»   » ಬಾಲಿವುಡ್ ನ ನೆಚ್ಚಿನ 'ಅಮ್ಮ' ಇನ್ನಿಲ್ಲ

ಬಾಲಿವುಡ್ ನ ನೆಚ್ಚಿನ 'ಅಮ್ಮ' ಇನ್ನಿಲ್ಲ

Posted By:
Subscribe to Filmibeat Kannada

ಮರಾಠಿ ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದ ಖ್ಯಾತ ನಟಿ ರೀಮಾ ಲಾಗೂ (59) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರೀಮಾ ಅವರು ಮುಂಬೈನ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮರಾಠಿ ರಂಗಭೂಮಿ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದ ರೀಮಾ ಲಾಗೂ ಅವರು ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸ್ಟಾರ್ ನಟರಿಗೆ ತಾಯಿ ಪಾತ್ರಗಳನ್ನ ನಿರ್ವಹಿಸಿರುವ ರೀಮಾ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದೇ ತಾಯಿ ಪಾತ್ರಗಳಿಗೆ.

Marati Actress Reema Lagoo Passed away

ಸಲ್ಮಾನ್ ಖಾನ್ ಅಭಿನಯದ 'ಮೈನೇ ಪ್ಯಾರ್ ಕೀಯಾ' ಚಿತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡ ರೀಮಾ, ನಂತರ ಬಾಲಿವುಡ್ ನಲ್ಲಿ 'ಖಯಾಮತ್ ಸೇ ಖಯಾಮತ್ ತಕ್', 'ಆಶಿಕಿ', 'ಹಮ್ ಆಪ್ ಕೇ ಹೈ ಕೌನ್', 'ಕಲ್ ಹೋ ನಾ ಹೋ', 'ಕುಚ್ ಕುಚ್ ಹೋತಾ ಹೈ, 'ಹಮ್ ಸಾಥ್ ಸಾಥ್ ಹೈನ' ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ರೀಮಾ ಅಭಿನಯಿಸಿದ್ದರು.

1958 ರಲ್ಲಿ ರೀಮಾ ಲಾಗು ಮುಂಬೈನಲ್ಲಿ ಜನಿಸಿದರು. ತಾಯಿ ಮಂದಾಕಿಣಿ ಭಾಡ್ಭಾಡೆ ಮರಾಠಿ ರಂಗಭೂಮಿಯಲ್ಲಿ ಕಲಾವಿದೆಯಾಗಿದ್ದರು. ರೀಮಾ ಅವರು ಕೂಡ ಹೈ ಸ್ಕೂಲ್ ಓದುವಾಗಲೇ ರಂಗಭೂಮಿಯಲ್ಲಿ ಆಸಕ್ತಿ ಬೆಳಸಿಕೊಂಡಿದ್ದರು. ನಂತರ 1970 ರಿಂದ ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಇಲ್ಲಿಯವರೆಗೂ ಸುಮಾರು 90 ಕ್ಕೂ ಅಧಿಕ ಚಿತ್ರಗಳಲ್ಲಿ ರೀಮಾ ಲಾಗು ನಟಿಸಿದ್ದಾರೆ. ಅಷ್ಟೇ ಅಲ್ಲದೇ, ರೀಮಾ ಲಾಗೂ ಅವರು ಕಿರುತೆರೆಯ 'ತು ತು ಮೈ ಮೈ' ಮತ್ತು 'ಶ್ರೀಮಾನ್ ಶ್ರೀಮತಿ' ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ಅಮೋಘ ಅಭಿನಯ ನೀಡಿದ್ದರು.

English summary
Veteran actor Reema Lagoo passed away this morning after suffering a cardiac arrest. She passed away at the Kokilaben Dhirubhai Ambani hospital in Mumbai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada