ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಹೇಳಿದ ಮಾಡಿಸಿದ ಜೋಡಿ: ಬಾಲಿವುಡ್ ಕೊಟ್ಟ 4 ಕಾರಣವೇನು?
ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಇದೇ ವರ್ಷ ಮದುವೆಯಾಗುತ್ತಾರೆ ಎನ್ನುವ ವಿಷಯ ಹಬ್ಬಿದೆ. ಇದೇ ವಿಚಾರವಾಗಿ ಬಾಲಿವುಡ್‌ನಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಸಿನಿಮಾಗಳಲ್ಲಿ ಸದಾ ಬ್ಯುಸಿಯಾಗಿದ್ದರೂ, ರಶ್ಮಿಕಾಗಾಗಿ ವಿಜಯ್ ಸಮಯ ಮಾಡಿಕೊಳ್ಳುತ್ತಾರೆ ಅನ್ನುತ್ತಿದೆ ಬಾಲಿವುಡ್. ತೆರೆಮೇಲೆ ಕಾಣಿಸಿಕೊಳ್ಳುವ ವಿಜಯ್ ದೇವರಕೊಂಡನೇ ಬೇರೆ, ತೆರೆ ಹಿಂದಿನ ವಿಜಯ್ ದೇವರಕೊಂಡನೇ ಬೇರೆ ಎಂದು ಹೇಳುತ್ತಿದೆ.
ವಿಜಯ್ ದೇವರಕೊಂಡ ಬಣ್ಣ ಕಳಚಿದ ಬಳಿಕ ಡಿಫ್ರೆಂಟ್ ವ್ಯಕ್ತಿಯಾಗಿ ಬದಲಾಗುತ್ತಾರೆ. ಸಿನಿಮಾದಲ್ಲಿ ಅವರನ್ನು ನೋಡುವುದೇ ಬೇರೆ, ತೆರೆ ಹಿಂದೆ ಪ್ರೀತಿ ಪಾತ್ರರೊಂದಿಗೆ ಬೆರೆಯುವುವಾಗ ಕಾಣುವುದೇ ಬೇರೆ ಎನ್ನುತ್ತಿದೆ ಬಾಲಿವುಡ್. ವಿಜಯ್ ದೇವರಕೊಂಡ ನಟಿ ರಶ್ಮಿಕಾ ಮಂದಣ್ಣಗೆ ಒಳ್ಳೆ ಜೋಡಿ ಅನ್ನುವುದಕ್ಕೆ ನಾಲ್ಕು ಕಾರಣವನ್ನು ನೀಡಿದೆ. ಆ ಕಾರಣಗಳು ಏನೆಂದು ತಿಳಿಯುವುದಕ್ಕೆ ಮುಂದೆ ಓದಿ.

ರಶ್ಮಿಕಾಗಾಗಿ ಕಿತ್ತಾಡಿದ್ದ ವಿಜಯ್
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೊತೆಯಾಗಿ 'ಡಿಯರ್ ಕಾಮ್ರೇಡ್' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆ ವೇಳೆ ಪ್ರಚಾರಕ್ಕೆ ಮುಂದಾಗಿದ್ದರು. ಆಗ ಪತ್ರಕರ್ತರೊಬ್ಬರು ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಮಾಡಿಕೊಂಡ ಬಗ್ಗೆ ಪ್ರಶ್ನೆ ಮಾಡಿದ್ದರು. ಆಗ ವಿಜಯ್ ದೇವರಕೊಂಡ ತಾಳ್ಮೆ ಕಳೆದುಕೊಂಡಿದ್ದರು. ರಶ್ಮಿಕಾ ಬದಲಾಗಿ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದರು. ರಶ್ಮಿಕಾಗಾಗಿ ಪತ್ರಕರ್ತನ ಜೊತೆ ಕಿತ್ತಾಡಿಕೊಂಡಿದ್ದರು.

ಪ್ರಮುಖ ದಿನಗಳು ನೆನಪಿನಲ್ಲಿರುತ್ತೆ
ಪುರುಷರಿಗೆ ಪ್ರಮುಖ ದಿನಗಳು ನೆನಪಿನಲ್ಲಿ ಇರುವುದಿಲ್ಲ ಎಂಬ ಮಾತಿದೆ. ಆದರೆ, ವಿಜಯ್ ದೇವರಕೊಂಡ ಕೇಸ್ ಹಾಗಲ್ಲ. ಇವರಿಗೆ ರಶ್ಮಿಕಾ ಬರ್ತ್‌ಡೇ ನೆನಪಿರುತ್ತೆ. ಸರಿಯಾದ ಸಮಯಕ್ಕೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಾರೆ ಎನ್ನುತ್ತಿದೆ ಬಾಲಿವುಡ್. 2019ರಲ್ಲಿ ವಿಜಯ್ ದೇವರಕೊಂಡ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾಗೆ ಬರ್ತ್‌ಡೇ ವಿಶ್ ಮಾಡಿದ್ದರು. ಆ ವೇಳೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಬ್ಯುಸಿ ಇದ್ದಾಗಲೂ ರಶ್ಮಿಕಾ ಜೊತೆ ಡಿನ್ನರ್
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಜಯ್ 'ಲೈಗರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ, ಇತ್ತ ರಶ್ಮಿಕಾ 'ಮಿಷನ್ ಮಜ್ನು' ಹಾಗೂ 'ಗುಡ್ ಬೈ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ, ರಶ್ಮಿಕಾ ಜೊತೆ ಆಗಾಗ ಡಿನ್ನರ್‌ಗೆ ಹೋಗುತ್ತಾರೆ. ತಮ್ಮ ಜೀವನದಲ್ಲಿ ಹತ್ತಿರವಿರುವ ವಿಶೇಷ ವ್ಯಕ್ತಿಯನ್ನು ಹೇಗೆ ಒಲಿಸಿಕೊಳ್ಳುವುದು ಎನ್ನುವುದು ವಿಜಯ್ ದೇವರಕೊಂಡಗೆ ಗೊತ್ತಿದೆ ಎನ್ನುತ್ತಿದೆ ಬಾಲಿವುಡ್.

ವರ್ಕ್‌ಔಟ್‌ನಲ್ಲೂ ಪಾರ್ಟ್ನರ್
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರ ಮದುವೆ ಸುದ್ದಿ ಹರಡುವುದಕ್ಕೆ ಈ ಎಲ್ಲಾ ಕಾರಣಗಳೂ ಸೇರಿಕೊಂಡಿವೆ. ಡೇಟಿಂಗ್ ಹೋಗಿದ್ದು, ಹೊಸ ವರ್ಷ ಒಟ್ಟಿಗೆ ಆಚರಿಸಿದ್ದು, ಸಂಕ್ರಾಂತಿ ಹಬ್ಬವನ್ನು ದೇವರಕೊಂಡ ಮನೆಯಲ್ಲಿಯೇ ಆಚರಣೆ ಮಾಡಿದ್ದು ಎಲ್ಲವೂ ಸೇರಿದೆ. ಮುಂಬೈನಲ್ಲಿಯೇ ನೆಲೆಸಿರುವ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ವರ್ಕ್‌ಔಟ್ ಮಾಡುತ್ತಾರೆ. ಈ ಫೋಟೊಗಳು ಕೆಲವು ದಿನಗಳ ಹಿಂದೆ ಹರಿದಾಡಿದ್ದವು. ಹೀಗಾಗಿ ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ವರ್ಕ್‌ಔಟ್‌ನಲ್ಲೂ ಒಳ್ಳೆ ಪಾರ್ಟ್ನರ್ ಎನ್ನುತ್ತಿದೆ. ಈ ಕಾರಣಕ್ಕೆ ರಶ್ಮಿಕಾ ಮಂದಣ್ಣಗೆ ವಿಜಯ್ ದೇವರಕೊಂಡ ಹೇಳಿ ಮಾಡಿಸಿದ ಜೋಡಿ ಎಂದು ಬಾಲಿವುಡ್ ಸರ್ಟಿಫಿಕೇಟ್ ಕೊಟ್ಟಿದೆ.


Click it and Unblock the Notifications











