ಇವರಲ್ಲಿ 180 ಪ್ಲಾಪ್ ಕೊಟ್ಟ ಸ್ಟಾರ್ ನಟ ಯಾರು? ಅಕ್ಷಯ್, ಗೋವಿಂದಾ, ಅಮಿತಾಭ್ ಲಿಸ್ಟ್‌ನಲ್ಲಿ ಎಷ್ಟು?
ಬಾಲಿವುಡ್ ಅನ್ನೋದು ಸಾಗರವಿದ್ದಂತೆ. ಇಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭ ಅಲ್ಲ. ಅದೆಷ್ಟೊಂದು ಮಂದಿ ಸ್ಟಾರ್ ಆಗಬೇಕು ಅಂತ ಬಂದವರು ಚಿಕ್ಕದೊಂದು ಪಾತ್ರವನ್ನು ಗಿಟ್ಟಿಸಿಕೊಳ್ಳಲಾಗದೇ ಹತಾಶರಾದವರೂ ಇದ್ದಾರೆ.
ಪರಿಸ್ಥಿತಿ ಹೀಗಿರುವಾಗ ತನ್ನ ವೃತ್ತಿ ಬದುಕಿನಲ್ಲಿ ಬಾಲಿವುಡ್ ನಟರೊಬ್ಬರು ಸುಮಾರು 180 ಫ್ಲಾಪ್ ಕೊಟ್ಟಿದ್ದಾರೆ. ಆದರೂ ಬಾಲಿವುಡ್ ಅಂತಹ ಮಹಾಸಾಗರದಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ಇಷ್ಟೊಂದು ಪ್ಲಾಪ್ ಸಿನಿಮಾಗಳನ್ನು ಕೊಟ್ಟೂ ಸ್ಟಾರ್ ಪಟ್ಟ ಉಳಿಸಿಕೊಂಡಿವರು ತೀರಾ ವಿರಳ. ಈ ಸಾಲಿನಲ್ಲಿ ಗೋವಿಂದ, ಅಕ್ಷಯ್ ಕುಮಾರ್, ಅಜಯ್ ದೇವಗನ್, ಧರ್ಮೇಂದ್ರ ಕೂಡ ಇದ್ದಾರೆ. ಹಾಗಿದ್ದರೆ, ಇಷ್ಟೊಂದು ಪ್ಲಾಪ್ ಕೊಟ್ಟ ಆ ನಟ ಯಾರು? ತಿಳಿಯೋಕೆ ಮುಂದೆ ಓದಿ.
180 ಪ್ಲಾಪ್ ಕೊಟ್ಟ ನಟ ಯಾರು?
ಬಾಲಿವುಡ್‌ನಲ್ಲಿ ಶಾರುಖ್ ಖಾನ್ ನಿರಂತರವಾಗಿ 6 ಫ್ಲಾಪ್ ಸಿನಿಮಾಗಳನ್ನು ನೀಡಿದ್ದರು. ಆ ಬಳಿಕ ಮತ್ತೊಂದು ಮೆಗಾ ಹಿಟ್ ಕೊಡುವುದಕ್ಕೆ 4 ವರ್ಷ ಗ್ಯಾಪ್ ತೆಗೆದುಕೊಂಡಿದ್ದರು. ಆದರೆ, ಈ ನಟ 180 ಪ್ಲಾಪ್ ಸಿನಿಮಾಗಳನ್ನು ಕೊಟ್ಟೂ ಬಾಲಿವುಡ್‌ನಲ್ಲಿ ಉಳಿದುಕೊಂಡಿರೋದು ಗ್ರೇಟ್. ಅಷ್ಟಕ್ಕೂ ಆ ನಟ ಯಾರು ಅಂದ್ರೆ ಮಿಥುನ್ ಚಕ್ರವರ್ತಿ.
ವಿಶೇಷ ಅಂದ್ರೆ, ಬಾಲಿವುಡ್‌ನ ದಿಗ್ಗಜ ಮಿಥುನ್ ಚಕ್ರವರ್ತಿ ಕೊಟ್ಟ 180 ಫ್ಲಾಪ್ ಸಿನಿಮಾಗಳಲ್ಲಿ 47 ಸಿನಿಮಾ ಬಾಕ್ಸಾಫೀಸ್‌ನಲ್ಲಿ ದುರಂತ ಅಂತ ಸಾಬೀತಾಗಿದೆ. 1993 ರಿಂದ 98ರವರೆಗೆ ಬ್ಯಾಕ್ ಟು ಬ್ಯಾಕ್ 33 ಫ್ಲಾಪ್ ಸಿನಿಮಾಗಳನ್ನು ಕೊಟ್ಟಿದ್ದರು.

ನಟಿಸಿದ್ದೆಷ್ಟು..? ಸೋತಿದ್ದೆಷ್ಟು? ಗೆದ್ದಿದ್ದೆಷ್ಟು?
ಬಾಲಿವುಡ್ ದಿಗ್ಗಜ ಮಿಥುನ್ ಚಕ್ರವರ್ತಿ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರಲ್ಲಿ 180 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ಬಾಲಿವುಡ್ ನಟರ ಮಟ್ಟಿಗೆ ಈ ಮಟ್ಟಿಗೆ ಫ್ಲಾಪ್ ಕೊಟ್ಟು ದಾಖಲೆ ಬರೆದಿದ್ದ ನಟರಿಲ್ಲ.
ಅಂದ್ಹಾಗೆ, ಮಿಥುನ್ ಚಕ್ರವರ್ತಿ ಸುಮಾರು 50ಕ್ಕೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಉಳಿದವು ಸಾಧಾರಾಣ ಹಿಟ್ ಕಂಡಿವೆ. ಹಾಗಂತ ಮಿಥುನ್ ಚಕ್ರವರ್ತಿ ಅಷ್ಟೇ ಅಲ್ಲ. ಬಾಲಿವುಡ್‌ನಲ್ಲಿ ಇಂತಹ ದಾಖಲೆ ಮಾಡುವಷ್ಟು ಫ್ಲಾಪ್ ಸಿನಿಮಾಗಳನ್ನು ಕೊಟ್ಟ ನಟರ ಪಟ್ಟಿನೇ ಇದೆ.
ಹೆಚ್ಚು ಫ್ಲಾಪ್ ಕೊಟ್ಟ ನಟರು ಯಾರು?
ಮಿಥುನ್ ಚಕ್ರವರ್ತಿ ಜೊತೆಗೆ ಫ್ಲಾಪ್ ಕೊಟ್ಟ ನಟರ ಇನ್ನೊಂದು ಪಟ್ಟಿ ಇದೆ. ಮತ್ತೊಬ್ಬ ಹಿರಿಯ ನಟ ಜೀತೆಂದ್ರ 106 ಫ್ಲಾಪ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಧರ್ಮೇಂದ್ರ 99 ಫ್ಲಾಪ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇವುಗಳ ಜೊತೆ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರಿಂದ ಸ್ಟಾರ್ ಪಟ್ಟ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಹಾಗೇ ರಿಷಿಕಪೂರ್ 76, ಗೋವಿಂದ 75 ಫ್ಲಾಪ್ ಸಿನಿಮಾ ಕೊಟ್ಟಿದ್ದಾರೆ. ಇವರ ಜೊತೆ ಅಧೀರ ಸಂಜಯ್ ದತ್ 70 ಫ್ಲಾಪ್, ಅಮಿತಾಬ್ ಬಚ್ಚನ್ 68, ವಿನೋದ್ ಖನ್ನ 64, ಅಕ್ಷಯ್ ಕುಮಾರ್ 57, ರಾಜೇಶ್ ಖನ್ನ ನಟಿಸಿದ 55 ಸಿನಿಮಾಗಳು ಸೋತಿವೆ.


Click it and Unblock the Notifications











