ಬಾಲಿವುಡ್‌ ಸಮಸ್ಯೆಯನ್ನ ಅವರ ಮುಂದೆಯೇ ಹೇಳಿದ ಪ್ರಿಯಾಮಣಿ..!

ಉತ್ತರ.. ದಕ್ಷಿಣ.. ಯಾವುದು ಬೆಸ್ಟ್ ಯಾವುದು ವರ್ಸ್ಟ್ ಅನ್ನುವ ಚರ್ಚೆ ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ಈ ವಿಚಾರದ ಮೇಲೆ ಡಿಬೇಟ್ ನಡೆಯುತ್ತಾನೇ ಇದೆ. ನಾವೇ ಸರ್ವಶ್ರೇಷ್ಠ ಎಂಬ ಬಾಲಿವುಡ್ ನವರ ಸರ್ವಾಧಿಕಾರಿ ಧೋರಣೆ, ಕಾಲ..ಕಾಲಕ್ಕೆ.. ಜಗಜ್ಜಾಹೀರು ಆಗಿದೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೃಷ್ಣ ಸುಂದರಿ ಪ್ರಿಯಾಮಣಿ ತಮ್ಮ ಮನದ ಮಾತನ್ನ ಹಂಚಿಕೊಂಡಿದ್ದಾರೆ.

ಹೌದು. ಪ್ರಿಯಾಮಣಿ ಅಭಿನಯದ ಮೈದಾನ್ ಇಂದು ಬಿಡುಗಡೆಯಾಗಿದೆ. ಪ್ರೀಮಿಯರ್ ಪ್ರದರ್ಶನದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಇದೇ ಚಿತ್ರದ ಪ್ರಚಾರದ ಸಮಯದಲ್ಲಿ ತಮ್ಮ ಅನುಭವದ ಕಥೆ ಹಂಚಿಕೊಂಡಿರುವ ಪ್ರಿಯಾಮಣಿ, ಬಾಲಿವುಡ್‌ಕ್ಕಿಂತ ಸೌತ್ ಸಿನಿಮಾ ಇಂಡಸ್ಟ್ರೀನೇ ಮೇಲು ಎಂಬರ್ಥದಲ್ಲಿ ಮಾತನಾಡಿದ್ದಾರೆ.

Bollywood And South film industries are totally different says Priyamani

ಬಾಲಿವುಡ್ ಬಬಲ್ ಯುಟ್ಯೂಬ್ ಚಾನೆಲ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾಮಣಿ, ಬಾಲಿವುಡ್‌ನವರ ಬದ್ಧತೆಯನ್ನ ಪರೋಕ್ಷವಾಗಿ ಪ್ರಶ್ನೆ ಮಾಡಿದ್ದಾರೆ. ಇಲ್ಲಿ ಒಂದು ಸಿನಿಮಾ ಆರಂಭವಾದರೆ ಅವರ ಅವರ ಕೆಲಸವನ್ನ ಅವರು ಮಾಡ್ತಾರೆ, ಅವರ ಕೆಲಸ ಆದ ನಂತರ ಸುಮ್ಮನಾಗ್ತಾರೆ. ಬೇರೆ ವಿಭಾಗದ ಕಡೆ ತಲೆಯನ್ನೂ ಹಾಕಲ್ಲ ಎಂದಿರುವ ಪ್ರಿಯಾಮಣಿ, ದಕ್ಷಿಣ ಚಿತ್ರರಂಗದಲ್ಲಿ ಈ ತರಹದ ಕೆಲಸ ಯಾರು ಮಾಡಲ್ಲ. ಅಲ್ಲಿ ಚಿತ್ರವೊಂದು ಬೇಗ ಮುಗಿಯಲು ಎಲ್ಲರೂ ಕೈ ಜೋಡಿಸುತ್ತಾರೆ ಎಂದಿದ್ದಾರೆ. ಟೀಮ್ ವರ್ಕ್ ದಕ್ಷಿಣದಲ್ಲಿ ಎದ್ದು ಕಾಣುತ್ತೆ ಅಂದಿದ್ದಾರೆ

ಇನ್ನೂ.. ಬಾಲಿವುಡ್ ಹಾಗೂ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಪಾತ್ರಕ್ಕೆ ಕಲಾವಿದರನ್ನ ಆಯ್ಕೆ ಮಾಡುವ ಪ್ರಕ್ರಿಯೆಯೇ ಸಂಪೂರ್ಣ ಭಿನ್ನ ಎಂಬ ವಿಚಾರ, ಪ್ರಿಯಾಮಣಿಗೆ ತಮ್ಮ ಈ ಸುಧೀರ್ಘವಾದ ಪ್ರಯಾಣದಲ್ಲಿ ಮನದಟ್ಟಾಗಿದೆ. ಹಿಂದಿಯಲ್ಲಿ ಅವಕಾಶದ ಬಾಗಿಲು ತೆರೆಯುವುದು ಕೇವಲ ಕಾಸ್ಟಿಂಗ್ ಡೈರೆಕ್ಟರ್ ಅವರ ಕಚೇರಿಯಲ್ಲಿ ಮಾತ್ರ ಎಂದಿರುವ ಪ್ರಿಯಾಮಣಿ ಚಿತ್ರಕ್ಕೆ ನಿಮ್ಮನ್ನ ಕರೆಯುವುದು.. ಆಡಿಷನ್ ಗಳನ್ನ ತೆಗೆದುಕೊಳ್ಳುವುದು ಎಲ್ಲವನ್ನೂ ಈ ಕಾಸ್ಟಿಂಗ್ ಡೈರೆಕ್ಟರ್ ಗಳೇ ಮಾಡುತ್ತಾರೆ ಎಂದಿದ್ದಾರೆ.

ಕಾಸ್ಟಿಂಗ್ ಡೈರೆಕ್ಟರ್‌ಗಳಿಗೆ ಓಕೆ ಆದ ಬಳಿಕವಷ್ಟೇ ಆ ಚಿತ್ರ ತಂಡದ ಜೊತೆ ಮಾತುಕತೆ ನಡೆಯುತ್ತದೆ, ಒಂದು ವೇಳೆ ಅವರಿಗೆ ಓಕೆ ಆಗದೇ ಇದ್ದಲ್ಲಿ ಬಂದ ದಾರಿಗೆ ಸುಂಕ ಎಂದು ಅಂದುಕೊಂಡು ಮರಳಿ ಮನೆಗೆ ಬರಬೇಕಾಗುತ್ತೆ ಎಂದು ಪ್ರಿಯಾಮಣಿ ಹೇಳಿದ್ದಾರೆ. ಆದರೆ ಅದೇ ದಕ್ಷಿಣದಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರ ಕಡೆಯಿಂದನೇ ನೇರವಾಗಿ ಕರೆ ಬರುತ್ತೆ. ಇಲ್ಲಿ ಇವರ ನಿರ್ಧಾರವೇ ಅಂತಿಮ ಎಂದಿದ್ದಾರೆ ಪ್ರಿಯಾಮಣಿ.

ಕೇವಲ ಇಷ್ಟೇ ಅಲ್ಲ ಕಾಸ್ಟೂಮ್ ಹಾಗೂ ಮೇಕಪ್ ಬಗ್ಗೆಯೂ ಪ್ರಿಯಾಮಣಿ ಮಾತನಾಡಿದ್ದಾರೆ. ಈ ಎರಡು ವಿಭಾಗದಲ್ಲಿ ಪುರುಷರೇ ಹೆಚ್ಚು ಕೆಲಸ ಮಾಡುತ್ತಾರೆ. ವಿಶೇ‍ಷ ಅಂದರೆ ದಕ್ಷಿಣದಲ್ಲಿ ಅವರು ಮಾಡುವ ಕೆಲಸಕ್ಕೆ ಅವರನ್ನು ಗುರುತಿಸುತ್ತಾರೆ.

ಇನ್ನೂ 2002ರಲ್ಲಿ ನಾನು ಚಿತ್ರರಂಗಕ್ಕೆ ಬಂದಾದ ಸೆಟ್‌ನಲ್ಲಿ ನಾಯಕಿಯನ್ನ ಹೊರತು ಪಡಿಸಿ, ಕಣ್ಣಾಯ್ಸಿದ ಕಡೆಯೆಲ್ಲ ಪುರುಷರೇ ಕಾಣಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಮಹಿಳೆಯರು ಕೂಡ ಸೆಟ್‌ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಪ್ರಿಯಾಮಣಿ ಹೇಳಿದ್ದಾರೆ.

ಒಟ್ನಲ್ಲಿ ಸೌತ್ ಹಾಗೂ ನಾರ್ತ್ ಇವೆರಡು ಕಡೆ ಚಿತ್ರರಂಗದಲ್ಲಿ ಬೇರೆ ಬೇರೆ ಸಂಪ್ರದಾಯಗಳಿವೆ. ಎರಡು ಕಡೆ ಬೇರೆ ಬೇರೆ ಆಲೋಚನೆಗಳಿವೆ ಎಂದಿದ್ದಾರೆ. ಇನ್ನೂ ಇದೇ ಸಂದರ್ಶನದಲ್ಲಿ ಚೆನೈ ಎಕ್ಸ್ ಪ್ರೆಸ್ ಹಾಗೂ ಜವಾನ್ ಚಿತ್ರದ ನಂತರ ಶಾರುಖ್ ಖಾನ್ ಜೊತೆ ಮತ್ತೊಮ್ಮೆ ತೆರೆ ಹಂಚಿಕೊಳ್ಳುವ ಆಸೆಯನ್ನೂ ಕೂಡ ಪ್ರಿಯಾಮಣಿ ವ್ಯಕ್ತಪಡಿಸಿದ್ದಾರೆ

More from Filmibeat

English summary
During The Promotion Of Her Latest Release Maidaan Priyamani Opens Up About Bollywood VS South Debate
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X