'ಘಜನಿ' ನಿರ್ಮಾಪಕ ಮಧು ಮಾಂಟೇನಾ ತಂದೆ ನಿಧನ: ಆಮಿರ್ ಖಾನ್, ಅಲ್ಲು ಅರ್ಜುನ್ ಸಂತಾಪ!

ಬಾಲಿವುಡ್‌ ನಿರ್ಮಾಪಕ ಹಾಗೂ ವಿತರಕ ಮಾಧು ಮಾಂಟೇನಾ ತಂದೆ ಮುರಳಿ ರಾಜು ಹೈದರಾಬಾದ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಮುರಳಿ ಕೃಷ್ಣ ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಮಾರ್ಚ್ 7) ಕೊನೆಯುಸಿರೆಳೆದಿದ್ದಾರೆ.

ಬಾಲಿವುಡ್ ನಿರ್ಮಾಪಕ ಮಧು ಮಾಂಟೇನಾ ತಂದೆ ನಿಧನದ ಬೆನ್ನಲ್ಲೇ ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಹಾಗೂ ಟಾಲಿವುಡ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಇಬ್ಬರೂ ಸಂಪಾತ ಸೂಚಿಸಿದ್ದಾರೆ. ಮಧು ಮಾಂಟೇನಾ ನಿವಾಸಕ್ಕೆ ತೆರಳಿದ ಆಮಿರ್ ಖಾನ್ ಹಾಗೂ ಅಲ್ಲು ಅರ್ಜುನ್ ಇಬ್ಬರೂ ಮುರಳಿ ರಾಜು ಮಾಂಟೇನಾ ಅವರ ಅಂತಿಮ ದರ್ಶನವನ್ನು ಪಡೆದುಕೊಂಡಿದ್ದಾರೆ.

Bollywood Producer Madhu Mantena Father Murali Raju Passes Away Aamir Khan, Allu Arjun Pay Tribute

ಮಧು ಮಾಂಟೇನಾ ಬಾಲಿವುಡ್ ಅಷ್ಟೇ ಅಲ್ಲದೆ. ತೆಲುಗು ಹಾಗೂ ಬೆಂಗಾಲಿ ಭಾಷೆಯ ಸಿನಿಮಾಗಳನ್ನು ನಿರ್ಮಾಣ ಮಾಡಿ, ವಿತರಣೆಯನ್ನು ಮಾಡಿದ್ದಾರೆ. ಹೀಗಾಗಿ ಬಾಲಿವುಡ್ ಅಷ್ಟೇ ಅಲ್ಲದೆ ದಕ್ಷಿಣ ಭಾರತದ ಚಿತ್ರರಂಗದ ತಾರೆಯರೊಂದಿಗೆ ಉತ್ತಮ ಬಾಂಧವ್ಯವವನ್ನು ಹೊಂದಿದ್ದಾರೆ. ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ಮಧು ಮಾಂಟೇನಾ ಚಿತ್ರರಂಗಕ್ಕೆ ಕೊಟ್ಟಿದ್ದಾರೆ.

ನಿರ್ಮಾಪಕ ಮಾಧು ಮಾಂಟೇನಾ ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾ 'ಘಜನಿ'ಯನ್ನು ನಿರ್ಮಾಣ ಮಾಡಿದ್ದಾರೆ. ಅದು ಆ ವರ್ಷದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಅನ್ನೋ ಹೆಗ್ಗಳಿಕೆ ಗಳಿಸಿತ್ತು. 2010ರಲ್ಲಿ ಮೂರು ಭಾಷೆಯಲ್ಲಿ 'ರಕ್ತ ಚರಿತ' ಸಿನಿಮಾ ಮಾಡಿದ್ದರು. ಅದು ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡಿತ್ತು. ಕಿಚ್ಚ ಸುದೀಪ್ ಹಾಗೂ ಅಮಿತಾಭ್ ಬಚ್ಚನ್ ಅಭಿನಯದ 'ರನ್' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಹಾಗೇ ಬೆಂಗಾಲಿ ಭಾಷೆಯಲ್ಲಿ 'ಆಟೋಗ್ರಾಫ್' ಅನ್ನೋ ಸಿನಿಮಾವನ್ನು ನಿರ್ಮಿಸಿದ್ದಾರೆ.

ಇತ್ತೀಚೆಗೆ ಮಧು ಮಾಂಟೇನಾ '83', 'ಉಡ್ತಾ ಪಂಜಾಬ್', 'ಸೂಪರ್‌ 30' ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಬಾಲಿವುಡ್‌ ನಿರ್ದೇಶಕರಾದ ಅನುರಾಗ್ ಕಶ್ಯಪ್, ವಿಕಾಸ್ ಬೆಹ್ಲ್, ವಿಕ್ರಮಾದಿತ್ಯ ಮೋಟ್ವಾನೆ ಜೊತೆ ಸೇರಿ ಫಾಂಟಮ್ ಫಿಲ್ಮ್ಸ್ ಅನ್ನೋ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದರು. ಈ ಸಂಸ್ಥೆಯ ಮೂಲಕ ಲೂಟೇರಾ (2013), ಕ್ವೀನ್ (2014), 'ಹಸ್ಸಿ ಥೊ ಫಸ್ಸಿ' (2014), ಬಾಂಬೆ ವಾಲ್ವೆಟ್, ಅಗ್ಲಿ, ಮಸಾನ್ ಅಂತಹ ಸಿನಿಮಾಗಳನ್ನೂ ನಿರ್ಮಾಣ ಮಾಡಿದ್ದಾರೆ.

ಬಿಗ್ ಹಿಟ್‌ಗಳನ್ನೇ ನೀಡಿರುವ ಮಾಧು ಮಾಂಟೇನಾ ಈಗ ತಂದೆಯನ್ನು ಕಳೆದುಕೊಂಡ ನೋವಿನಲ್ಲಿ ಇದ್ದಾರೆ. ಹೀಗಾಗಿ ಇಡೀ ಭಾರತೀಯ ಚಿತ್ರತಂಡ ಮಧು ಮಾಂಟೇನಾ ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬಿ, ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

More from Filmibeat

English summary
Bollywood Producer Madhu Mantena Father Murali Raju Passes Away Aamir Khan, Allu Arjun Pay Tribute, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X