For Quick Alerts
  ALLOW NOTIFICATIONS  
  For Daily Alerts

  ರೀಮಾ ಲಾಗೂ ಅಗಲಿಕೆಗೆ ಸಂತಾಪ ಸೂಚಿಸಿದ ಬಾಲಿವುಡ್

  By Suneel
  |

  ಮರಾಠಿ ರಂಗಭೂಮಿ ಮೂಲಕ ಸಿನಿಮಾ ಅಂಗಳಕ್ಕೆ ಕಾಲಿಟ್ಟು ಮರಾಠಿ ಹಾಗೂ ಹಿಂದಿ ಚಿತ್ರಗಳಲ್ಲಿ ಮಾತೃ ಹೃದಯಿ ತಾಯಿಯಾಗಿ ನಟಿಸಿದ್ದ ಖ್ಯಾತ ನಟಿ ರೀಮಾ ಲಾಗೂ(59) ಮುಂಬಯಿಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.[ಬಾಲಿವುಡ್ ನ ನೆಚ್ಚಿನ 'ಅಮ್ಮ' ಇನ್ನಿಲ್ಲ]

  ಅನಾರೋಗ್ಯದಿಂದ ಹಲವು ದಿನಗಳಿಂದ ಬಳಲುತ್ತಿದ್ದ ರೀಮಾ ಲಾಗೂ ರವರು ಮುಂಬೈನ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ರೀಮಾ ಲಾಗೂ ರವರು ಪುತ್ರಿ ಮೃಣ್ಮಯಿ ಮತ್ತು ಅಳಿಯ ವಿನಯ್ ವಾಯ್ ಕುಲ್ ಅವರನ್ನು ಅಗಲಿದ್ದಾರೆ.

  ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ತಾಯಿ ಪಾತ್ರದ ನಿರ್ವಹಣೆಯಿಂದ ಹೆಚ್ಚು ಖ್ಯಾತಿ ಗಳಿಸಿದ್ದ ರೀಮಾ ಲಾಗೂ ಬಾಲಿವುಡ್ ನ ಹಲವು ಸ್ಟಾರ್ ನಟರಿಗೆ ತಾಯಿಯಾಗಿ ನಟಿಸಿದ್ದರು. 'ಮೈನೇ ಪ್ಯಾರ್ ಕೀಯಾ' ಚಿತ್ರದಲ್ಲಿ ಸಲ್ಮಾನ್ ಖಾನ್ ಗೆ ತಾಯಿಯಾಗಿ ನಟಿಸಿದ್ದು ಹೆಚ್ಚು ಹೆಸರು ತಂದುಕೊಟ್ಟಿತ್ತು. ಇಂದು ಇವರ ಅಗಲಿಕೆಗೆ ಬಾಲಿವುಡ್ ಕಂಬಿನಿ ಮಿಡಿದಿದ್ದು, ಟ್ವಿಟರ್ ಮೂಲಕ ಹಲವು ತಾರೆಯರು ಸಂತಾಪ ಸೂಚಿಸಿದ್ದಾರೆ. ಮುಂದೆ ಓದಿ...

  ಮಾಧುರಿ ದೀಕ್ಷಿತ್

  ಮಾಧುರಿ ದೀಕ್ಷಿತ್

  ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ರವರು ರೀಮಾ ಲಾಗೂ ರವರು ವಿಧಿವಶರಾಗಿರುವುದಕ್ಕೆ ನೊಂದು, "ರೀಮಾ ಲಾಗೂ ರವರು ಸುಂದರವಾದ ಅತ್ಯಾಕರ್ಷಣೆಯ ಪ್ರತಿಭೆ. ಅವರು ಅಗಲಿದ ಕುಟುಂಬಕ್ಕೆ ನಮ್ಮ ಕಡೆಯಿಂದ ಸಾಂತ್ವನ ವಿರಲಿ" ಎಂದು ಟ್ವೀಟ್ ಮಾಡಿದ್ದಾರೆ.

  ಅನುಷ್ಕಾ ಶರ್ಮಾ

  ಅನುಷ್ಕಾ ಶರ್ಮಾ

  "ರೀಮಾ ಲಾಗೂ ರವರ ಅಭಿನಯ ಮತ್ತು ಅವರ ಪ್ರೀತಿಯನ್ನು ಪರದೆ ಮೇಲೆ ನೋಡುತ್ತಲೇ ಬೆಳೆದೆ. ಅವರ ಹಠಾತ್ ನಿಧನ ಹೃದಯಕಲಕಿದೆ" ಎಂದು ಬೇಸರದಿಂದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಟ್ವೀಟಿಸಿದ್ದಾರೆ.

  ಕರಣ್ ಜೋಹರ್

  ಕರಣ್ ಜೋಹರ್

  "ನಿಜವಾಗಿಯೂ ಅತೀ ದುಃಖದ ವಿಷಯವಿದು. ಅವರು ಸುಂದರ ಮತ್ತು ಅಸಾಧಾರಣ ನಟಿಯಾಗಿದ್ದರು. ಅವರಿಗೆ ನಿರ್ದೇಶನ ಮಾಡುವ ಭಾಗ್ಯ ನನಗೆ ದೊರೆತಿತ್ತು" -ಕರಣ್ ಜೋಹರ್, ಬಾಲಿವುಡ್ ನಟ-ನಿರ್ಮಾಪಕ

  ಅಮಿತಾಬ್ ಬಚ್ಚನ್

  ಅಮಿತಾಬ್ ಬಚ್ಚನ್

  ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್, "ಶಾಕಿಂಗ್ ಮತ್ತು ನಂಬಲೂ ಸಾಧ್ಯವೇ ಆಗದ ಸುದ್ದಿ ಕೇಳಿದೆ. ಅತ್ಯುತ್ತಮ ಪ್ರತಿಭೆ ರೀಮಾ ಲಾಗೂ ರವರು ಅತೀ ಚಿಕ್ಕವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ತುಂಬಾ ದುಃಖಾವಾಗುತ್ತಿದೆ" ಎಂದು ಟ್ವೀಟಿಸ ಕಂಬನಿ ಮಿಡಿದಿದ್ದಾರೆ.

  ಪ್ರಿಯಾಂಕಾ ಚೋಪ್ರಾ

  ಪ್ರಿಯಾಂಕಾ ಚೋಪ್ರಾ

  "ಕಲಾ ಕ್ಷೇತ್ರಕ್ಕೆ ಮತ್ತು ಸಿನಿಮಾ ಇಂಡಸ್ಟ್ರಿಗೆ ತುಂಬಲಾರದ ನಷ್ಟ. ನೀವು ಯಾವಾಗಲೂ ನಮ್ಮ ಅಚ್ಚುಮೆಚ್ಚಿನ ತೆರೆಮೇಲಿನ ತಾಯಿ ಆಗಿದ್ರಿ. ನನ್ನ ಕಡೆಯಿಂದ ಅಗಲಿದ ಕುಟುಂಬಕ್ಕೆ ಸಾಂತ್ವನ ಸೂಚಿಸುತ್ತೇನೆ" -ಪ್ರಿಯಾಂಕಾ ಚೋಪ್ರಾ, ಬಾಲಿವುಡ್ ನಟಿ

  ರಿಷಿ ಕಪೂರ್

  ರಿಷಿ ಕಪೂರ್

  "ರೀಮಾ ಲಾಗೂ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಒಳ್ಳೆಯ ಆತ್ಮೀಯ ಗೆಳತಿ. ಹೃತ್ಪೂರ್ವಕ ಸಾಂತ್ವನ ಕೋರುತ್ತೇನೆ" ಎಂದು ಬಾಲಿವುಡ್ ನಟ-ನಿರ್ಮಾಪಕ ರಿಷಿ ಕಪೂರ್ ರವರು ದುಃಖದಿಂದ ಅವರ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

  ಅಕ್ಷಯ್ ಕುಮಾರ್

  ಅಕ್ಷಯ್ ಕುಮಾರ್

  "ರೀಮಾ ಲಾಗು ರವರು ಮೃತಪಟ್ಟ ವಿಷಯ ಕೇಳಿ ನೋವುಂಟಾಗಿದೆ. ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿತ್ತು. ಅತ್ಯುತ್ತಮ ನಟಿ ಮತ್ತು ಉತ್ತಮ ವ್ಯಕ್ತಿತ್ವದವರು. ಅವರು ಅಗಲಿದ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೇನೆ" -ಅಕ್ಷಯ್ ಕುಮಾರ್, ಬಾಲಿವುಟ್ ನಟ

  ನರೇಂದ್ರ ಮೋದಿ

  ನರೇಂದ್ರ ಮೋದಿ

  ಭಾರತದ ಪ್ರಸ್ತುತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ರವರು, "ರೀಮಾ ಲಾಗೂ ರವರು ಬಹುಮುಖ ನಟಿ. ಅವರ ನಿಧನದಿಂದ ಸಿನಿಮಾ ಮತ್ತು ಕಿರುತೆರೆ ಕ್ಷೇತ್ರಕ್ಕೆ ದೊಡ್ಡ ಮಟ್ಟದ ನಷ್ಟವಾಗಿದೆ. ಅವರ ಅಗಲಿಗೆಯಿಂದ ನೋವಾಗಿದೆ" ಎಂದು ರೀಮಾ ಲಾಗೂ ರವರ ಕುಟುಂಬಕ್ಕೆ ಸಾಂತ್ವನ ಹೇಳಿ ಟ್ವೀಟ್ ಮಾಡಿದ್ದಾರೆ.

  English summary
  Bollywood Veteran actress Reema Lagoo passes away at 59, this morning after suffering a cardiac arrest. She passed away at the Kokilaben Dhirubhai Ambani hospital in Mumbai. Bollywood Actors, filmakers and Prime Minister Narendra Modi condolences to Reema Lagoo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X