2 ಕೋಟಿ ರೂ. ಕಾರಿನಲ್ಲಿ ಬಂದಿಳಿದರೂ ಸನ್ನಿಗೆ ಸಮಾಧಾನವಿಲ್ಲ: ಡ್ರೀಮ್ ಕಾರು ಬೇರೆನೇ ಇದೆ!
ಸನ್ನಿ ಲಿಯೋನಿ ಬಾಲಿವುಡ್‌ನ ಬಹುಬೇಡಿಕೆಯ ನಟಿ. ಸನ್ನಿ ಒಂದು ಹಾಡಿಗೆ ಹೆಜ್ಜೆ ಹಾಕಬೇಕು ಅಂದ್ರೂ ದುಬಾರಿ ಮೊತ್ತವನ್ನೇ ಕೊಡಬೇಕು. ಉತ್ತರದಿಂದ ದಕ್ಷಿಣದವರೆಗೆ ಎಲ್ಲೇ ಹೋದರೂ, ಐಟಂ ಸಾಂಗ್‌ಗೆ ಸನ್ನಿ ಲಿಯೋನಿ ಬೇಕೇಬೇಕು. ಅದರಲ್ಲೂ ಭಾರತದಲ್ಲೀಗ ಸನ್ನಿ ಹವಾ ಜೋರಾಗಿಯೇ ಇದೆ.
ಸನ್ನಿ ಲಿಯೋನಿ ಖದರ್ ಹೇಗಿದೆ ಅನ್ನೋದನ್ನುಪ್ರತ್ಯೇಕವಾಗಿ ಹೇಳಬೇಕಿಲ್ಲ. ಕರ್ನಾಟಕದಲ್ಲಿ ಸನ್ನಿಗಾಗಿಯೇ ಅಭಿಮಾನಿಗಳು ಸಂಘ ಕೂಡ ಹುಟ್ಟಿಕೊಂಡಿದೆ. ಇತ್ತೀಚೆಗಷ್ಟೇ ಈ ಮಾದಕ ನಟಿ 'ಡಿಂಗರಿ ಬಿಲ್ಲಿ' ಕನ್ನಡದ ಹಾಡೊಂದಕ್ಕೆ ಭರ್ಜರಿ ಹೆಜ್ಜೆ ಹಾಕಿ ಹೋಗಿದ್ದಾರೆ. ಸದ್ಯ ಬಾಲಿವುಡ್ ಸಿನಿಮಾ, ರಿಯಾಲಿಟಿ ಶೋ ಹಾಗೂ ಐಟಂ ಸಾಂಗ್ ಅಂತ ಬ್ಯುಸಿಯಾಗಿರೋ ನಟಿ ಲೈಫ್ ಸ್ಟೈಲ್ ಕೂಡ ಅಷ್ಟೇ ದುಬಾರಿಯಾಗಿದೆ.
ಸನ್ನಿ ಲಿಯೋನಿಗೆ ದುಬಾರಿ ಕಾರುಗಳ ಬಗ್ಗೆ ಕ್ರೇಜ್ ಹೆಚ್ಚಿದೆ. ಈಗಾಗಲೇ ಸನ್ನಿ ಬಳಿ ಹಲವು ದುಬಾರಿ ಕಾರು, ಬಂಗಲೆಗಳಿವೆ. ದೇಶ-ವಿದೇಶದಲ್ಲಿ ಸನ್ನಿ ಲಿಯೋನಿ ಆಸ್ತಿಯನ್ನು ಹೊಂದಿದ್ದಾರೆ. ಆದರೆ, ಆಕೆಗಿರುವ ಕ್ರೇಜ್ ಅಂದರೆ, ಅದು ದುಬಾರಿ ಕಾರುಗಳು. ಇತ್ತೀಚೆಗೆ ಸನ್ನಿ ಲಿಯೋನಿ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಅಷ್ಟಕ್ಕೂ ಈ ಕಾರಿನ ಬೆಲೆ ಎಷ್ಟು ವಿಶೇಷತೆಯೇನು? ಅಂತ ತಿಳಿಯಲು ಮುಂದೆ ಓದಿ.

ಸನ್ನಿ ಲಿಯೋನಿ ಹೊಸ ಕಾರು!
ಸನ್ನಿ ಲಿಯೋನಿಗೆ ಹೈ ಎಂಡ್ ಕಾರುಗಳು ಅಂದ್ರೆ, ಬಲು ಇಷ್ಟ. ಆಕೆಯ ಬಳಿ ಈಗಾಗಲೇ ಸನ್ನಿ ಲಿಯೋನಿಯ ದುಬಾರಿ ಕಾರುಗಳಿವೆ. ಆದರೆ, ದಿನ ನಿತ್ಯದ ಕೆಲಸಗಳಿಗಾಗಿ ಸನ್ನಿ ಲಿಯೋನಿ ಬಿಎಂಡ್ಲ್ಯೂ 7 ಸೀರಿಸ್ ಕಾರುಗಳನ್ನು ಬಳಸುತ್ತಿದ್ದರು. ಆದ್ರೀಗ ಸನ್ನಿ ಈ ಕಾರನ್ನು ಬದಲಾಯಿಸಿ, ಹೊಸ ಜನರೇಷನ್ ಕಾರನ್ನು ಖರೀದಿ ಮಾಡಿದ್ದಾರೆ. ಅದುವೇ ಬಿಎಂಡ್ಲ್ಯೂ 740Li. ಇತ್ತೀಚೆಗೆ ಸನ್ನಿ ಲಿಯೋನಿ ಇದೇ ಕಾರಿನಲ್ಲಿ ಏರ್‌ಪೋರ್ಟ್‌ನಲ್ಲಿ ಬಂದು ಇಳಿದಾಗ ಆ ಕಾರ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸನ್ನಿ ಕಾರಿನ ಬೆಲೆ ಎಷ್ಟು? ವಿಶೇಷತೆಯೇನು?
ಸನ್ನಿ ಲಿಯೋನಿ ಖರೀದಿಸಿದ ಬಿಎಂಡ್ಲ್ಯೂ 740Li ಸೀರಿಸ್‌ನ ಬೆಲೆ ಸುಮಾರು 1.5 ಕೋಟಿ ರೂ. ಆದರೆ ಇದು ಎಕ್ಸ್ ಶೋ ರೂಂ ಬೆಲೆ. ಆನ್ ರೋಡ್‌ಗೆ ಬರುವ ವೇಳೆಗೆ ಈ ಕಾರಿನ ಬೆಲೆ 2 ಕೋಟಿ ರೂ. ದಾಟಲಿದೆ. ಸನ್ನಿ ಲಿಯೋನಿ ಭಾರತಕ್ಕೆ ಬಂದಾಗಲೆಲ್ಲಾ ಇದೇ ಕಾರನ್ನು ಬಳಸುತ್ತಾರೆ. ಅಂದ್ಹಾಗೆ ಈ ಕಾರಿನ ವಿಶೇಷತೆ ಏನೆಂದರೆ, 3.0 ಲೀಟರ್ ವಿ6 ಟರ್ಬೋ ಚಾರ್ಜ್ ಪೆಟ್ರೋಲ್ ಇಂಜಿನ್ ಇದೆ. 8 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇದ್ದು, ಇದು 0-100 ಕಿ.ಮೀ ವೇಗವನ್ನು ಕೇವಲ 5.6 ಸೆಕೆಂಡುಗಳಲ್ಲಿ ಪಡೆದುಕೊಳ್ಳಲಿದೆ.

ಸನ್ನಿ ಡ್ರೀಮ್ ಕಾರು ಯಾವುದು?
ಸನ್ನಿ ಲಿಯೋನಿ ಬಳಿ ದುಬಾರಿ ಕಾರುಗಳಿವೆ. ಎಷ್ಷ್ಟೇ ದುಬಾರಿ ಕಾರುಗಳಿದ್ದರೂ, ಆಕೆಯ ಡ್ರೀಮ್ ಕಾರು ಬೇರೆನೇ ಇದೆ. ಸನ್ನಿಗೆ ಹಿಂದೂಸ್ತಾನ್ ಅಂಡಾಸಿಡ್ ಕಾರು ಅಂದರೆ ಬಲು ಪ್ರೀತಿ. ಅದರಲ್ಲೂ ಅಂಡಾಸಿಡರ್ ಕಾರಿನಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿ, ಅದಕ್ಕೆ ಗುಲಾಬಿ ಬಣ್ಣ ಹಚ್ಚಿದ ಕಾರಬೇಕೆಂದು ಈ ಹಿಂದೆ ಹೇಳಿದ್ದರು. ಅಲ್ಲದೆ ಆ ಕಾರಿನಲ್ಲಿ ಆಟೋಮ್ಯಾಟಿಕ್ ಗೇರ್ ಅನ್ನು ಅಳವಡಿಸಿರಬೇಕು ಎಂದು ಹೇಳಿದ್ದರು. ಅಲ್ಲದೆ ಕಾರಿನ ಒಳ ವಿನ್ಯಾಸ ಪಿಂಕ್ ಹಾಗೂ ವೈಟ್ ಇರಬೇಕಂತೆ.
Recommended Video

ಅಮೆರಿಕಾದಲ್ಲಿ ದುಬಾರಿ ಕಾರು!
ಇಂಡೋ-ಕೆನೆಡಿಯನ್ ನಟಿ ಸನ್ನಿ ಲಿಯೋನಿ ಬಿಡುವಿದ್ದಾರೆ ಅಮೆರಿಕಗೆ ಹೋಗಿ ಬರುತ್ತಾರೆ. ಅಲ್ಲಿ ಸನ್ನಿ ಬಳಿ ದುಬಾರಿ ಕಾರು ಇದೆ. ಸನ್ನಿ ಲಿಯೋನಿ ಬಳಿ ಮಾಸೆರಾಟಿ ಘಿಬ್ಲಿ ನೆರ್ರಿಸಿಮೊ ಕಾರು ಇದೆ. ಅಮೆರಿಕಾಗೆ ಹೋದಾಗಲೆಲ್ಲಾ ಇದೇ ಕಾರನ್ನು ಬಳಸುತ್ತಾರೆ. ಭಾರತದಲ್ಲಿ ಇದ್ದಾಗ ಸನ್ನಿ ಲಿಯೋನಿ ಬಿಎಂಡ್ಲ್ಯೂ ಹೊಸ ಕಾರು 740Li ಕಾರಿನಲ್ಲಿ ಪ್ರಯಾಣ ಮಾಡುತ್ತಾರೆ. ಕಾರು ಅಂದರೆ ಪ್ರಾಣ ಬಿಡುವ ಸನ್ನಿ ಲಿಯೋನಿ ಭಾರತದಲ್ಲಿ ಬೇರೆ ಬೇರೆ ದುಬಾರಿ ಕಾರಿನಲ್ಲಿ ಹೆಚ್ಚು ಪ್ರಯಾಣ ಮಾಡಿದ್ದಾರೆ.


Click it and Unblock the Notifications











