ಕತ್ರಿನಾ ಕೈಫ್ ಅಪಾರ್ಟ್ಮೆಂಟ್ ನಲ್ಲಿ ಸಲ್ಮಾನ್ ಖಾನ್ ?
ಸುಮ್ಮನಿರದೇ ಅದೇನೋ ಬಿಡ್ಕೊಂಡ್ರು ಅಂತಾರಲ್ಲಾ ಹಾಗೇ ನಮ್ಮ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಕಥೆಗಳು. ಅದ್ಯಾಕೋ ಸಲ್ಲು ಮಿಯಾ ಬರ್ತಾ ಬರ್ತಾ ಸುಮ್ಕೆ ಇರೋದೇ ಇಲ್ಲಾಂತರಪ್ಪಾ.
ಮೊನ್ನೆ ಮೊನ್ನೆ ಅದ್ದೂರಿಯಾಗಿ ನಡೆದ ಸಲ್ಲು ಬೆಹನ್ ಸಾಧಿಯಲ್ಲಿ, ಸ್ಟೇಜ್ ಮೇಲೆ ಕತ್ರಿನಾ ಕೈಫ್ ಅನ್ನೋ ಬದಲು ಕತ್ರಿನಾ ಕಪೂರ್ ಅಂತ ಹೇಳಿ, ಕತ್ರಿನಾಳ ಗುಸ್ಸಾಗೆ ಸಲ್ಲು ಕಾರಣವಾಗಿದ್ದು ಹಳೇ ಸಮಾಚಾರ.
ಅಂದು ತುಂಬಿ ತುಳುಕುತ್ತಿದ್ದ ಮದುವೆ ಆರತಕ್ಷತೆಯಲ್ಲಿ ಅಷ್ಟಕ್ಕೇ ಸುಮ್ಮನಿರದ ಸಲ್ಲು, ನಾನು ಅವಳಿಗೆ ಖಾನ್ ಆಗಲು ಚಾನ್ಸ್ ಕೊಟ್ಟೆ, ಆದರೆ ಅವಳು ಕಪೂರ್ ಆಗಲು ಬಯಸಿದಳು ಎಂದು ಕತ್ರಿನಾ ಕಾಲು ಎಳೆದಿದ್ದರು.
ಸಲ್ಮಾನ್ ಖಾನ್ ಖಾಂದಾನಿಗೆ ಕತ್ರಿನಾ ಚಿರಪರಿಚಿತಳಾಗಿದ್ದರೂ, ಸಲ್ಲು ಮಿಯಾ ಈ ಹೇಳಿಕೆಯಿಂದ ಕತ್ರಿನಾ ಶಾಣೆ ಬೇಸರ ಪಟ್ಟುಕೊಂಡಿದ್ರಂತೆ.
ಅಲ್ಲದೇ, ಚಾರ್ ಪಾಂಚ್ ದಿನ್ ಸಲ್ಲು ಮತ್ತು ಸಲ್ಲು ಕುಟುಂಬದ ಯಾವುದೇ ಫೋನುಗಳನ್ನು ಕತ್ರಿನಾ ಸ್ವೀಕರಿಸಲೇ ಇಲ್ಲಾಂತ ನಮ್ಮ ಗಾಂಧಿನಗರವನ್ನೂ ಮೀರಿಸುವ ಬಾಲಿವುಡ್ ಜಗಲಿಯಲ್ಲಿ ಸುದ್ದಿಯೋ ಸುದ್ದಿ.
ಸಲ್ಮಾನ್ ಖಾನಿಗೆ ಅದೇನು ಅನಿಸುತೋ ಏನೋ, ಅಥವಾ ಸಲ್ಲು ತಂದೆ ಖಾನ್ ಪಕಡ್ಕೆ ಬೈದ್ರೋ ಏನೋ, ಸಲ್ಮಾನ್ ಸೀದಾ ಕತ್ರಿನಾ ಅಪಾರ್ಟ್ಮೆಂಟಿಗೆ ಹೋಗಿ ಕತ್ರಿನಾಳ ಕ್ಷಮೆಯಾಚಿಸಿದ್ದಾರೆ ಎಂದು ಖಚಿತ ಮಾಹಿತಿ ಆಧರಿಸಿ ಬಾಲಿವುಡ್ ಅಂಗಳದಲ್ಲಿ ಸುದ್ದಿಯಾಗಿದೆ.
ಸುಮ್ನೆ ತಮಾಷೆಗೆ ನಾನು ಅಂದು ಹಾಗೇ ಹೇಳಿದ್ದೆ, ಮೆರೆಕೋ ಮಾಪ್ ಕರೋ ಎಂದು ಸಲ್ಮಾನ್ ಖಾನ್, ಕತ್ರಿನಾ ಕೈಫ್ ಬಳಿ ಸಾರಿ ಕೇಳಿದ್ದಾರೆ ಎಂದು ಸದ್ಯ ಸುದ್ದಿಯಾಗಿದೆ.
ಸಲ್ಮಾನ್ ಖಾನ್, ಕತ್ರಿನಾಳ ಕಾಲು ಎಳೆಯುವುದು ಇದೇನು ಮೊದಲಲ್ಲ. ಕೆಲವೊಂದು ಹಿಂದಿನ ಕಹಾನಿಯನ್ನು ಸ್ಲೈಡಿನಲ್ಲಿ ನೀಡಲಾಗಿದೆ..

ಬಿಗ್ ಬಾಸ್ ವೇದಿಕೆಯಲ್ಲಿ
ತನ್ನ ತೀಸ್ ಮಾರ್ ಖಾನ್ ಚಿತ್ರದ ಪ್ರಮೋಷನ್ ಸಮಯದಲ್ಲಿ ಕತ್ರಿನಾ, ಸಲ್ಮಾನ್ ನಿರೂಪಿಸುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನೀವು ಅಕ್ಷಯ್ ಕುಮಾರ್, ಸಲ್ಮಾನ್ ಜೊತೆ ನಟಿಸಿದ್ದಾಯಿತು. ಈಗ ರಣಬೀರ್ ಕಪೂರ್ ಜೊತೆ ನಟಿಸುತ್ತಿದ್ದೀರಾ, ರಣಬೀರ್ ಕಪೂರಿಗೆ ಯುವ ನಟಿ ಬೇಕು, ನೀವಲ್ಲ ಎಂದು ಸಲ್ಮಾನ್, ಕತ್ರಿನಾ ಕಾಲೆಳೆದಿದ್ದರು.

ಇದೇ ಬಿಗ್ ಬಾಸ್ ವೇದಿಕೆಯಲ್ಲಿ
ಕಾರ್ಯಕ್ರಮದಲ್ಲಿ ಕತ್ರಿನಾಳಿಗೆ ಒಂದು ಡೈಲಾಗ್ ಹೇಳುವಂತೆ ಸಲ್ಲು ಸೂಚಿಸಿದ್ದರು. ಅದರಂತೆ 'ನಿನಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ದ' ಎನ್ನುವ ಡೈಲಾಗನ್ನು ಕತ್ರಿನಾ ಹೇಳಿದ್ದರು. ಕೂಡಲೇ, ಸಲ್ಮಾನ್ ನಿಮ್ಮ ಡೈಲಾಗ್ ಕೇಳಿದರೆ ಐದು ವರ್ಷದ ಹಿಂದಿನ ನಮ್ಮ ಅನುಬಂಧ ನೆನಪಿಗೆ ಬರುತ್ತದೆ ಎಂದು ಚೇಡಿಸಿದ್ದರು.

ಕರಣ್ ಜೊಹರ್ ಟಿವಿಶೋನಲ್ಲಿ
ಕರಣ್ ಜೋಹರ್ ನಿರೂಪಣೆಯ ಕಾರ್ಯಕ್ರಮದಲ್ಲಿ ಕರಣ್, ಸಲ್ಮಾನ್ ಬಳಿ ಕೇಳಿದ ಪ್ರಶ್ನೆ ಏನಂದರೆ, ಈ ಕೆಲವರಿಗೆ ನೀವು ಕೊಡುವ ಸಲಹೆ ಏನು ಎಂದು ರಣಬೀರ್ ಬಗ್ಗೆ ಕೇಳಿದ್ದರು. ಅದಕ್ಕೆ Have Fun ಎಂದು ಸಲ್ಮಾನ್ ಉತ್ತರಿಸಿದ್ದರು. ಇದಾದ ನಂತರ ಕತ್ರಿನಾ ಬಗ್ಗೆ ಸಲ್ಮಾನ್ ಬಳಿ ಕೇಳಿದಾಗ, Make sure Ranbir does not have fun ಎಂದು ಕರಣ್ ಗೆ ಸಲ್ಮಾನ್ ಉತ್ತರಿಸಿದ್ದರು.

Rapid ಶೋ ಪ್ರಶ್ನೆಯಲ್ಲಿ
ಕರಣ್ ಜೋಹರ್ ಕಾರ್ಯಕ್ರಮದ rapid show ಪ್ರಶ್ನೆಯಲ್ಲಿ ನೀವು ಒಂದು ವೇಳೆ ರಣಬೀರ್ ಸ್ಥಾನದಲ್ಲಿ ಇದ್ದೀರಾ ಅಂದುಕೊಳ್ಳಿ. ನಿಮ್ಮನ್ನು ನಿದ್ದೆಯಿಂದ ಎಬ್ಬಿಸಿ ಕತ್ರಿನಾ ಬಗ್ಗೆ ಪ್ರಶ್ನೆ ಕೇಳಿದರೆ ನಿಮ್ಮ ಉತ್ತರವೇನು ಅಂದಾಗ, ಸಲ್ಮಾನ್ ಭಾಯ್ ನಾನು ಲಕ್ಕಿ ಎಂದು ರಣಬೀರ್ ಉತ್ತರಿಸುತ್ತಿದ್ದರು. ಅದೇ ಕತ್ರಿನಾಳನ್ನು ಕೇಳಿದರೆ ರಣಬೀರ್ ಎಲ್ಲಿ ಎಂದು ಕತ್ರಿನಾ ಹೇಳುತ್ತಿದ್ದರು ಎಂದು ಸಲ್ಮಾನ್ ಖಾನ್ ಕಿಚಾಯಿಸಿದ್ದರು.

ತಂಗಿ ಮದುವೆಯಲ್ಲಿ
ತಂಗಿ ಅರ್ಪಿತಾ ಮದುವೆಯಲ್ಲಿ ತನ್ನ ಹಾಲಿ ಪ್ರೇಯಸಿ ಲೂಲಿಯಾ ವಂತೂರ್ ಅವರನ್ನು ಕತ್ರಿನಾ ಬಳಿ ಕರೆದುಕೊಂಡು ಹೋಗಿ ಅವಳಿಗೆ ಸಲ್ಮಾನ್ ಪರಿಚಿಯಿಸಿದ್ದರು.


Click it and Unblock the Notifications











