6 ವರ್ಷ ಡೇಟಿಂಗ್ ಮಾಡಿದ್ದಷ್ಟೇ ಬಂತು, ಮದುವೆವರೆಗೂ ಹೋಗಲೇ ಇಲ್ಲ ಮಲೈಕಾ- ಅರ್ಜುನ್!

ಬಾಲಿವುಡ್‌ನ ಸ್ಪೆಷಲ್ ಕಪಲ್ ಅಂತಲೇ ಜನಪ್ರಿಯರಾಗಿದ್ದವರು ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್. ವಯಸ್ಸು 50 ಆಗಿದ್ದರೂ, ಮಲೈಕಾ ಅರೋರಾ ಯುವ ನಟಿಯರನ್ನು ನಾಚಿಸುವಂತಹ ಸೌಂದರ್ಯವಿದೆ. ಮಲೈಕಾ ಬ್ಯೂಟಿಗೆ, ಫಿಟ್ನೆಸ್‌ಗೆ ಆಕೆಯಿಂತ 12 ವರ್ಷಗಳಷ್ಟು ಕಿರಿಯನಾಗಿದ್ದ ನಟ ಅರ್ಜುನ್ ಕಪೂರ್ ಮನಸೋತಿದ್ದ.

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್‌ರನ್ನು ಮಲೈಕಾ ಅರೋರಾ ಮದುವೆಯಾಗಿದ್ದರು. ಇವರಿಗೆ ಮಗ ಕೂಡ ಇದ್ದಾನೆ. ಆದರೂ, ಅರ್ಜುನ್ ಕಪೂರ್ ಮೇಲೆ ಮಲೈಕಾಗೆ ಪ್ರೀತಿ ಹುಟ್ಟಿತ್ತು. ಅರ್ಜುನ್ ಕಪೂರ್ ತನಗಿಂತ 12 ವರ್ಷ ಚಿಕ್ಕವನಿದ್ದರೂ, ಅದೆಲ್ಲವನ್ನೂ ಲೆಕ್ಕಿಸದೆ ಡೇಟಿಂಗ್ ಮಾಡುತ್ತಿದ್ದರು. ಈಗ ಜೋಡಿ ಪರಸ್ಪರ ಒಪ್ಪಿಗೆ ಮೇರೆ ಬೇರೆಯಾಗಿದೆ ಅಂತ ಹಿಂದಿ ಮಾಧ್ಯಮಗಳು ವರದಿ ಮಾಡಿವೆ.

Bollywood couple Malika Arora and Arjun Kapoor chosen to part ways by respectfully

ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಸುಮಾರು 6 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ರೆಸ್ಟೋರೆಂಟ್‌ಗಳಿಗೆ ಕೈ ಕೈ ಹಿಡಿದು ಸುತ್ತಾಡಿದ್ದರು. ವಿದೇಶಗಳಿಗೆ ಪ್ರವಾಸ ಹೋಗಿದ್ದರು. ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ವಯಸ್ಸಿನ ಅಂತರವಿದ್ದರೂ, ಈ ಜೋಡಿಯ ಅನ್ಯೋನ್ಯತೆ ಕಂಡು ಹಲವರು ಮೆಚ್ಚಿಕೊಂಡಿದ್ದರು. ಈಗ ಮಲೈಕಾ ಅರ್ಜುನ್ ಇಬ್ಬರೂ ಬೇಕಪ್ ಮಾಡಿಕೊಂಡಿದ್ದಾರೆಂದು ಪಿಂಕ್‌ವಿಲ್ಲಾ ವರದಿ ಮಾಡಿದೆ.

ಮಲೈಕಾ ಅರೋರಾ ತನ್ನ 45ನೇ ವಯಸ್ಸಿನಲ್ಲಿ ಅರ್ಜುನ್ ಕಪೂರ್ ಜೊತೆಗೆ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಬಹಿರಂಗಗೊಳಿಸಿದ್ದರು. ಆ ವೇಳೆ ಈ ಜೋಡಿಯನ್ನು ನಿರಂತರವಾಗಿ ಟೀಕೆ ಮಾಡುತ್ತಿದ್ದರು. ಅದೆಲ್ಲವನ್ನೂ ಧೈರ್ಯವಾಗಿ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಎದುರಿಸಿದ್ದರು. ಇಷ್ಟೆಲ್ಲ ಅಡೆತಡೆಗಳನ್ನು ಎದುರಿಸಿದ ಜೋಡಿ ಈಗ ಬೇರೆಯಾಗಲು ನಿರ್ಧರಿಸಿದ್ದು, ನಿಖರವಾದ ಕಾರಣವೇನು? ಅನ್ನೋದು ಇನ್ನೂ ಗೊತ್ತಾಗಿಲ್ಲ.

ಪಿಂಕ್ ವಿಲ್ಲಾಗೆ ಆಪ್ತ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, " ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಸಂಬಂಧ ತುಂಬಾನೇ ವಿಶೇಷವಾಗಿತ್ತು. ಇಬ್ಬರೂ ತಮ್ಮ ಹೃದಯದಲ್ಲಿ ವಿಶೇಷವಾದ ಸ್ಥಾನವನ್ನು ಇಟ್ಟುಕೊಂಡಿರುತ್ತಾರೆ. ಆದರೆ, ಇಬ್ಬರೂ ಬೇರೆಯಾಗುವುದಕ್ಕೆ ನಿರ್ಧರಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಮೌನವಾಗಿರಲು ನಿರ್ಧರಿಸಿದ್ದಾರೆ. ಈ ವಿಷಯನ್ನು ಎಳೆದು ದೊಡ್ಡದು ಮಾಡುವುದಕ್ಕೆ ಇಬ್ಬರೂ ಬಿಡುವುದಿಲ್ಲ" ಎಂದು ಮಾಹಿತಿ ನೀಡಿದ್ದಾಗಿ ವರದಿಯಾಗಿದೆ.

Bollywood couple Malika Arora and Arjun Kapoor chosen to part ways by respectfully

ಹಾಗೇ ಇಬ್ಬರು ಹಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಈಗ ಬೇರೆಯಾಗಿದ್ದ ಮಾತ್ರಕ್ಕೆ ಒಬ್ಬರಿಗೊಬ್ಬರು ದ್ವೇಷ ಕಾರುತ್ತಿದ್ದಾರೆ ಎಂದಲ್ಲ. ಇಬ್ಬರು ಇಂದಿಗೂ ಪರಸ್ಪರ ಗೌರವ ಹಾಗೂ ಪ್ರೀತಿಯನ್ನು ಹೊಂದಿದ್ದು, ಒಬ್ಬರಿಗೊಬ್ಬರು ಪಿಲ್ಲರ್ ಆಗಿ ನಿಂತಿರುತ್ತಾರೆ ಎಂದೂ ಮಾಹಿತಿ ನೀಡಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ಆಧರಿಸಿ, ಇವರಿಬ್ಬರ ಬ್ರೇಕಪ್ ಸುದ್ದಿ ಬಹುತೇಕ ಖಚಿತ ಎನ್ನಲಾಗುತ್ತಿದೆ.

2018ರಲ್ಲಿ ಫ್ಯಾಷನ್ ಶೋನಲ್ಲಿ ಮಲೈಕಾ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ ಇವರಿಬ್ಬರ ಬಗ್ಗೆ ಗಾಳಿ ಸುದ್ದಿಗಳು ಹರಿದಾಡಿದ್ದವು. ಇಬ್ಬರು ಬಗ್ಗೆ ಸುದ್ದಿಗಳು ಹರಿದಾಡಿದ್ದರೂ, ತಮ್ಮ ಸಂಬಂಧದ ಬಗ್ಗೆ ಅಧಿಕೃತ ಮಾಹಿತಿ ನೀಡಿರಲಿಲ್ಲ. ಮಲೈಕಾ 45ನೇ ಹುಟ್ಟುಹಬ್ಬದ ದಿನ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಷಯವನ್ನು ಕನ್ಫರ್ಮ್ ಮಾಡಿದ್ದರು. ಅರ್ಜುನ್ ಕಪೂರ್ ಕೂಡ 'ಕಾಫಿ ವಿತ್ ಕರಣ್' ಟಾಕ್ ಶೋನಲ್ಲಿ ಭಾಗವಹಿಸಿದ್ದ ವೇಳೆ, ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವುದಾಗಿ ಹೇಳಿಕೊಂಡಿದ್ದರು.

More from Filmibeat

English summary
Malika Arora and Arjun Kapoor breakup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X