ಲತಾ ಮಂಗೇಶ್ಕರ್ 'ಕುರೂಪಿ' ಎಂದಿದ್ದ ಬಾಲಿವುಡ್ ಶೋ ಮ್ಯಾನ್ ರಾಜ್‌ಕಪೂರ್: ಮುಂದೆ ಏನಾಯ್ತು?
ರಾಜ್‌ಕಪೂರ್ ಬಾಲಿವುಡ್‌ನ ಶೋ ಮ್ಯಾನ್. ರಾಜ್ ಕಪೂರ್ ತೆಗೆಯುವ ಸಿನಿಮಾಗಳು ವಿಶ್ವದಾದ್ಯಂತ ಹೊಸ ಸಂಚಲನವನ್ನೇ ಸೃಷ್ಟಿಸುತ್ತಿದ್ದವು. ಇವರ ಸಿನಿಮಾ ನೋಡುವುದಕ್ಕೆ ಇಡೀ ವಿಶ್ವವೇ ಕಾದು ಕೂತಿರುತ್ತಿತ್ತು. ತಾನು ಕಂಡ ಕಲ್ಪನೆಯನ್ನು ಅದೆಷ್ಟೇ ಕಷ್ಟ ಬಂದರೂ ತೆರೆಮೇಲೆ ತಂದು ಬಿಡುತ್ತಿದ್ದರು. ಈ ಕಾರಣಕ್ಕೆ ರಾಜ್ ಕಪೂರ್ ಬಾಲಿವುಡ್‌ನ ಶೋ ಮ್ಯಾನ್. ಒಂದು ಸಿನಿಮಾದಲ್ಲಿ ಲತಾ ಮಂಗೇಶ್ಕರ್ ಪ್ರಮುಖ ಪಾತ್ರ ನೀಡಲು ರಾಜ್‌ಕಪೂರ್ ಮುಂದಾಗಿದ್ದರು. ಲತಾ ಮಂಗೇಶ್ಕರ್ ಆ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದರು.
ರಾಜ್‌ಕಪೂರ್ ಅಂತಹ ನಟ- ನಿರ್ದೇಶಕನ ಜೊತೆ ಕೆಲಸ ಮಾಡಲು ಯಾರು ಒಪ್ಪುವುದಿಲ್ಲ. ಅದೂ ರಾಜ್ ಕಪೂರ್ ನಟಿಸುವಂತೆ ಕೇಳಿರುವಾಗ ಇಲ್ಲ ಎನ್ನಲು ಹೇಗೆ ಸಾಧ್ಯ? ಅಷ್ಟೊತ್ತಿಗಾಗಲೇ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಲತಾ ಮಂಗೇಶ್ಕರ್ ನಟನೆಗೆ ಮರಳಲು ಒಪ್ಪಿದ್ದರು. ಆದರೆ, ರಾಜ್ ಕಪೂರ್ ಆಡಿದ ಒಂದೇ ಒಂದು ಮಾತು ಲತಾ ಮಂಗೇಶ್ಕರ್ ಆ ಸಿನಿಮಾದಿಂದ ಹೊರಬಂದಿಬಿಟ್ಟರು. ಅಸಲಿಗೆ ಅಂದು ಆಗಿದ್ದು ಏನು? ತಿಳಿಯಲು ಮುಂದೆ ಓದಿ.

'ಸತ್ಯಂ ಶಿವಂ ಸುಂದರಂ' ಚಿತ್ರಕ್ಕೆ ಆಫರ್
1978ರಲ್ಲಿ ತೆರೆಕಂಡಿದ್ದ 'ಸತ್ಯಂ ಶಿವಂ ಸುಂದರಂ' ಬಾಲಿವುಡ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ರಾಜ್ ಕಪೂರ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ಶಶಿಕಪೂರ್, ಜೀನತ್ ಅಮಾನ್, ಪದ್ಮಿನಿ ಕೋಲ್ಹಾಪುರೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಇಬ್ಬರು ನಟಿಯಲ್ಲಿ ಒದು ಪಾತ್ರದಲ್ಲಿ ಲತಾ ಮಂಗೇಶ್ಕರ್ ನಟಿಸಬೇಕಿತ್ತು. ಒಂದು ವೇಳೆ ಲತಾ ಮಂಗೇಶ್ಕರ್ ಈ ಸಿನಿಮಾದಲ್ಲಿ ನಟಿಸಿದ್ದರೆ, ಅವರ ವೃತ್ತಿ ಬದುಕಿನಲ್ಲಿ ಹೊಸ ಅಧ್ಯಾಯ ಶುರುವಾಗುತ್ತಿತ್ತೋ ಏನೋ? ಆದರೆ, ರಾಜ್‌ಕಪೂರ್ ಆಡಿದ ಒಂದು ಮಾತಿನಿಂದ ಲತಾ ಮಂಗೇಶ್ಕರ್ ಹಿಂದೆ ಸರಿದುಬಿಟ್ಟರು.

ರಾಜ್ ಕಪೂರ್ ಮಾತು ಲತಾಗೆ ಹಿಡಿಸಲಿಲ್ಲ
ರಾಜ್‌ಕಪೂರ್ ಪ್ರೀತಿ ಮತ್ತು ನಂಬಿಕೆ ಅನ್ನುವು ಒಂದು ಸಂಬಂಧದ ಪಾವಿತ್ರ್ಯತೆ ಅಂತ ನಂಬಿದ್ದರು. ಕೇವಲ ದೈಹಿಕ ಸಂಬಂಧ ಪ್ರೀತಿಯಲ್ಲ ಎಂದೂ ನಂಬಿದ್ದರು. ಇದನ್ನೇ 'ಸತ್ಯಂ ಶಿವಂ ಸುಂದರಂ' ಸಿನಿಮಾ ತರಲು ರಾಜ್ ಕಪೂರ್ ಮುಂದಾಗಿದ್ದರು. ಹೀಗಾಗಿ ಒಂದು ಪಾತ್ರಕ್ಕೆ ಲತಾ ಮಂಗೇಶ್ಕರ್ ನಟಿಸಿದರೆ ಉತ್ತಮವೆಂದು ಭಾವಿಸಿದ್ದರು. ಸಿನಿಮಾ ಬಗ್ಗೆ ಮಾತಾಡುವಾಗ ರಾಜ್ ಕಪೂರ್ ಆಡಿದ ಒಂದು ಮಾತು ಲತಾ ಮಂಗೇಶ್ಕರ್‌ಗೆ ಬೇಸರ ತರಿಸಿತ್ತು. "ಒಂದು ಶಿಲೆ. ಅದೊಂದು ಕೇವಲ ಶಿಲೆಯಷ್ಟೇ. ಅದಕ್ಕೊಂದಿಷ್ಟು ಧಾರ್ಮಿಕ ಭಾವನೆಗಳನ್ನು ತುಂಬಿ, ಆಗ ಅದು ದೇವರಾಗುತ್ತೆ. ನೀವು ವಸ್ತುಗಳನ್ನು ಹೇಗೆ ನೋಡುತ್ತಿರೋ ಅದೇ ಮುಖ್ಯ ಆಗುತ್ತೆ. ನಿಮಗೆ ಸುಂದರವಾದ ಧ್ವನಿ ಕೇಳಿಸುತ್ತೆ. ಅದನ್ನು ಹುಡುಕಿಕೊಂಡು ಹೊರಟಾಗ ಕುರೂಪಿ ಹುಡುಗಿಯ ಧ್ವನಿ ಎಂದು ತಿಳಿಯುತ್ತೆ." ಎಂದು ಕಥೆ ಬಗ್ಗೆ ಹೇಳಿದ್ದರು. ಇದು ಲತಾ ಮಂಗೇಶ್ಕರ್‌ಗೆ ತೀವ್ರ ನೋವುಂಟು ಮಾಡಿತ್ತು.

ಸಿನಿಮಾಗೆ ಲತಾ ಮಂಗೇಶ್ಕರ್ ಪ್ರೇರಣೆ
ಲತಾ ಮಂಗೇಶ್ಕರ್ 'ಸತ್ಯಂ ಶಿವಂ ಸುಂದರಂ' ಸಿನಿಮಾದಿಂದ ಹೊರ ಬಂದಿದ್ದರು. ಆದರೆ, ಸಿನಿಮಾ ಮುಗಿದಿತ್ತು. ಹಾಡುಗಳಷ್ಟೇ ಬಾಕಿ ಇತ್ತು. ಆಗಲೂ ರಾಜ್ ಕಪೂರ್ ಸುಮ್ಮನಿರಲಿಲ್ಲ. ಪ್ರಚಾರದ ವೇಳೆ ಲತಾ ಮಂಗೇಶ್ಕರ್ ಮುಖ ಹಾಗೂ ಧ್ವನಿಯ ನಡುವಿನ ವ್ಯತ್ಯಾಸದಿಂದ ಪ್ರೇರಣೆ ಪಡೆದು ಸಿನಿಮಾ ಮಾಡಿದ್ದೇನೆ ಎಂದು ಹೇಳಿದ್ದರು. ಇದರಿಂದ ಮತ್ತಷ್ಟು ಬೇಸರಗೊಂಡಿದ್ದ ಲತಾ ಮಂಗೇಶ್ಕರ್ ಈ ಸಿನಿಮಾಗೆ ಹಾಡುವುದಿಲ್ಲವೆಂದು ನಿರ್ಧರಿಸಿದ್ದರು. ಬಳಿಕ ರಾಜ್ ಕಪೂರ್ ಈ ಸಿನಿಮಾದಲ್ಲಿ ಲತಾ ಮಂಗೇಶ್ಕರ್ ಹಾಡಲು ಒಪ್ಪಿಸಿದ್ದರು.

'ಸತ್ಯಂ ಶಿವಂ ಸುಂದರಂ' ವಿವಾದ
ಈ ಸಿನಿಮಾದಲ್ಲಿ ಶಶಿಕಪೂರ್ ಒಬ್ಬ ಸಾಮಾನ್ಯ ಮಹಿಳೆಯ ಪ್ರೀತಿಯಲ್ಲಿ ಬೀಳುತ್ತಾನೆ. ಆಕೆಯ ಧ್ವನಿಯನ್ನು ಇಷ್ಟ ಪಟ್ಟು ಪ್ರೀತಿಸುತ್ತಾನೆ. ಈ ಸಿನಿಮಾ ನೋಡಿದವರಿಗೆ ಇದು ಲತಾ ಮಂಗೇಶ್ಕರ್ ಅವರ ಪ್ರೇರಣೆಯಿಂದ ಹುಟ್ಟಿದ ಕಥೆ ಎಂದು ಸುಲಭವಾಗಿ ಹೇಳಬಹುದಿತ್ತು. ಆದರೆ, ಈ ಸಿನಿಮಾ ಬಿಡುಗಡೆ ಬಗ್ಗೆ ವಿವಾದಕ್ಕೆ ಸಿಕ್ಕಿಕೊಂಡಿತ್ತು. ಶಶಿ ಕಪೂರ್ ಹಾಗೂ ಜೀನತ್ ಅಮಾನ್ ಅವರ ಬೋಲ್ಡ್ ದೃಶ್ಯಗಳು ವಿವಾದಕ್ಕೆ ಸಿಲುಕಿದ್ದವು. ಒಂದು ವೇಳೆ ಲತಾ ಮಂಗೇಶ್ಕರ್ ನಟಿಸಿದ್ದರು. ಸಿನಿಮಾದ ಸ್ವರೂಪ ಬದಲಾಗುತ್ತಿತ್ತೋ ಏನೋ?


Click it and Unblock the Notifications











