ಕತ್ರಿನಾ ಕೈಫ್-ವಿಕ್ಕಿ ಕೌಶಾಲ್ ಮದುವೆ ಯಾರ್ಯಾರಿಗೆ ತಲುಪಿದೆ ಆಮಂತ್ರಣ ಪತ್ರ
ಬಾಲಿವುಡ್ ಜೋಡಿ ಹಕ್ಕಿಗಳು ಅದೆಷ್ಟೇ ಕದ್ದು ಮುಚ್ಚಿ ಓಡಾಡಿದ್ದರೂ ಇಬ್ಬರ ಲವ್ ಸ್ಟೋರಿ ಪ್ರಪಂಚಕ್ಕೆ ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಈಗಲೂ ಅಷ್ಟೇ, ಕತ್ರಿನಾ ಕೈಫ್- ವಿಕ್ಕಿ ಕೌಶಾಲ್ ತಮ್ಮ ಮದುವೆ ಬಗ್ಗೆ ಇನ್ನೂ ಬಾಯಿಬಿಟ್ಟಿಲ್ಲ. ಆದರೂ ಒಳಗೊಳಗೆ ಈ ಪ್ರೇಮ ಪಕ್ಷಿಗಳ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ರಾಜಸ್ಥಾನ ಸಿಕ್ಕಾಪಟ್ಟೆ ಬ್ಯುಸಿಯಾಗಿದೆ. ವೆಡ್ಡಿಂಗ್ ಪ್ಲಾನರ್‌ಗಳಿಗೆ ಸೂಚನೆ ನೋಡಿದ್ದಾಗಿದೆ. ಹೊಟೇಲ್‌ಗಳು ಬುಕ್ ಆಗಿವೆ.
ಎಲ್ಲಕ್ಕಿಂತ ಹೆಚ್ಚಾಗಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಾಲ್ ಇಬ್ಬರು ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಹಂಚುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಸೆಲೆಬ್ರೆಟಿಗಳಿಗೆ, ಆತ್ಮೀಯರಿಗೆ, ಸ್ನೇಹಿತರಿಗೆ ಆಮಂತ್ರಣ ಪತ್ರಿಕೆ ತಲುಪಿದೆ ಅನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಹಾಗಿದ್ದರೆ, ಬಾಲಿವುಡ್‌ನಲ್ಲಿ ಯಾರಿಗೆ ಆಮಂತ್ರಣ ಪತ್ರ ತಲುಪಿದೆ. ಇಬ್ಬರ ಮದುವೆ ಎಲ್ಲಿ? ಯಾವ ಡೇಟ್‌ನಲ್ಲಿ ಮದುವೆ ? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
ಕತ್ರಿನಾ, ವಿಕ್ಕಿ ಕೌಶಾಲ್ ಮದುವೆಗೆ ಸಜ್ಜಾದ ರಾಜಸ್ಥಾನ
ಕತ್ರಿಕಾ ಕೈಫ್ ಹಾಗೂ ವಿಕ್ಕಿ ಕೌಶಾಲ್ ಮದುವೆ ರಾಜಸ್ಥಾನದಲ್ಲಿ ನಡೆಯಲಿದೆ. ಅಲ್ಲಿನ ಪ್ರತಿಷ್ಟಿತ ಹೊಟೇಲ್‌ಗಳಲ್ಲಿ ಒಂದಾದ ಸಿಕ್ಸ್ ಸೆನ್ಸಸ್ ಫೋರ್ಟ್ ಹೊಟೇಲ್‌ನಲ್ಲಿ ಇಬ್ಬರ ಕಲ್ಯಾಣ ಜರುಗಲಿದೆ ಎನ್ನಲಾಗುತ್ತಿದೆ. ರಾಜಸ್ಥಾನದ ಸವಾಯ್ ಮಾದೊಪುರ ಜಿಲ್ಲೆಯಲ್ಲಿ ಈ ಸ್ಟಾರ್ ಹೊಟೇಲ್ ಇದ್ದು, ಅಲ್ಲಿ ಈಗಾಗಲೇ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಈ ಜೋಡಿ ಹಕ್ಕಿಗಳು ಇಡೀ ಹೊಟೇಲ್ ಅನ್ನು ಬುಕ್ ಮಾಡಿದೆ. ವಿಐಪಿ ಮ್ಯಾರೇಜ್ ಆಗಿರುವುದರಿಂದ ಇಡೀ ಹೊಟೇಲ್ ಸಿಂಗಾರಗೊಳ್ಳಲಿದೆ. ಮದುವೆ ಸಮಾರಂಭಕ್ಕೆ ಇನ್ನೊಂದು ತಿಂಗಳು ಇರುವುದರಿಂದ ಈಗಿನಿಂದಲೇ ಸಿದ್ಧತೆಗಳು ಆರಂಭಗೊಂಡಿವೆ.

ಕ್ಯಾಟ್-ವಿಕ್ಕಿ ಕಲ್ಯಾಣ ಯಾವಾಗ?
ಬಾಲಿವುಡ್ ಮೂಲಗಳ ಪ್ರಕಾರ, ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಾಲ್ ಮದುವೆ ಸಮಾರಂಭ ಡಿಸೆಂಬರ್ 7 ರಿಂದ 12ರವರೆಗೆ ಒಂದು ವಾರಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಇವೆಂಟ್ ಮ್ಯಾಜ್ಮೆಂಟ್ ಕಂಪನಿಗಳು ಸಿಕ್ಸ್ ಸೆನ್ಸ್ ಫೋರ್ಟ್ ಹೊಟೇಲ್‌ನಲ್ಲಿ ಬೀಡುಬಿಟ್ಟಿವೆ. ಹಲವು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಒಟ್ಟಾಗಿ ಕತ್ರಿನಾ ಹಾಗೂ ವಿಕ್ಕಿ ಕೌಶಾಲ್ ಮದುವೆ ಸಮಾರಂಭವನ್ನು ನಡೆಸಿಕೊಡಲಿದೆ. ಒಂದೊಂದು ಮ್ಯಾನೇಜ್ಮೆಂಟ್ ಕಂಪನಿನೂ ಒಂದೊಂದು ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಜಂಟಿಯಾಗಿ ಕೆಲಸ ಮಾಡಲಿವೆ.
ಕತ್ರಿನಾ ಮದುವೆ ಬರೋರು ಯಾರು?
ಈ ಹೈ ಪೊಫೈಲ್ ಮದುವೆಗೆ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಾಲ್ ಈಗಾಗಲೇ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಗೆಸ್ಟ್‌ಗಳ ಪಟ್ಟಿ ಕೂಡ ತಯಾರಾಗಿದೆ. ಕರಣ್ ಜೋಹರ್, ಅಲಿ ಅಬ್ಬಾಸ್ ಜಾಫರ್, ಕಬೀರ್ ಖಾನ್, ಮಿನಿ ಮಾಧುರ್, ರೋಹಿತ್ ಶೆಟ್ಟಿ, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರ ಅಡ್ವಾಣಿ, ವರುಣ್ ಧವನ್ ಹಾಗೂ ಪತ್ನಿ ನತಾಶಾ ದಲಾಲ್ ಸೇರಿದಂತೆ ಇನ್ನೂ ಹಲವರಿಗೆ ಆಮಂತ್ರಣ ಪತ್ರ ತಲುಪಿದೆ ಅನ್ನೋ ಸುದ್ದಿ ಬಾಲಿವುಡ್‌ನಲ್ಲಿ ಓಡಾಡುತ್ತಿದೆ.

ರಾಜಸ್ಥಾನದಲ್ಲಿ ಬುಕ್ ಆಗಿವೆ ಬಾಡಿಗೆ ಕಾರುಗಳು
ರಾಜಸ್ಥಾನದಲ್ಲಿ ನಡೆಯುತ್ತಿರುವ ದುಬಾರಿ ಮದುವೆ ಆಗಿರುವುದರಿಂದ ಬಾಡಿಗೆ ಕಾರುಗಳು ಈಗಾಗಲೇ ಬುಕ್ ಆಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. SUV ಹಾಗೂ ದುಬಾರಿ ಕಾರುಗಳನ್ನು ಈಗಾಗಲೇ ಬಾಡಿಗೆಗೆ ಪಡೆದಿದ್ದು, ನಗರದಲ್ಲಿ ಕಾರು ಬಾಡಿಗೆಗೆ ಸಿಗುತ್ತಿಲ್ಲವೆಂದು ವರದಿಯಾಗಿದೆ. ಮದುವೆಗೆ ಒಂದು ತಿಂಗಳು ಮುನ್ನವೇ ರಾಜಸ್ಥಾನ ಬಾಲಿವುಡ್ ಮಯವಾಗಿದೆ. ಇನ್ನೊಂದೆಡೆ ಮದುವೆ ತಯಾರಿಗಾಗಿ ಕತ್ರಿನಾ ಕೈಫ್ ಕೂಡ ಬ್ರೇಕ್ ತೆಗೆದುಕೊಂಡಿದ್ದು, ಇತ್ತೀಚೆಗೆ ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಮನೆಯಲ್ಲಿ ದೀಪಾವಳಿ ಹಬ್ಬದಂದು ರೋಕಾ ಕಾರ್ಯಕ್ರಮ ಜರುಗಿದೆ. ಈ ಕಾರ್ಯಕ್ರಮದಲ್ಲಿ ಎರಡೂ ಕುಟುಂಬಗಳು ಭಾಗಿಯಾಗಿದ್ದವು ಎನ್ನಲಾಗಿದೆ. ಆದರೆ, ಈ ಜೋಡಿ ಹಕ್ಕಿಗಳು ಇದೂವರೆಗೂ ತಮ್ಮ ಮದುವೆ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ.


Click it and Unblock the Notifications











