For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಸೋಂಕು ಹೊತ್ತು ತಂದ ಬಾಲಿವುಡ್ ಗಾಯಕಿ ವಿರುದ್ಧ ಎಫ್‌ಐಆರ್ ದಾಖಲು

  |

  ಲಂಡನ್‌ನಿಂದ ಕೊರೊನಾ ವೈರಸ್ ಹೊತ್ತು ತಂದಿದ್ದಲ್ಲದೆ, ನಿರ್ಲಕ್ಷ್ಯವಹಿಸಿ ಪಾರ್ಟಿಗಳಲ್ಲಿ ಭಾಗವಹಿಸಿ ನಾನೂರಕ್ಕೂ ಹೆಚ್ಚು ಜನರಲ್ಲಿ ವೈರಸ್ ಹರಡಿರುವ ಭೀತಿ ಮೂಡಲು ಕಾರಣವಾಗಿರುವ ಬಾಲಿವುಡ್‌ನ ಗಾಯಕಿ ಕನಿಕಾ ಕಪೂರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

  ಸನ್ನಿ ಲಿಯೋನ್ ತನ್ನ‌ ಮಕ್ಕಳನ್ನು ಕೊರೋನಾದಿಂದ ದೂರ ಇಡೋದಕ್ಕೆ ಏನ್ ಮಾಡ್ತಿದ್ದಾರೆ | Sunny Leone | Childerns

  ಲಕ್ನೋ ವಿಮಾನ ನಿಲ್ದಾಣಕ್ಕೆ ಲಂಡನ್‌ನಿಂದ ಬಂದಿದ್ದ ಕನಿಕಾ ಕಪೂರ್, ತಮ್ಮ ಪ್ರಯಾಣದ ವಿವರವನ್ನು ಅಧಿಕಾರಿಗಳಿಂದ ಮುಚ್ಚಿಟ್ಟಿದ್ದರು ಎನ್ನಲಾಗಿದೆ. ಅಲ್ಲದೆ, ಹೊರಗೆ ಓಡಾಡದೆ ಮನೆಯಲ್ಲಿ ಸ್ವಯಂ ದಿಗ್ಬಂಧನಕ್ಕೆ ಒಳಗಾಗಿವಂತೆ ಸೂಚನೆ ನೀಡಿದ್ದರೂ ಅದನ್ನು ಪಾಲಿಸದೆ ಅವರು ಪಾರ್ಟಿ ಆಯೋಜಿಸಿದ್ದರು. ಅದರಲ್ಲಿ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು ಕೂಡ ಪಾಲ್ಗೊಂಡಿದ್ದರು. ಅಲ್ಲದೆ, ಕನಿಕಾ ಒಟ್ಟು ಮೂರು ಪಾರ್ಟಿಗಳಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.

  ಕೊರೊನಾ ವೈರಸ್ ಸೋಂಕು ತಗುಲಿದ್ದರೂ ಸಲಹೆಗಳನ್ನು ಅನುಸರಿಸದೆ ಸುತ್ತಾಡಿರುವುದರಿಂದ ಅವರ ವಿರುದ್ಧ ನಿರ್ಲಕ್ಷ್ಯ ಮತ್ತು ಅಸಹಕಾರದ ಆರೋಪದ ಮೇಲೆ ಲಕ್ನೋ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಸರೋಜಿನಿನಗರ ಪೊಲೀಸ್ ಠಾಣೆಯಲ್ಲಿ ಕನಿಕಾ ಕಪೂರ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಸುರ್ಜಿತ್ ಪಾಂಡೆ ತಿಳಿಸಿದ್ದಾರೆ.

  ನಿರ್ಲಕ್ಷ್ಯ, ಅಸಹಕಾರ ಪ್ರಕರಣ

  ನಿರ್ಲಕ್ಷ್ಯ, ಅಸಹಕಾರ ಪ್ರಕರಣ

  'ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 269 (ಜೀವಕ್ಕೆ ಮಾರಕವಾಗುವ ಕಾಯಿಲೆಯ ಸೋಂಕನ್ನು ಹರಡುವಲ್ಲಿ ನಿರ್ಲಕ್ಷ್ಯ), 270 (ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಯ ಸೋಂಕನ್ನು ಹರಡುವ ಮಾರಕ ಕೃತ್ಯ), 188 (ಸಾರ್ವಜನಿಕ ಅಧಿಕಾರಿಗಳು ಹೊರಡಿಸಿದ ಆದೇಶಗಳನ್ನು ಪಾಲಿಸುವಲ್ಲಿ ಅಸಹಕಾರ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.

  ಇನ್ನೂ ಎರಡು ಪ್ರಕರಣ ಸಾಧ್ಯತೆ

  ಇನ್ನೂ ಎರಡು ಪ್ರಕರಣ ಸಾಧ್ಯತೆ

  ಲಕ್ನೋದ ಮುಖ್ಯ ಆರೋಗ್ಯ ಅಧಿಕಾರಿ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಕನಿಕಾ ಓಡಾಡಿದ್ದಾರೆ ಎನ್ನಲಾದ ಪ್ರದೇಶಗಳ ವ್ಯಾಪ್ತಿಯಲ್ಲಿನ ಹಜರತ್ ಗಂಜ್ ಮತ್ತು ಗೋಮ್ಟಿನಗರ ಪೊಲೀಸ್ ಠಾಣೆಗಳಲ್ಲಿ ಕೂಡ ಇನ್ನೂ ಎರಡು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.

  ಬಾಲಿವುಡ್ ಮೌನ

  ಬಾಲಿವುಡ್ ಮೌನ

  ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿಯ ನಿರ್ಲಕ್ಷ್ಯ ಧೋರಣೆಯಿಂದಲೇ ಕೊರೊನಾ ವೈರಸ್ ಭೀತಿ ಹೆಚ್ಚಳವಾಗಿರುವುದರ ಬಗ್ಗೆ ಬಾಲಿವುಡ್ ಮೌನವಹಿಸಿದೆ. ಬೇಗ ಹುಷಾರಾಗಿ ಎಂದು ಕನಿಕಾ ಕಪೂರ್ ಅವರಿಗೆ ಹಾರೈಸುತ್ತಿದ್ದಾರೆಯೇ ವಿನಾ ಅವರ ವರ್ತನೆಯನ್ನು ಖಂಡಿಸುತ್ತಿಲ್ಲ. ಆದರೆ ಬಾಲಿವುಡ್‌ನ ಮತ್ತೊಬ್ಬ ಪ್ರಸಿದ್ಧ ಗಾಯಕಿ ಸೋನಾ ಮೊಹಾಪಾತ್ರ, ಕನಿಕಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

  English summary
  Bollywood singer Kanika Kapoor who was tested coronavirus positive on Friday was booked for negligence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X