Dharmendra-Hema Malini: ಧರ್ಮೇಂದ್ರ-ಹೇಮಾ ಮಾಲಿನಿ ಇಬ್ಬರಲ್ಲಿ ಶ್ರೀಮಂತರು ಯಾರು? ಯಾರ ಹತ್ತಿರ ಎಷ್ಟಿದೆ ಆಸ್ತಿ?
ಬಾಲಿವುಡ್‌ನ ಲೆಜೆಂಡ್ ಧರ್ಮೇಂದ್ರ ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಅವರ ಆರೋಗ್ಯದ ಕುರಿತು ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಕುಟುಂಬಸ್ಥರು ಧರ್ಮೇಂದ್ರ ಚೇತರಿಸಿಕೊಳ್ಳುತ್ತಿದ್ದಾರೆಂದು ಹೇಳಿದರೂ ಅಭಿಮಾನಿಗಳ ಆತಂಕ ಮಾತ್ರ ಕಮ್ಮಿಯಾಗಿಲ್ಲ.
ಧರ್ಮೇಂದ್ರ ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಂಜಾಬ್‌ನ ಚಿಕ್ಕದೊಂದು ಗ್ರಾಮದಿಂದ ನಟನಾಗಬೇಕು ಅನ್ನೋ ಕನಸು ಕಟ್ಟಿಕೊಂಡು ಬಂದಿದ್ದ ಧರ್ಮೇಂದ್ರ ಮಯಾ ನಗರಿಯಲ್ಲಿ ನೆಲೆ ಕಂಡುಕೊಳ್ಳುವುದಕ್ಕೆ ಬಹಳ ಕಷ್ಟಪಟ್ಟಿದ್ದರು. ಸಿನಿಮಾ ಹಿನ್ನೆಲೆಯೇ ಇಲ್ಲದ ಹೆಡ್ ಮಾಸ್ಟರ್ ಮಗ ಒಂದೊಂದು ಅವಕಾಶಕ್ಕಾಗಿ ಎದುರು ನೋಡುವಂತಹ ಪರಿಸ್ಥಿತಿಯಿತ್ತು.

ಕೊನೆಗೂ ಧರ್ಮೇಂದ್ರ ಅವರಿಗೆ ಬಾಲಿವುಡ್ ಕೈ ಹಿಡಿದಿತ್ತು. ಬಳಿಕ ಇಲ್ಲೇ ಸೂಪರ್‌ಸ್ಟಾರ್ ಆಗಿ ಮೆರೆದರು. ಯಶಸ್ಸಿನ ಉತ್ತುಂಗದಲ್ಲಿ ಇರುವಾಗ ಡ್ರೀಮ್ ಗರ್ಲ್ ಹೇಮಾ ಮಾಲಿನಿಯನ್ನು ವಿವಾಹವಾದರು. ಇಬ್ಬರೂ ಬಾಲಿವುಡ್‌ನಲ್ಲಿ ದೊಡ್ಡ ಹೆಸರನ್ನೇ ಸಂಪಾದನೆ ಮಾಡಿದ್ದಾರೆ. ಸಕ್ಸಸ್‌ಫುಲ್ ಸ್ಟಾರ್ ಎನಿಸಿಕೊಂಡಿದ್ದರು. ಈ ಇಬ್ಬರು ಸೂಪರ್‌ಸ್ಟಾರ್‌ಗಳಲ್ಲಿ ಯಾರು ಶ್ರೀಮಂತರು? ಯಾರ ಬಳಿ ಎಷ್ಟು ಆಸ್ತಿಯಿದೆ? ಈ ಕುತೂಹಲ ಸಹಜ.
'ಡ್ರೀಮ್ ಗರ್ಲ್' ಹೇಮಾ ಮಾಲಿನಿ
70 ಹಾಗೂ 80ರ ದಶಕದ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದು ಹೇಮಾ ಮಾಲಿನಿ. ತನ್ನ 20ನೇ ವಯಸ್ಸಿನಲ್ಲಿಯೇ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ನಟಿ ಮತ್ತೆಂದೂ ಹಿಂತಿರುಗಿ ನೋಡಲೇ ಇಲ್ಲ. ಒಂದರ ಹಿಂದೊಂದು ಸಿನಿಮಾಗಳು ಸೂಪರ್ ಹಿಟ್ ಆದವು. ಬಾಲಿವುಡ್‌ನ ಬಹುತೇಕ ಅಂದಿನ ಎಲ್ಲಾ ಸೂಪರ್‌ಸ್ಟಾರ್‌ಗಳಿಗೆ ನಾಯಕಿಯಾಗಿ ನಟಿಸಿದರು. ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿ, ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಅಲ್ಲೂ ಯಶಸ್ಸು ಕಂಡರು. ಉತ್ತರ ಪ್ರದೇಶದ ಮಥುರಾದಿಂದ ಬಿಜೆಪಿ ಲೋಕಸಭಾ ಸಂಸದರಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಗೆದ್ದಿದ್ದಾರೆ.
ಹೇಮಾ ಮಾಲಿನಿ ಆಸ್ತಿ ಎಷ್ಟು?
ಹೇಮಾ ಮಾಲಿನಿ ಸಿನಿಮಾ ಕ್ಷೇತ್ರದಿಂದ ಹೆಚ್ಚು ಹಣವನ್ನು ಸಂಪಾದನೆ ಮಾಡಿದ್ದಾರೆ. ಕೆಲವೆಡೆ ಆಸ್ತಿಯನ್ನೂ ಖರೀದಿಸಿ, ಅದರ ಮೇಲೂ ಹೂಡಿಕೆ ಮಾಡಿದ್ದಾರೆ. ಈಗಾಗಲೇ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಅವರ ಬಳಿ ಇರುವ ಒಟ್ಟು ಆಸ್ತಿ ₹129 ಕೋಟಿ. 2024ರ ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಇಷ್ಟು ಮೊತ್ತದ ಆಸ್ತಿಯನ್ನು ನಮೂದಿಸಿದ್ದರು.

ಧರ್ಮೇಂದ್ರ ಅವರೇ ಶ್ರೀಮಂತ
ಧರ್ಮೇಂದ್ರ ನಟಿಸಿದ ಚೊಚ್ಚಲ ಸಿನಿಮಾ 'ದಿಲ್ ಭಿ ತೇರಾ ಹಮ್ ಭಿ ತೇರೆ ಮಿಲಿ'. ಇಲ್ಲಿಂದ ಶುರುವಾಗಿದ ಜರ್ನಿ ರಿಲೀಸ್‌ಗೆ ರೆಡಿಯಾಗಿರುವ 'ಇಕ್ಕೀಸ್'ವರೆಗೂ ಮುಂದುವರೆದಿದೆ. ಇತ್ತೀಚೆಗಿನ ವರದಿ ಪ್ರಕಾರ, ಧರ್ಮೇಂದ್ರ ಅವರ ಒಟ್ಟು ಆಸ್ತಿ ₹450 ಕೋಟಿ. ಲೋನಾವಾಲ ಬಳಿ ಧರ್ಮೇಂದ್ರ ಅವರಿಗೆ ಸೇರಿದ 100 ಎಕರೆ ಫಾರ್ಮ್‌ಹೌಸ್, ₹17 ಕೋಟಿ ಬೆಲೆಯ ಪ್ರಾಪರ್ಟಿ, ₹88 ಲಕ್ಷದ ಕೃಷಿ ಭೂಮಿ, ₹52 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ, ಲೋನವಾಲ ಬಳಿ 12 ಎಕರೆ ಜಮೀನಿನಲ್ಲಿ ರೆಸ್ಟೋರೆಂಟ್, 'ಗರಂ ಧರಂ ಡಾಬಾ', 'ಹಿ-ಮ್ಯಾನ್' ಹೋಟೆಲ್ (ಅಸಹಾಯಕರಿಗೆ ಉಚಿತ ಊಟ) ಇಷ್ಟು ಇವರ ಬಳಿ ಇರುವ ಆಸ್ತಿ.
ಬಾಲಿವುಡ್‌ನ ಶ್ರೀಮಂತ ಕುಟುಂಬ
ಧರ್ಮೇಂದ್ರ ಅವರ ಕುಟುಂಬ ಬಾಲಿವುಡ್‌ನ ಶ್ರೀಮಂತ ಕುಟುಂಬಗಳಲ್ಲಿ ಒಂದು. ಇವರ ಇಬ್ಬರು ಮಕ್ಕಳು ಚಿತ್ರರಂಗದಲ್ಲಿ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಮೊದಲ ಪತ್ನಿ ಮಕ್ಕಳಾದ ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಈಗಾಗಲೇ ಬಾಲಿವುಡ್‌ನ ಸ್ಟಾರ್ ನಟರು. ಹಾಗೇ ಹೇಮಾ ಮಾಲಿನಿಯ ಇಬ್ಬರು ಹೆಣ್ಣು ಮಕ್ಕಳಲ್ಲಿ ಇಶಾ ಡಿಯೋಲ್ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದರೂ ಗೆಲ್ಲಲಿಲ್ಲ.


Click it and Unblock the Notifications