"ಸಲ್ಮಾನ್ ಖಾನ್‌ಗೆ ಶಕ್ತಿನೇ ಇಲ್ಲ.. ತಂದೆಯಾಗಲು ಆತ ಅಸಮರ್ಥ"; ನಿರ್ದೇಶಕನ ವಿವಾದಾತ್ಮಕ ಹೇಳಿಕೆ

ಇತ್ತೀಚೆಗೆ ಸಲ್ಮಾನ್ ಖಾನ್ ವಿರುದ್ಧ ಟೀಕೆಗಳನ್ನು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಒಂದ್ಕಡೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದರೆ, ಇನ್ನೊಂದು ಕಡೆ ಬಾಲಿವುಡ್‌ನ ವಿವಾದಾತ್ಮಕ ನಿರ್ದೇಶಕ ಅಭಿನವ್ ಕಶ್ಯಪ್ ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸಲ್ಮಾನ್ ಖಾನ್ ವಿರುದ್ಧ ತಿರುಗಿಬಿದ್ದಿರುವ ಇ ನಿರ್ದೇಶಕ ಮತ್ತೊಂದು ಕಮೆಂಟ್ ಮಾಡಿದ್ದು, ಇದು ಎಲ್ಲೆಡೆ ವೈರಲ್ ಆಗುತ್ತಿದೆ.

ಸಲ್ಮಾನ್ ಖಾನ್ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ 'ದಬಾಂಗ್' ಸಿನಿಮಾದ ನಿರ್ದೇಶಕ ಅಭಿನವ್ ಕಶ್ಯಪ್. ಇವರೇ ಈಗ ಸಲ್ಮಾನ್ ಖಾನ್ ನಿದ್ದೆ ಕೆಡಿಸುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನಗಳನ್ನು ನೀಡುತ್ತಿರುವ ಅಭಿನವ್ ಬಾಲಿವುಡ್‌ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಟೀಕೆಗಳಿಗೆ ಸಲ್ಮಾನ್ ಖಾನ್ ಬಿಗ್ ಬಾಸ್ ಶೋನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಅದಕ್ಕೆ ಅಭಿನವ್ ಕಶ್ಯಪ್ ತಿರುಗೇಟು ಕೊಟ್ಟಿದ್ದಾರೆ.

Bollywood controversial director Abhinav Kashyap says Salman Khan is unfit to be a father

'ದಬಾಂಗ್' ಸಿನಿಮಾ ಮಾಡುವಾಗ ಸಲ್ಮಾನ್ ಖಾನ್, ಅವರ ಸಹೋದರ ಅರ್ಬಾಜ್ ಖಾನ್ ಹಾಗೂ ತಂಡದ ಸದಸ್ಯರು ಹಸ್ತಕ್ಷೇಪ ಮಾಡಿದ್ದರೆಂದು ಆರೋಪಿಸಿದ್ದರು. ಈ ಸಿನಿಮಾದಿಂದ ತನಗೆ ಸಿಗಬೇಕಿದ ಮನ್ನಣೆಯನ್ನು ನೀಡಲಿಲ್ಲ ಎಂದು ಆರೋಪ ಮಾಡಿದ್ದರು. ಈಗ ಸಲ್ಮಾನ್ ಖಾನ್ ಶಕ್ತಿ ಹೀನ ವ್ಯಕ್ತಿ. ಅವರು ತಂದೆಯಾಗಲು ಅಸಮರ್ಥ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಇಂತಹ ಗಂಭೀರ ಆರೋಪ ಮಾಡಿದ್ದೇಕೆ? ತಿಳಿಯುವುದಕ್ಕೆ ಮುಂದೆ ಓದಿ.

ಅಭಿನವ್ ಕಶ್ಯಪ್ ಹಾಗೂ 'ಘಜನಿ' ನಿರ್ದೇಶಕ ಮುರುಗದಾಸ್ ವಿರುದ್ಧ ಸಲ್ಮಾನ್ ಖಾನ್ ಬಿಗ್ ಬಾಸ್ ವೇದಿಕೆ ಮೇಲೆ ತಿರುಗೇಟು ಕೊಟ್ಟಿದ್ದರು. "ದಬಾಂಗ್ ನಿರ್ದೇಶಕರಿಗೆ ಕೆಲಸವಿಲ್ಲ. ಈ ಕಾರಣಕ್ಕೆ ಅವರು ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನ ಮೇಲೆ ಹೀಗೆ ಕೆಸರು ಎರಚುವ ಬದಲು ಯಾವುದಾದರೂ ಒಳ್ಳೆಯ ಕೆಲಸ ಮಾಡಿಕೊಂಡಿದ್ದರೆ ಒಳ್ಳೆಯದು" ಎಂದು ತಿರುಗೇಟು ನೀಡಿದ್ದರು. ಇದೇ ವೇಳೆ ಮುರುಗದಾಸ್ ಮಾಡಿದ್ದ ಕಮೆಂಟ್‌ಗೂ ಟಾಂಗ್ ಕೊಟ್ಟಿದ್ದರು.

ಸಲ್ಮಾನ್ ಖಾನ್ ಬಿಗ್ ಬಾಸ್ ವೇದಿಕೆ ಮೇಲೆ ಹೀಗೆ ಟಾಂಗ್ ಕೊಡುತ್ತಿದ್ದಂತೆ ಅಭಿನವ್ ಕಶ್ಯಪ್ ಕೆಂಡಾಮಂಡಲವಾಗಿದ್ದರು. ಸಲ್ಮಾನ್ ಖಾನ್ ತನ್ನ ಮೇಲೆ ಆರೋಪ ಮಾಡುತ್ತಿದ್ದಂತೆ ಕೆರಳಿ ಕೆಂಡವಾಗಿದ್ದಾರೆ. "ಸಲ್ಮಾನ್ ಖಾನ್ ಥರ್ಡ್ ಕ್ಲಾಸ್ ವ್ಯಕ್ತಿ. ಕೆಟ್ಟ ಮನುಷ್ಯ. ಅವರು ದಬಾಂಗ್ ಅಲ್ಲ. ಅವರು ನಪುಂಸಕ. ಅವರಿಗೆ ಮಕ್ಕಳನ್ನು ಮಾಡುವ ಸಾಮರ್ಥ್ಯವಿಲ್ಲ. ನನಗೆ ನೀತಿ ಪಾಠ ಹೇಳುತ್ತಾರೆ" ಎಂದು ಟೀಕೆ ಮಾಡಿದ್ದಾರೆ.

Bollywood controversial director Abhinav Kashyap says Salman Khan is unfit to be a father

ಅಭಿನವ್ ಕಶ್ಯಪ್ ಆರೋಪಗಳು ಇಲ್ಲಿಗೆ ನಿಂತಿಲ್ಲ. ಕೆಲಸ ಇಲ್ಲದ ಕಾರಣ ಹೀಗೆಲ್ಲ ಮಾತಾಡುತ್ತಿದ್ದಾರೆಂಬ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. "ಒಂದು ಕೆಜಿ ಟಾಲ್ಕಮ್ ಪೌಡರ್ (ಡ್ರಗ್ಸ್) ಮೂಗಿಗೆ ಹಾಕೊಂಡು, ಅದರ ಪ್ರಭಾವದಿಂದ ಹೀಗೆ ಮಾತನಾಡುತ್ತಿರಬೇಕು. ಖಾನ್ ಹೀರೋಗಳು ನೀಡಿದ ಪಾರ್ಟಿಗಳಲ್ಲಿ ನಾನು ಭಾಗವಹಿಸಿದ್ದೇನೆ. ಬಾಲಿವುಡ್‌ನಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತೆ" ಎಂದಿದ್ದಾರೆ.

ಹಾಗೇ "ಸಲ್ಮಾನ್ ಖಾನ್ ಅವರ ಕೆಟ್ಟ ಮುಖವನ್ನು ಬಯಲು ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ. ಇದರಿಂದ ಅವರು ನನ್ನನ್ನು ಕೊಲ್ಲಿಸಬಹುದು. ಅದಕ್ಕೂ ನಾನು ಹೆದರುವುದಿಲ್ಲ. ನಾನು ಎಷ್ಟು ಹೆದರುತ್ತೇನೋ, ಅಷ್ಟೇ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬವೂ ಹೆದರುತ್ತದೆ. ಅವರದ್ದು ದೊಡ್ಡ ಕುಟುಂಬ. ಅವರು ನನಗೆ ಕೆಲಸ ಮಾಡು ಎಂದು ಹೇಳುವುದಕ್ಕೂ ಮೊದಲು ತಮ್ಮ ಕೆಲಸವನ್ನು ಹುಡುಕಿಕೊಳ್ಳಲಿ" ಎಂದು ಅಭಿನವ್ ಕಶ್ಯಪ್ ಕಿಡಿಕಾರಿದ್ದಾರೆ.

More from Filmibeat

English summary
Bollywood controversial director Abhinav Kashyap says Salman Khan is unfit to be a father.
Read more about: salman khan controversy bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X