟ್ಟ ಗಾಯಗಳಾಗಿವೆ.

bollywood-actress-shabana-azmi-injured-in-road-accident

ವರದಿಗಳ ಪ್ರಕಾರ, ಶಬಾನಾ ಅಜ್ಮಿ ತಲೆ ಹಾಗೂ ಬೆನ್ನೆಲುಬಿಗೆ ತೀವ್ರ ಪೆಟ್ಟು ಬಿದ್ದಿದೆ. ಶಬಾನಾ ಅಜ್ಮಿ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಶಬಾನಾ ಅಜ್ಮಿ ಅವರ ಕಾರು ಚಾಲಕನ ಅಜಾಗರೂಕತೆ ಹಾಗೂ ರಾಶ್ ಡ್ರೈವಿಂಗ್ ನಿಂದ ಅಪಘಾತ ನಡೆದಿದೆ ಎಂದು ಟ್ರಕ್ ಡ್ರೈವರ್ ಪೊಲೀಸರಿಗೆ ದೂರು ನೀಡಿದ್ದಾರೆ. ಟ್ರಕ್ ಡ್ರೈವರ್ ರಾಜೇಶ್ ಪಾಂಡುರಂಗ ಶಿಂಧೆ ಎಂಬುವರು ಶಬಾನಾ ಅಜ್ಮಿ ಕಾರು ಚಾಲಕ ಅಮಲೇಶ್ ಯೋಗೇಂದ್ರ ಕಾಮತ್ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ.

More from Filmibeat

English summary
Bollywood Actress Shabana Azmi injured in Road accident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X