"ಒಬ್ಬನೇ ಸಂಗಾತಿ ಅಂತ ಇಲ್ಲ.. ಹಲವರಿದ್ದಾರೆ.. ಅವರೊಂದಿಗೆ ಡೀಲ್ ಮಾಡೋದು ಕಷ್ಟ" ನಟಿಯ ಶಾಕಿಂಗ್ ಹೇಳಿಕೆ
ಸಿನಿಮಾರಂಗದಲ್ಲಿ ನಟಿಯರು ಹೇಳಿಕೆಗಳು ಕೆಲವೊಮ್ಮೆ ಹೊಸ ಸಂಚಲನವನ್ನು ಸೃಷ್ಟಿಸುತ್ತದೆ. ಅವರ ಗಟ್ಟಿ ನಿರ್ಧಾರಗಳು, ಪ್ರೀತಿ-ಪ್ರೇಮದ ವಿಷಯದಲ್ಲಿ ಅವರ ನಂಬಿಕೆಗಳು, ಜೀವನದ ಬಗ್ಗೆ ಅವರು ತೆಗೆದುಕೊಳ್ಳುವ ಗಟ್ಟಿ ನಿರ್ಧಾರಗಳು ಕೆಲವೊಮ್ಮೆ ಅಚ್ಚರಿ ಮೂಡಿಸುತ್ತವೆ. ಅದರಲ್ಲೂ ಬಾಲಿವುಡ್ ನಟಿಯರು ಬದುಕನ್ನು ನೋಡುವ ರೀತಿಯೇ ಬೇರೆ. ಅದರಲ್ಲೂ ರೊಮ್ಯಾಂಟಿಕ್ ಲೈಫ್ ಅನ್ನು ಬೇರೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಾರೆ.
ಸದ್ಯ ಬಾಲಿವುಡ್‌ನ ನಟಿಯೊಬ್ಬರು ಕೊಟ್ಟಿರುವ ಹೇಳಿಕೆ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 40 ವರ್ಷದ ನಟಿ ಶಹನಾ ಗೋಸ್ವಾಮಿ ತಮ್ಮ ರಿಲೇಷನ್‌ಶಿಪ್ ಬಗ್ಗೆ ಓಪನ್ ಆಗಿ ಕೊಟ್ಟಿರುವ ಹೇಳಿಕೆಗಳು ಈಗ ಚರ್ಚೆಯ ವಿಷಯವಾಗಿದೆ. ಈ ನಟಿ ಬಾಲಿವುಡ್‌ನ ಜನಪ್ರಿಯ ಸಿನಿಮಾಗಳಾದ 'ರಾಕ್ ಆನ್', 'ಫಿರಾಕ್', 'ಮಿಡ್ ನೈಟ್ ಚಿಲ್ಡ್ರನ್', 'ಹೀರೋಯಿನ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ಶಹನಾ ಗೋಸ್ವಾಮಿ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ತನ್ನ ರೊಮ್ಯಾಂಟಿಕ್ ಲೈಫ್ ಬಗ್ಗೆ ಓಪನ್ ಆಗಿ ಹೇಳಿಕೆ ಕೊಟ್ಟಿದ್ದಾರೆ. ತನಗೆ ಒಬ್ಬನೇ ಸಂಗಾತಿ ಇಲ್ಲ, ಹಲವು ಪಾರ್ಟ್ನರ್‌ಗಳು ಇದ್ದಾರೆ ಎಂದು ಹೇಳಿಕೊಂಡಿದ್ದಾರೆ. ತಾನೀಗ ಓಪನ್ ರಿಲೇಷನ್‌ಶಿಪ್‌ನಲ್ಲಿ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈಕೆ ಹೇಳಿಕೆಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ನಟಿ ಶಹನಾ ಗೋಸ್ವಾಮಿ ಇತ್ತೀಚೆಗೆ ಸಿದ್ದಾರ್ಥ್ ಕಣ್ಣನ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರ ರೊಮ್ಯಾಂಟಿಕ್ ಲೈಫ್ ಬಗ್ಗೆ ರಿವೀಲ್ ಮಾಡಿದ್ದು, ತನಗೆ ಒಬ್ಬನೇ ಸಂಗಾತಿ ಇಲ್ಲ. ಹಲವು ಸಂಗತಿಯರು ಇದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ. ತನಗೆ ಹಲವರೊಂದಿಗೆ ಸ್ನೇಹವಿದೆ. ಆ ಸ್ನೇಹ ಕೆಲವೊಮ್ಮೆ ದೈಹಿಕವಾಗಿ ಬದಲಾಗಿದೆ ಎಂದು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ಈ ಸಮಯದಲ್ಲಿ ನನಗೆ ಒಬ್ಬ ಪ್ರಮುಖ ಪಾರ್ಟ್ನರ್ ಅಂತ ಇಲ್ಲ. ನನಗೆ ಬಹಳ ಹಳೆಯ ಸ್ನೇಹಿತರು ಇದ್ದಾರೆ. ಆದರೆ ಅ ಸ್ನೇಹ ಸಾಂದರ್ಭಿಕವಾಗಿ ಇಲ್ಲ. ನಮಗೆಲ್ಲ ಬಹಳಷ್ಟು ಜನ ಸ್ನೇಹಿತರು ಇದ್ದಾರೆ. ಆದರೆ, ಪ್ರತಿಯೊಂದು ಸ್ನೇಹ ಕೂಡ ಡಿಫರೆಂಟ್. ನನಗೆ ಈ ಸಮಯದಲ್ಲಿ ಓಪನ್‌ನೆಸ್ ಅಂದರೆ, ಯಾರೊಂದಿಗೂ ಕ್ಲಿಯರ್ ಅಲ್ಲದ ಪಾರ್ಟ್ನರ್‌ಶಿಪ್ ಇಲ್ಲದೆ ಇರೋದು ಎಂದರ್ಥ. ಆದರೆ, ದೀರ್ಘಕಾಲದ ಬಾಂಡಿಂಗ್ ನಿಮ್ಮೊಂದಿಗೆ ಇರುತ್ತೆ ಎಂಬುವ ಫೀಲಿಂಗ್ ಇದೆ. ಅದು ಯಾವುದೇ ರೀತಿಯಲ್ಲಿ ಇದ್ದರೂ ಅಷ್ಟೇ" ಎಂದು ನಟಿ ಶಹನಾ ಗೋಸ್ವಾಮಿ ಹೇಳಿದ್ದಾರೆ.

ಇಷ್ಟೇ ಅಲ್ಲದೆ, ತಮ್ಮ ಸ್ನೇಹ ಹೇಗೆ ದೈಹಿಕವಾಗಿ ಬದಲಾಯ್ತು ಅನ್ನೋದನ್ನು ಹೇಳಿಕೊಂಡಿದ್ದಾರೆ. "ಕೆಲವೊಮ್ಮೆ ಕೇವಲ ಸ್ನೇಹವಷ್ಟೇ ಇತ್ತು. ಕೆಲವೊಮ್ಮೆ ಅದು ದೈಹಿಕವಾಗಿ ಬದಲಾಗಿದೆ. ಅ ಸಂಬಂಧಕ್ಕೆ ಇಂತಹದ್ದೇ ದಿಕ್ಕಿನಲ್ಲಿ ಹೋಗಬೇಕು ಅನ್ನುವ ಒತ್ತಡ ಇರಲಿಲ್ಲ. ಇದರ ಅರ್ಥ ಸಿಂಪಲ್. ಪ್ರೀತಿ ಮತ್ತು ಸ್ನೇಹ. ಮಾನವನಿಂದ ಪ್ರೀತಿಯನ್ನು ಪಡೆದುಕೊಳ್ಳುವುದೇ ಸ್ನೇಹ" ಎಂದು ನಟಿ ಶಹನಾ ಗೋಸ್ವಾಮಿ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ತಾನು ಒಬ್ಬ ವ್ಯಕ್ತಿಯೊಂದಿಗೆ ಮಾತ್ರ ಯಾಕೆ ಸೀಮಿತವಾಗಿರಬೇಕು ಎಂದು ಶಹನಾ ಹೇಳಿದ್ದಾರೆ. ಸಂಬಂಧಗಳನ್ನು ಡೀಲ್ ಮಾಡುವುದು ಅಷ್ಟು ಸುಲಭವಲ್ಲ. ಅಸೂಯೆಗಳೊಂದಿಗೆ ಡೀಲ್ ಮಾಡಬೇಕಾಗುತ್ತೆ ಎಂದು ಹೇಳಿದ್ದಾರೆ. ತಮ್ಮ ಜೀವನದಲ್ಲಿ ಯಾವುದೂ ರಹಸ್ಯವಾಗಿ ಉಳಿದಿಲ್ಲ ಎಂದಿದ್ದು, ಬೇರೆ ಸಂಗತಿಯೊಂದಿಗೆ ಆತ್ಮೀಯವಾಗಿ ಇರುವುದು ಉಳಿದ ಪಾರ್ಟ್ನರ್‌ಗಳಿಗೂ ಗೊತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications
