3 ಬಾರಿ ಮದುವೆ ಆಗೋ ಅವಕಾಶವಿದ್ದರೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಮದುವೆ ಆಗಿಲ್ಲವೇಕೆ?

ಬಾಲಿವುಡ್ ನಟಿ ಸುಶ್ಮಿತಾ ಸೇನ್ ಎರಡು ಮಕ್ಕಳ ತಾಯಿ. ರೆನೀ ಮತ್ತು ಅಲಿಶಾ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದಾರೆ. ಇತ್ತೀಚೆಗೆ ಬಾಲಿವುಡ್‌ನ ಮತ್ತೊಬ್ಬ ನಟಿ ಟ್ವಿಂಕಲ್ ಖನ್ನಾ ಜೊತೆ ನಡೆದ ಮಾತುಕತೆಯಲ್ಲಿ ಕೆಲವು ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ. ಅದರಲ್ಲಿ ಮದುವೆ ಕೂಡ ಒಂದು.

ಸಿನಿಮಾ, ಕೆಲಸದಿಂದ ಶುರುವಾಗಿ ಕೊನೆಗೆ ಮದುವೆವರೆಗೂ ಸುಶ್ಮಿತಾ ಸೇನ್ ಮನಬಿಚ್ಚಿ ಮಾತಾಡಿದ್ದಾರೆ. ಇದೇ ವೇಳೆ ತಾನು ಮದುವೆಯಾಗದೆ ಇರಲು ನಿರ್ಧರಿಸಿದ್ದು ಏಕೆ ಎಂಬುವುದನ್ನು ಕೂಡ ರಿವೀಲ್ ಮಾಡಿದ್ದಾರೆ. ಹಾಗಿದ್ದರೆ, ಸುಶ್ಮಿತಾ ಸೇನ್ ಮದುವೆ ಬಗ್ಗೆ ಏನು ಹೇಳಿದ್ದಾರೆ? ತಿಳಿಯಲು ಮುಂದೆ ಓದಿ.

ಸುಶ್ಮಿತಾ ಸೇನ್ ಮದುವೆಯಾಗಿಲ್ಲ ಯಾಕೆ?
ಸುಶ್ಮಿತಾ ಮದುವೆ ಆಗಿಲ್ಲ ಯಾಕೆ?

ಮಾಜಿ ಭುವನ ಸುಂದರಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಮನಸ್ಸು ಮಾಡಿದ್ದರೆ ಮದುವೆ ಆಗುವುದಕ್ಕೆ ಹುಡುಗರು ಸಾಲು ನಿಲ್ಲುತ್ತಿದ್ದರು. ಆದರೂ ಸುಶ್ಮಿತಾ ಸೇನ್ ಮದುವೆಯಾಗಿಲ್ಲ. ಪ್ರೀತಿಯಲ್ಲಿ ಬಿದ್ದಿದ್ದರೂ ಅದೂ ಬ್ರೇಕಪ್ ಆಯ್ತು. ಅಷ್ಟಕ್ಕೂ ತಾನು ಯಾಕೆ ಮದುವೆ ಆಗಿಲ್ಲ ಎಂಬುದನ್ನು ನಟಿ ರಿವೀಲ್ ಮಾಡಿದ್ದಾರೆ. ತಾನು ಮದುವೆ ಆಗದೆ ಇರುವುದು ಇಬ್ಬರು ಹೆಣ್ಣು ಮಕ್ಕಳ ಸಲುವಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಲೈಫ್‌ನಲ್ಲಿ ಅದ್ಭುತ ಪುರುಷರ ಭೇಟಿ

ನನ್ನ ಲೈಫ್‌ನಲ್ಲಿ ಅದ್ಭುತ ಪುರುಷರ ಭೇಟಿ

"ನನ್ನ ಬದುಕಿನಲ್ಲಿ ಇಂಟ್ರೆಸ್ಟಿಂಗ್ ಪುರುಷರು ಬಂದಿರುವುದು ನನ್ನ ಅದೃಷ್ಟ. ನಾನು ಮದುವೆಯಾಗದೆ ಇರುವುದಕ್ಕೆ ಏಕೈಕ ಕಾರಣವೆಂದರೆ ಅವರು ನಿರಾಶೆಗೊಂಡರು. ನನ್ನ ಮಕ್ಕಳಿಗೂ ಮದುವೆಗೂ ಯಾವುದೇ ಸಂಬಂಧವಿಲ್ಲ. ನನ್ನ ಇಬ್ಬರೂ ಮಕ್ಕಳೂ ನನ್ನ ಬದುಕಿನಲ್ಲಿ ಬಂದವರನ್ನು ಎರಡೂ ಕೈಗಳಿಂದ ಸ್ವಾಗತಿಸಿ ಒಪ್ಪಿಕೊಂಡರು. ಮುಖ ತಿರುಗಿಸಿಕೊಳ್ಳಲೇ ಇಲ್ಲ. ಪ್ರತಿಯೊಬ್ಬರಿಗೂ ಪ್ರೀತಿ ಹಾಗೂ ಗೌರವ ನೀಡಿದರು. ಅದನ್ನು ನೋಡುವುದೇ ಸುಂದರ ಎನಿಸಿತ್ತು." ಎಂದು ಸುಶ್ಮಿತಾ ಸೇನ್ ಹೇಳಿದ್ದಾರೆ.

ದೇವರು ನನ್ನನ್ನು ಬಚಾವ್ ಮಾಡಿದ

ದೇವರು ನನ್ನನ್ನು ಬಚಾವ್ ಮಾಡಿದ


" ಮದುವೆ ಆಗಲು ನನಗೆ ಮೂರು ಬಾರಿ ಅವಕಾಶವಿತ್ತು.ಪ್ರತಿ ಭಾರಿಯೂ ದೇವರು ನನ್ನನ್ನು ಬಚಾವ್ ಮಾಡಿದ. ಅವರ ಜೀವನದಲ್ಲಿ ಅದೆಂಥಾ ವಿಪತ್ತು ಬರಬಹುದಿತ್ತು ಎಂಬುವುದನ್ನು ನಾನು ಹೇಳಲಾರೆ. ದೇವರೇ ನನ್ನನ್ನು ರಕ್ಷಿಸಿದ. ಮಕ್ಕಳನ್ನು ದೇವರು ರಕ್ಷಿಸುತ್ತಿದ್ದ, ಹಾಗಾಗಿ ಇಂತಹ ಅಫೇರ್‌ಗಳಲ್ಲಿ ಬಿಡುವುದಕ್ಕೆ ಅವನಿಗೆ ಇಷ್ಟವಿರಲಿಲ್ಲ." ಎಂದು ಸುಶ್ಮಿತಾ ಸೇನ್ ಹೇಳಿದ್ದಾರೆ.

ದೇವರು ನನ್ನನ್ನು ಬಚಾವ್ ಮಾಡಿದ

ದೇವರು ನನ್ನನ್ನು ಬಚಾವ್ ಮಾಡಿದ

" ಮದುವೆ ಆಗಲು ನನಗೆ ಮೂರು ಬಾರಿ ಅವಕಾಶವಿತ್ತು.ಪ್ರತಿ ಭಾರಿಯೂ ದೇವರು ನನ್ನನ್ನು ಬಚಾವ್ ಮಾಡಿದ. ಅವರ ಜೀವನದಲ್ಲಿ ಅದೆಂಥಾ ವಿಪತ್ತು ಬರಬಹುದಿತ್ತು ಎಂಬುವುದನ್ನು ನಾನು ಹೇಳಲಾರೆ. ದೇವರೇ ನನ್ನನ್ನು ರಕ್ಷಿಸಿದ. ಮಕ್ಕಳನ್ನು ದೇವರು ರಕ್ಷಿಸುತ್ತಿದ್ದ, ಹಾಗಾಗಿ ಇಂತಹ ಅಫೇರ್‌ಗಳಲ್ಲಿ ಬಿಡುವುದಕ್ಕೆ ಅವನಿಗೆ ಇಷ್ಟವಿರಲಿಲ್ಲ." ಎಂದು ಸುಶ್ಮಿತಾ ಸೇನ್ ಹೇಳಿದ್ದಾರೆ.

ರೋಹ್ಮನ್ ಜೊತೆ ಬ್ರೇಕಪ್

ರೋಹ್ಮನ್ ಜೊತೆ ಬ್ರೇಕಪ್


ಸುಶ್ಮಿತಾ ಸೇನ್ ಇತ್ತೀಚೆಗೆ ತನ್ನ ಬಾಯ್‌ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಬ್ರೇಕಪ್ ಮಾಡಿಕೊಂಡು ಸುದ್ದಿಯಲ್ಲಿದ್ದರು. ರೋಹ್ಮನ್ ಶಾಲ್ 2018ರಲ್ಲಿ ಇನ್‌ಸ್ಟಾಗ್ರಾಂನಲ್ಲಿ ಸುಶ್ಮಿತಾ ಸೇನ್‌ಗೆ ಪರಿಚಯವಾಗಿದ್ದ ಎನ್ನಲಾಗಿದೆ. ಇನ್ನೊಂದು ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಕೂಡ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಕಾರಣಕ್ಕೆ ಸುದ್ದಿಯಲ್ಲಿದ್ದರು. ರಾಜೀವ್ ಶೇನ್ ತನ್ನ ಪತ್ನಿ ಚಾರು ಅಸ್ಪೊರಾಗ ಡಿವೋರ್ಸ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

More from Filmibeat

English summary
Bollywood Actress Sushmita Sen Reveals Why She Never Got Married, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X