ಬಾಲಿವುಡ್ ನಟ ಮಿಥಿಲೇಶ್ ಚತುರ್ವೇದಿ ನಿಧನ: ಕಂಬಿನಿ ಮಿಡಿದ ಬಾಲಿವುಡ್!
ಬಾಲಿವುಡ್ ಹಿರಿಯ ನಟ ಮಿಥಿಲೇಶ್ ಚತುರ್ವೇದಿ ನಿನ್ನೆ (ಆಗಸ್ಟ್ 03) ಕೊನೆಯುಸಿರೆಳೆದಿದ್ದಾರೆ. ಬಹಳ ದಿನಗಳಿಂದ ಮಿಥಿಲೇಶ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಮುಂಬೈನಲ್ಲಿ ಸಾವನ್ನಪ್ಪಿರುವ ವಿಚಾರವನ್ನು ಬಾಲಿವುಡ್ ಫಿಲ್ಮ್ ಮೇಕರ್ ಹನ್ಸಲ್ ಮೆಹ್ತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಿಥಿಲೇಶ್ ಚತುರ್ವೇದಿ ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರೋ ಮಿಥಿಲೇಶ್ ಚತುರ್ವೇದಿ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಮಿಥಿಲೇಶ್ ಚತುರ್ವೇದಿ ಸಿನಿಮಾ ಜೊತೆಗೆ ರಂಗಭೂಮಿ ಕಲಾವಿದರೂ ಆಗಿದ್ದರು.
ಕಂಬನಿ ಮಿಡಿದ ಗಣ್ಯರು
ಮಿಥಿಲೇಶ್ ಚತುರ್ವೇದಿ ನಿಧನದ ಸುದ್ದಿಯನ್ನು ಅವರ ಅಳಿಯ ಆಶಿಷ್ ಸೋಶಿಯಲ್ ಮೀಡಿಯಾ ಮೂಲಕ ಖಚಿತ ಪಡಿಸಿದ್ದಾರೆ. ಇನ್ನು ಮಿಥಿಲೇಶ್ ಅವರೊಂದಿಗೆ ಲಕ್ನೋದ ದರ್ಪಣ್ ಥಿಯೇಟರ್ ಗ್ರೂಪ್‌ನಲ್ಲಿ ಸಹೋದ್ಯೋಗಿಯಾಗಿದ್ದ ಅನಿಲ್ ರಸ್ತೋಗಿ ಕೂಡ ಹಿರಿಯ ನಟನ ಸಾವಿನ ಸುದ್ದಿಯನ್ನು ಕನ್ಫರ್ಮ್ಸ್ ಮಾಡಿದ್ದಾರೆ.

ಮಿಥಿಲೇಶ್ ಚತುರ್ವೇದಿ 1997ರಲ್ಲಿ 'ಭಾಯಿ ಬಾಯಿ' ಸಿನಿಮಾದ ಮೂಲಕ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದ್ದರು. ರಂಗಭೂಮಿಯಲ್ಲಿ ನಟನೆಯ ಪರಿಣಿತಿ ಪಡೆದಿದ್ದರಿಂದ ಇವರನ್ನು ಬಾಲಿವುಡ್ ಎರಡೂ ಕೈಗಳಿಂದ ಸ್ವಾಗತಿಸಿತ್ತು. ಹೀಗಾಗಿ ಹಲವು ಸಿನಿಮಾಗಳಲ್ಲಿ ಮಿಥಿಲೇಶ್ ಪೋಷಕ ಕಲಾವಿದರಾಗಿ ನಟಿಸಿದ್ದರು.
ಸೂಪರ್ ಹಿಟ್ ಸಿನಿಮಾಗಳಲ್ಲಿ ನಟನೆ
ಮಿಥಿಲೇಶ್ ಚತುರ್ವೇದಿ ಬಾಲಿವುಡ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 1999ರಲ್ಲಿ ತೆರೆಕಂಡಿದ್ದ 'ತಾಲ್', 2000ರಲ್ಲಿ ಹೃತಿಕ್ ರೋಷನ್ ನಟಿಸಿದ್ದ 'ಫಿಜಾ', 2001ರ 'ಅಕ್ಸ್', 'ಕಿಸ್ನಾ', 'ಬಂಟಿ ಔರ್ ಬಬ್ಲಿ', 'ಕೋಯಿ ಮಿಲ್ ಗಯಾ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

ಹಾಗಂತ ಕೇವಲ ಸಿನಿಮಾ ಅಷ್ಟೇ ಅಲ್ಲ, 'ಕಯಾಮತ್', 'ಸಂಧೂರ್ ತೆರೆ ನಾಮ್ ಕಾ' ಧಾರಾವಾಹಿಗಳಲ್ಲಿಯೂ ನಟಿಸಿದ್ದರು. ಟಿವಿ ಶೋ 'ಪಟಿಯಾಲ ಬೇಬ್‌ಸ್' ಹಾಗೂ ಬಾರಿ ಸಂಚಲ ಸೃಷ್ಟಿಸಿದ್ದ '1992 ಸ್ಕ್ಯಾಮ್' ವೆಬ್ ಸೀರಿಸ್‌ನಲ್ಲಿ ನಟಿಸಿದ್ದರು. ಈ ಸೀರಿಸ್‌ನಲ್ಲಿ ರಾಮ್ ಜಟ್‌ಮಲಾನಿ ಪಾತ್ರದಲ್ಲಿ ಮಿಥಿಲೇಶ್ ಚತುರ್ವೇದಿ ನಟಿಸಿದ್ದರು.


Click it and Unblock the Notifications











