"ಮಹಾತ್ಮ ಗಾಂಧಿ ಪಾಕಿಸ್ತಾನಕ್ಕೆ ರಾಷ್ಟ್ರಪಿತ ಭಾರತಕ್ಕಲ್ಲ"; ಬಾಲಿವುಡ್ ಗಾಯಕನ ವಿವಾದತ್ಮಕ ಹೇಳಿಕೆ
ಬಾಲಿವುಡ್‌ನ ಜನಪ್ರಿಯ ಗಾಯಕ ಅಭಿಜಿತ್ ಭಟ್ಟಾಚಾರ್ಯ ಆಗಾಗ ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್‌ಗಳಿಗೆ ಧ್ವನಿಯನ್ನು ನೀಡಿವ ಈ ಫೇಮಸ್ ಗಾಯಕ ಈಗ ಮತ್ತೊಂದು ವಿವಾದದಲ್ಲಿ ಸಿಕ್ಕಿಕ್ಕೊಂಡಿದ್ದಾರೆ. ಅದೂ ರಾಷ್ಟ್ರಪತಿ ಮಹಾತ್ಮ ಗಾಂಧಿ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಟೀಕೆಗೆ ಗುರಿಯಾಗಿದ್ದಾರೆ.
ಇತ್ತೀಚೆಗೆ ಪಾಡ್‌ಕಾಸ್ಟ್ ಒಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಭಿಜಿತ್ ಭಟ್ಟಾಚಾರ್ಯ ಮಹಾತ್ಮ ಗಾಂಧಿಯ ಬಗ್ಗೆ ಕೊಟ್ಟಿರುವ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಸಂದರ್ಶನದಲ್ಲಿ ಮಾಹಾತ್ಮ ಗಾಂಧಿ ಭಾರತಕ್ಕೆ ರಾಷ್ಟ್ರಪಿತ ಅಲ್ಲ ಪಾಕಿಸ್ತಾನಕ್ಕೆ ಎಂದು ಹೇಳುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ ಬಾಲಿವುಡ್‌ನ ಲೆಜೆಂಡರಿ ಸಂಗೀತ ನಿರ್ದೇಶಕ ಆರ್ ಡಿ ಬರ್ಮನ್ ಮಹಾತ್ಮ ಗಾಂಧಿಗಿಂತ ಲೇಸು ಎಂದು ಹೇಳಿದ್ದಾರೆ.

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ಸೈಫ್ ಅಲಿ ಖಾನ್, ಮಿಥುನ್ ಚಕ್ರವರ್ತಿ, ಸಂಜಯ್ ದತ್, ಗೋವಿಂದ, ಅಕ್ಷಯ್ ಕುಮಾರ್, ಅಜಯ್ ದೇವಗನ್ ಸೇರಿದಂತೆ ಇತ್ತೀಚೆಗಿನ ಹೀರೋಗಳಾದ ರಣ್‌ಬೀರ್ ಕಪೂರ್‌ಗೂ ಧ್ವನಿಯನ್ನು ನೀಡಿದ್ದಾರೆ. ಹಿಂದಿ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಿಗೆ ಅಭಿಜಿತ್ ಸುಮಾರು 6 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಆದರೆ, ಇತ್ತೀಚೆಗೆ ಈ ಗಾಯಕ ವಿವಾದಾತ್ಮಕ ಹೇಳಿಕೆಗಳ ಮೂಲಕ ಹೆಚ್ಚು ಸುದ್ದಿಯಲ್ಲಿ ಇದ್ದಾರೆ.
ಅಭಿಜಿತ್ ಭಟ್ಟಾಚಾರ್ಯ ಆಗಾಗ ನೀಡಿದ ವಿವಾದಾತ್ಮಕ ಹೇಳಿಕೆಗಳ ಮೂಲಕ ಟೀಕೆಗೆ ಗುರಿಯಾಗಿದ್ದರು. ಈಗ ಮಹಾತ್ಮ ಗಾಂಧಿ ಬಗ್ಗೆ ಪತ್ರಕರ್ತ ಶುಭಾಂಕರ್ ಮಿಶ್ರ ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ ಮಹಾತ್ಮ ಗಾಂಧಿ ಪಾಕಿಸ್ತಾನಕ್ಕೆ ರಾಷ್ಟ್ರಪಿತ ಭಾರತಕ್ಕೆ ಅಲ್ಲ ಎಂದು ಹೇಳಿದ್ದಾರೆ. ಇದೇ ಸಂದರ್ಶನದಲ್ಲಿ ಲೆಜೆಂಡರಿ ಮ್ಯೂಸಿಕ್ ಡೈರೆಕ್ಟರ್ ಆರ್. ಡಿ. ಬರ್ಮನ್ ಹಾಗೂ ಮಹಾತ್ಮ ಗಾಂಧಿಯನ್ನು ಹೋಲಿಕೆ ಮಾಡಿ ಮಾತಾಡಿದ್ದಾರೆ. ಅಷ್ಟಕ್ಕೂ ಈ ಸಂದರ್ಶನದಲ್ಲಿ ಏನು ಹೇಳಿದ್ದಾರೆ ಅಂತ ನೋಡುವುದಾದರೇ..
" ಮಹಾತ್ಮ ಗಾಂಧಿಗಿಂತ ಪಂಚಮ್ ದಾ ( ಆರ್. ಡಿ. ಬರ್ಮನ್) ಮೇಲು. ಮಹಾತ್ಮ ಗಾಂಧಿ ಹೇಗೆ ರಾಷ್ಟ್ರಪಿತಾನೋ ಹಾಗೂ ಪಂಚಮ್ ದಾ (ಆರ್ ಡಿ ಬರ್ಮನ್) ವರ್ಲ್ಡ್ ಮ್ಯೂಸಿಕ್‌ನ ರಾಷ್ಟ್ರಪಿತ ಎಂದು ಹೇಳಿದ್ದಾರೆ. ಇದೇ ವೇಳೆ ಮಹಾತ್ಮ ಗಾಂಧಿ ಭಾರತದ ರಾಷ್ಟ್ರಪಿತ ಅಲ್ಲ. ಅವರು ಪಾಕಿಸ್ತಾನ ರಾಷ್ಟ್ರಪಿತ. ಭಾರತ ಯಾವಾಗಲೂ ಇತ್ತು. ಆದರೆ ಪಾಕಿಸ್ತಾನವನ್ನು ಹುಟ್ಟಾಕಲಾಗಿದೆ. ಮಹಾತ್ಮ ಗಾಂಧಿಯನ್ನು ತಪ್ಪಾಗಿ ರಾಷ್ಟ್ರಪಿತ ಎಂದು ಕರೆಯಲಾಗುತ್ತಿದೆ" ಎಂದು ಅಭಿಜಿತ್ ಹೇಳಿದ್ದಾರೆ.
ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಬಾಲಿವುಡ್ ಗಾಯಕ ಅಭಿಜಿತ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲವರು ಅಭಿಜಿತ್ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ಈ ಗಾಯಕ ಬೆಂಗಾಲಿ ಸಿನಿಮಾದ ಮೂಲಕ ಗಾಯಕರಾಗಿ ಪರಿಚಯ ಆಗಿದ್ದರು. ಲೆಜೆಂಡರಿ ಸಿಂಗರ್ ಆರ್ ಡಿ ಬರ್ಮನ್ ಗಾಯಕ ಅಭಿಜಿತ್ ಅವರನ್ನು ಪರಿಚಯಿಸಿದ್ದರು. ಅಲ್ಲಿಂದ ಅಭಿಜಿತ್ ಹಿಂದಿ ಸೇರಿದಂತೆ ಹಲವು ಭಾಷೆಗಳಿಗೆ ಧ್ವನಿಯನ್ನು ನೀಡಿದ್ದಾರೆ.
ಬಾಲಿವುಡ್‌ನ ಸೂಪರ್‌ಸ್ಟಾರ್ ಶಾರುಖ್ ಖಾನ್ ಸಿನಿಮಾಗಳಿಗೆ ಹೆಚ್ಚಾಗಿ ಹಾಡಿದ್ದಾರೆ. ಶಾರುಖ್ ಖಾನ್ ಹಾಗೂ ಅಭಿಜಿತ್ ಭಟ್ಟಾಚಾರ್ಯ ಕಾಂಬಿನೇಷನ್ ಹೆಚ್ಚು ಸೂಪರ್ ಹಿಟ್ ಹಾಡುಗಳನ್ನು ನೀಡಿದೆ. ಅಭಿಜಿತ್ ಧ್ವನಿ ಶಾರುಖ್ ಖಾನ್‌ಗೆ ಹೊಂದಿಕೆಯಾಗುತ್ತಿತ್ತು. ಈ ಜೋಡಿ ಸಾಕಷ್ಟು ಹಿಟ್ ಸಾಂಗ್‌ಗಳನ್ನು ನೀಡಿದೆ. ಆದರೆ, ಕೆಲವು ತಿಂಗಳ ಹಿಂದಷ್ಟೇ ಶಾರುಖ್ ಖಾನ್ ವಿರುದ್ಧ ಹೇಳಿಕೆ ಕೊಟ್ಟು ವಿವಾದಕ್ಕೆ ಸಿಕ್ಕಿಕೊಂಡಿದ್ದರು.


Click it and Unblock the Notifications











