ಜಾಹೀರ್ ಇಕ್ಬಾಲ್ ಜೊತೆ ಹಸೆಮಣೆ ಮಣೆ ಏರುವುದಕ್ಕೆ ಸಜ್ಜಾದ್ರಾ ಸೋನಾಕ್ಷಿ ಸಿನ್ಹಾ?
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ 'ಹೀರಾಮಂಡಿ' ವೆಬ್ ಸೀರಿಸ್ ಮೂಲಕ ಮತ್ತೆ ಪ್ರತ್ಯಕ್ಷ ಆಗಿದ್ದರು. ಬಹಳ ದಿನಗಳಿಂದ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ, ವೆಬ್ ಸೀರಿಸ್‌ಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ. ಇದೇ ವೇಳೆ ಸೋನಾಕ್ಷಿ ಸಿನ್ಹಾ ಮದುವೆ ಆಗುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಸೋನಾಕ್ಷಿ ಸಿನ್ಹಾ ತನ್ನ ಬಹು ದಿನದ ಗೆಳೆಯ ಜಾಹೀರ್ ಇಕ್ವಾಲ್ ಅವರೊಂದಿಗೆ ವಿವಾಹವಾಗುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸೋನಾಕ್ಷಿ ಸಿನ್ಹಾ ಮದುವೆ ಆಮಂತ್ರಣ ಪತ್ರಿಕೆ ಹರಿದಾಡುತ್ತಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಸೋನಾಕ್ಷಿ ಸಿನ್ಹಾ ಮದುವೆ ಎಂದು ಬಾಲಿವುಡ್‌ನಲ್ಲಿ ಗುಲ್ಲೆದ್ದಿದೆ.

ಸೋನಾಕ್ಷಿ ಸಿನ್ಹಾ ಹಾಗೂ ಜಾಹೀರ್ ಇಕ್ಬಾಲ್ ಇಬ್ಬರ ಹಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ಬಗ್ಗೆ ಬಾಲಿವುಡ್‌ನಲ್ಲಿ ಗುಸಗುಸು ಆಗಾಗ ಕೇಳಿ ಬರುತ್ತಲೇ ಇದೆ. ಈಗ ಇದೇ ತಿಂಗಳ ಕೊನೆಯಲ್ಲಿ ಬಾಯ್‌ಫ್ರೆಂಡ್ ಜೊತೆ ಸೋನಾಕ್ಷಿ ಸಿನ್ಹಾ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ಜಾಹೀರ್ ಇಕ್ವಾಲ್ ಮುಂಬೈನಲ್ಲಿ ಇದೇ ಜೂನ್ 23ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ವರದಿಗಳಾಗಿವೆ. ಮ್ಯಾಗಜೀನ್ ರೀತಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಡಿಸೈನ್ ಮಾಡಲಾಗಿದ್ದು, ಇದರಲ್ಲಿ " ಇದೂವರೆಗೂ ಬಂದ ಗಾಳಿ ಸುದ್ದಿಗಳೆಲ್ಲವೂ ನಿಜ" ಎಂದು ಬರೆಯಲಾಗಿದೆ.
ಜೂನ್ 23ಕ್ಕೆ ಮದುವೆ ಬಳಿಕವೇ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿದ್ದು, ಮದುವೆಗೆ ಬರುವ ಅತಿಥಿಗಳಿಗೆ ಫಾರ್ಮಲ್ಸ್ ಡ್ರೆಸ್‌ನಲ್ಲಿ ಬರುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ. ಇದೂವರೆಗೂ ತಮ್ಮಿಬ್ಬರ ಡೇಟಿಂಗ್ ವಿಷಯವನ್ನು ಇವರಿಬ್ಬರೂ ಖಾಸಗಿಯಾಗಿಯೇ ಇಟ್ಟಿದ್ದರು. ಸದ್ಯಕ್ಕೆ ಇವರ ಮದುವೆ ಮಾಧ್ಯಮಗಳಲ್ಲಷ್ಟೇ ಹರಿದಾಡುತ್ತಿದ್ದು, ಈ ಬಗ್ಗೆ ಇನ್ನೂ ಸೋನಾಕ್ಷಿ ಸಿನ್ಹಾ ಹಾಗೂ ಜಾಹೀರ್ ಇಕ್ವಾಲ್ ಕಡೆಯಿಂದ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಸೋನಾಕ್ಷಿ ಸಿನ್ಹಾ ಹಾಗೂ ಜಾಹೀರ್ ಇಕ್ಬಾಲ್ ಕಳೆದ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಲೇ ಇದೆ. ಆದರೆ, ತಮ್ಮಿಬ್ಬರ ನಡುವಿನ ಸಂಬಂಧವನ್ನು ಈ ಜೋಡಿ ಖಾಸಗಿಯಾಗಿಯೇ ಇಟ್ಟಿದೆ. ಆದರೆ, ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಇಬ್ಬರೂ ಜೊತೆಗಿರುವ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಆ ಫೋಟೊ ಹಾಗೂ ವಿಡಿಯೋಗಳು ಇಬ್ಬರು ಡೇಟಿಂಗ್ ಮಾಡುತ್ತಿರುವ ಬಗ್ಗೆ ಸುಳಿವು ನೀಡಿತ್ತು.
ಸೋನಾಕ್ಷಿ ಸಿನ್ಹಾ ಬಾಲಿವುಡ್‌ನ ದಿಗ್ಗಜ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರ ಪುತ್ರಿ. 'ದಬಾಂಗ್' ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ನಟಿ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ನಿರಂತರ ಫ್ಲಾಸ್ ಸಿನಿಮಾಗಳನ್ನು ನೀಡಿದ ಬಳಿಕ ವೆಬ್ ಸೀರಿಸ್ ಕಡೆ ಮುಖ ಮಾಡಿದ್ದರು. ಇನ್ನು ಜಾಹೀರ್ ಇಕ್ಬಾಲ್ ಕೂಡ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದರು. 'ನೋಟ್ ಬುಕ್' ಹಾಗೂ 'ಡಬಲ್ ಎಕ್ಸ್‌ಎಲ್' ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಆ ಸಿನಿಮಾಗಳು ಗೆಲ್ಲಲಿಲ್ಲ.


Click it and Unblock the Notifications











