ಶಿಲ್ಪಾ ಶೆಟ್ಟಿ ಹಾಲಿವುಡ್ ನಟ ರಿಚರ್ಡ್ ಗೇರ್ ಮುತ್ತಿನ ಪ್ರಕರಣ: 16 ವರ್ಷಗಳ ಬಳಿಕ ನಟಿಗೆ ರಿಲೀಫ್!
ಬಾಲಿವುಡ್ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಸಿನಿಮಾ, ಫಿಟ್ನೆಸ್‌ನಿಂದಷ್ಟೇ ಫೇಮಸ್ ಅಲ್ಲ. ಒಂದಿಷ್ಟು ವಿವಾದಗಳಿಂದಲೂ ಕರಾವಳಿಯ ಬ್ಯೂಟಿ ಜನಪ್ರಿಯರಾಗಿದ್ದಾರೆ. 2007ರಲ್ಲಿ ನಡೆದಿದ್ದ ಕಿಸ್ಸಿಂಗ್ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಗೆ ರಿಲೀಫ್ ಸಿಕ್ಕಿದೆ. 16 ವರ್ಷಗಳ ಬಳಿಕ ಬಳಿಕ ನಟಿ ನಿಟ್ಟುಸಿರು ಬಿಡುವಂತಾಗಿದೆ.
2007ರಲ್ಲಿ ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಾಲಿವುಡ್ ನಟ ರಿಚರ್ಡ್ ಗೇರ್ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಕೆನ್ನೆಗೆ ಮುತ್ತಿಟ್ಟಿದ್ದರು. ಸಾರ್ವಜನಿಕವಾಗಿ ಮುತ್ತಿಟ್ಟಿದ್ದಕ್ಕೆ ಶಿಲ್ಪಾ ಶೆಟ್ಟಿ ಹಾಗೂ ರಿಚರ್ಡ್ ಗೇರ್ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಹಲವೆಡೆ ಶಿಲ್ಪ ಶೆಟ್ಟಿಯ ವಿರುದ್ಧ ಪ್ರಕರಣವನ್ನು ದಾಖಲು ಮಾಡಲಾಗಿತ್ತು.

ಸುಮಾರು 16 ವರ್ಷಗಳ ಬಳಿಕ ಈ ಕಿಸ್ಸಿಂಗ್ ಕೇಸ್‌ಗೆ ಸಂಬಂಧ ಪಟ್ಟಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ರಿಲೀಫ್ ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮುಂಬೈ ಸೆಷನ್ ಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಲಾಗಿತ್ತು. ಈಗ ಶಿಲ್ಪಾ ಶೆಟ್ಟಿಗೆ ಮುಂಬೈ ಸೆಷನ್ ಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಅರ್ಜಿಯನ್ನು ವಜಾ ಮಾಡಿದೆ.
ಏನಿದು ಕಿಸ್ಸಿಂಗ್ ಘಟನೆ?
2007ರಲ್ಲಿ ರಾಜಸ್ಥಾನದಲ್ಲಿ ಏಡ್ಸ್ ಬಗ್ಗೆ ಜಾಗೃತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಾಲಿವುಡ್ ನಟ ರಿಚರ್ಡ್ ಗೇರ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನ ನೀಡಲಾಗಿತ್ತು. ಈ ವೇಳೆ ರಿಚರ್ಡ್ ಗೇರ್ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯನ್ನು ಅಪ್ಪಿಕೊಂಡು ಮುತ್ತಿಟ್ಟಿದ್ದರು. ಈ ದೃಶ್ಯ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಸಂಬಂಧ ಮುಂಡವರ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಕೇಸ್ ದಾಖಲು ಮಾಡಲಾಗಿತ್ತು. 2017ರಲ್ಲಿ ಈ ಕೇಸ್ ಅನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮುಂಬೈಗೆ ಸ್ಥಳಾಂತರ ಮಾಡಲಾಗಿತ್ತು. ಜನವರಿ 2022ನಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಕೇಸ್ ಅನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನೆ ಮಾಡಿ ಮತ್ತೆ ರಾಜಸ್ಥಾನ ಪೊಲೀಸರು ಕೇಸ್ ದಾಖಲಿಸಿದ್ದರು. ಆದರೆ, ಮುಂಬೈನ ಸೆಷನ್ ಕೋರ್ಟ್ ಅಪರಾಧ ಪರಿಷ್ಕರಣೆ ಕೇಸ್ ಅನ್ನು ವಜಾಗೊಳಿಸಲಾಗಿದೆ.
ಸಿನಿಮಾಗಳಲ್ಲಿ ಬ್ಯುಸಿ ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿಗೆ ಸದ್ಯ ಕಿಸ್ಸಿಂಗ್ ಸೀನ್‌ನಿಂದ ರಿಲೀಫ್ ಸಿಕ್ಕಿದೆ. ರಿಯಾಲಿಟಿ ಶೋಗಳು ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಧ್ರುವ ಸರ್ಜಾ ನಟಿಸುತ್ತಿರುವ 'ಕೆಡಿ: ದಿ ವಿಲನ್' ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ 'ಕೆಡಿ' ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಸತ್ಯವತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಸತ್ಯವತಿಯ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದ್ದು, ಎರಡನೇ ಹಂತದ ಶೂಟಿಂಗ್ ಅನ್ನು ಆರಂಭ ಮಾಡಿದೆ.


Click it and Unblock the Notifications











