»   » ಲಜ್ಜೆಗೆಟ್ಟ ಸನ್ನಿ ಜೊತೆ ಯಾವ 'ಖಾನ್' ಕೂಡಾ ನಟಿಸೋಲ್ಲಾ

ಲಜ್ಜೆಗೆಟ್ಟ ಸನ್ನಿ ಜೊತೆ ಯಾವ 'ಖಾನ್' ಕೂಡಾ ನಟಿಸೋಲ್ಲಾ

Posted By:
Subscribe to Filmibeat Kannada

ಈತನ ಹೆಸರು ಕಮಲ್ ಖಾನ್. ಇವನು ಬಾಲಿವುಡ್ ಜಗತ್ತಿನ ಸ್ವಯಂ ಘೋಷಿತ ಸ್ಟಾರ್, ವಿಮರ್ಶಕ, ಮಾರುಕಟ್ಟೆ ತಜ್ಞ. ಮಾಡೋಕೆ ಏನೂ ಕೆಲಸವಿಲ್ಲದಿದ್ದಾಗ ಬೇಕಾಬಿಟ್ಟಿ ನಾಲಗೆ ಹರಿಯಬಿಡುವುದು ಈತನ ಖಯಾಲಿ.

ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ಕಾಮೆಂಟ್ ಮಾಡುವ ಸಂಪೂರ್ಣ ಅಧಿಕಾರವಿರುವಂತೆ ವರ್ತಿಸುವ ಕಮಲ್ ಖಾನ್, ತನ್ನ ಅಸಂಬದ್ದ ಹೇಳಿಕೆಗಳಿಂದ ಎಷ್ಟೋ ಬಾರಿ ವಾರ್ನಿಂಗ್ ಪಡೆದಿದ್ದಾಗಿದೆ. ಪ್ರಧಾನಿ ಮೋದಿ ವಿರುದ್ದ ಟ್ವೀಟ್ ಸಂದೇಶ ರವಾನಿಸಿ ಅಲ್ಲೂ ಉಗಿಸಿಕೊಂಡಾಗಿದೆ.

ಈ ಹಿಂದೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಬಗ್ಗೆ ಹೇಳಬಾರದ್ದನ್ನು ಹೇಳಿ, ಮುಂಬೈನ ವಾರ್ಸೋವ ಪೊಲೀಸ್ ಠಾಣೆ ಮೆಟ್ಟಲೇರಿ ಬಂದಿದ್ದ ಕಮಲ್ ಖಾನ್, ಈಗ ಸನ್ನಿ ಮೇಲೆ ಮತ್ತೊಮ್ಮೆ ಟೀಕಾಸ್ತ್ರ ಪ್ರಯೋಗಿಸಿದ್ದಾನೆ. (ಸನ್ನಿ ಲಿಯೋನ್ ಸತ್ಯಂ ಶಿವಂ ಭಂಗಿ)

ಬಾಲಿವುಡ್ ಜಗತ್ತಿನ ಮೂರು ಖಾನ್ ಗಳು ನಿನ್ನಂತಹ ಲಜ್ಜೆಗೆಟ್ಟ ನಟಿಯೊಡನೆ ನಟಿಸಲು ಒಪ್ಪುವುದಿಲ್ಲ ಎಂದು ಟ್ವೀಟ್ ಮಾಡಿ ಕಮಲ್ ಖಾನ್ ತನ್ನ ಚಪಲ ತೀರಿಸಿಕೊಂಡಿದ್ದಾನೆ.

ಸನ್ನಿ ಲಿಯೋನ್ ಹೇಳಿದ್ದೇನು

ಸಲ್ಮಾನ್, ಶಾರೂಖ್ ಮತ್ತು ಅಮೀರ್ ಖಾನ್ ಜೊತೆ ನಟಿಸಬೇಕೆನ್ನುವುದು ನನ್ನ ಬಹುದಿನದ ಕನಸು ಎಂದು ನಟಿ ಸನ್ನಿ ಲಿಯೋನ್ ಹೇಳಿದ್ದಳು.

ಅದಕ್ಕೆ ಕಮಲ್ ಖಾನ್ ತೀಕ್ಷ್ಣ ಪ್ರತಿಕ್ರಿಯೆ

ಅದಕ್ಕೆ ಟ್ವೀಟ್ ಮೂಲಕ ಉತ್ತರಿಸದ ಕಮಲ್ ಖಾನ್, ಸನ್ನಿ ಮೇಡಂ, ಸಲ್ಮಾನ್, ಶಾರೂಖ್ ಮತ್ತು ಅಮೀರ್ ಖಾನ್ ನಿಮ್ಮಂತಹ ಪೋರ್ನ್ ಸ್ಟಾರ್ ಜೊತೆ ನಟಿಸಲು ಅವರೇನು ಮರ್ಯಾದೆ ಬಿಟ್ಟವರಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಜೀನ್ಯೂಸ್ ಮೇಲೂ ಟೀಕಾ ಪ್ರಹಾರ

ಜೀನ್ಯೂಸ್ ವಾಹಿನಿ ಮೇಲೂ ಟೀಕಾ ಪ್ರಹಾರ ನಡೆಸಿದ ಕಮಲ್, ಜೀನ್ಯೂಸ್ ಸನ್ನಿ ಲಿಯೋನ್ ಳನ್ನು ಸತಿಸಾವಿತ್ರಿ ತರ ಬಿಂಬಿಸುತ್ತಿದೆ. ಬಹುಷಃ ಅವರಲ್ಲಿ ಯಾರಿಗೂ ಆಕೆಯ ವೆಬ್ ಸೈಟ್ ಚೆಕ್ ಮಾಡಲು ಪುರುಷೋತ್ತು ಇಲ್ಲವೇನೋ? ಅಲ್ಲಿ ಸನ್ನಿ ತನ್ನ ಪೋರ್ನ್ ವಿಡಿಯೋವನ್ನು ಮಾರುತ್ತಾಳೆ.

ಲೀಸಾ ಹೇಡನ್, ಸೋನಾಕ್ಷಿ

ಈ ಹಿಂದೆ ಕಮಲ್ ಖಾನ್, ಲೀಸಾ ಹೇಡನ್, ಸೋನಾಕ್ಷಿ ಸಿನ್ಹಾ ಬಗ್ಗೆಯೂ ಅಸಂಬದ್ದ ಹೇಳಿಕೆ ನೀಡಿ ಶಟ್ ಅಪ್ ಎಂದು ಬೈಯಿಸಿಕೊಂಡಿದ್ದ.

ಮಹೇಶ್ ಭಟ್

ಆಲಿಯಾ ಭಟ್ ನನ್ನ ಭಾವಿ ಪತ್ನಿ ಕಣ್ರೀ... ಮಹೇಶ್ ಭಟ್ಟರ ಮಗಳೇ ನನ್ನ ಮುದ್ದಿನ ಅರಗಿಣಿ ಎಂದು ಕಮಲ್ ಖಾನ್ ಟ್ವೀಟ್ ಮಾಡಿ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

English summary
Bollywood three Khans will not act with Besharam Sunny Leone, Kamaal Khan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada