ಅಪ್ಪ ₹6289 ಕೋಟಿ ಒಡೆಯ: ಮಗನಿಗೆ ವೋಡ್ಕ.. ಫ್ಯಾಷನ್ ಕಿಕ್ಕು.. ಉದ್ಯಮಿನಾ–ಹೀರೊನಾ?

ಸತತ ಸೋಲಿನಿಂದ ಕಂಗೆಟ್ಟು ಹೋಗಿದ್ದ ಶಾರುಖ್ ಖಾನ್ ಮತ್ತೆ ಬಾಲಿವುಡ್‌ನಲ್ಲಿ ಕಿಂಗ್ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಒಂದೇ ಒಂದು ಸಿನಿಮಾ ಸೋಲಿನ ಕಹಿಯನ್ನು ಮರೆಸಿದೆ. ತನ್ನ ವೃತ್ತಿ ಬದುಕಿನ ಜೊತೆನೇ ಮಗನ ಭವಿಷ್ಯದ ಕಡೆಗೂ ಶಾರುಖ್ ಗಮನ ಹರಿಸಿದ್ದಾರೆ.

ಆರ್ಯನ್ ಖಾನ್ ತಂದೆಯ ಉತ್ತರಾಧಿಕಾರಿ ಆಗುತ್ತಾರಾ? ಅನ್ನೋ ಪ್ರಶ್ನೆ ಬಾಲಿವುಡ್‌ನಲ್ಲಿ ಹರಿದಾಡುತ್ತಲೇ ಇದೆ. ಇದು ಇಂದು-ನಿನ್ನೆಯಿಂದ ಹುಟ್ಟಿಕೊಂಡಿರೋ ಪ್ರಶ್ನೆಯಲ್ಲ. ಈ ಹಿಂದೆ ಡ್ರಗ್ಸ್ ವಿಚಾರವಾಗಿ ಬಂಧನವಾದಾಗ ಆರ್ಯನ್ ತಂದೆಯಂತೆ ಸೂಪರ್‌ಸ್ಟಾರ್ ಆಗೋಕೆ ಸಾಧ್ಯನೇ ಇಲ್ಲ ಅನ್ನೋ ಟೀಕೆಗಳು ಬಂದಿದ್ದರು.

Bollywood Star Shah Rukh Khan Son Aryan new Business streetwear brand DYavol launched

ಆರ್ಯನ್‌ಗೆ ನಟನೆಯಲ್ಲಿ ಇಷ್ಟವಿಲ್ಲ. ಸಿನಿಮಾರಂಗಕ್ಕೆ ಕಾಲಿಟ್ಟರೆ, ತೆರೆ ಹಿಂದೆ ಕೆಲಸ ಮಾಡುತ್ತಾರೆ ಅನ್ನೋ ವರದಿಗಳೂ ಇದ್ದವು. ಈಗ ಆರ್ಯನ್ ತಂದೆ ಹಾದಿ ಬಿಟ್ಟು ಬೇರೆ ಕಡೆಗೆ ಹೊರಟಿರೋ ಹಾಗಿದೆ. ಅದಕ್ಕೆ ಕಾರಣ, ಇತ್ತೀಚೆಗೆ ಹೊಸದಾಗಿ ಲಾಂಚ್‌ ಮಾಡಿರೋ ಫ್ಯಾಷನ್ ಬ್ರ್ಯಾಂಡ್.

ಅಪ್ಪನಿಂದಲೇ ಫ್ಯಾಷನ್ ಬ್ರ್ಯಾಂಡ್ ಲಾಂಚ್

ಸೂಪರ್‌ಸ್ಟಾರ್‌ಗಳಿಗೆ ತಮ್ಮ ಮಕ್ಕಳು ಸಿನಿಮಾರಂಗಕ್ಕೆ ಬರಬೇಕು ಅನ್ನೋ ಆಸೆ ಇರುತ್ತೆ. ಮಕ್ಕಳನ್ನು ಚಿತ್ರರಂಗದಲ್ಲಿ ನೆಲೆಯೂರಿಸಲು ರೆಡಿಯಾಗುತ್ತಾರೆ. ಇದರಲ್ಲಿ ಕೆಲವರಿಗೆ ಲಕ್ಕು ಸಿಗುತ್ತೆ. ಮತ್ತೆ ಕೆಲವರಿಗೆ ಸಿಗಲ್ಲ ಅಷ್ಟೆ. ಆದರೆ, ಶಾರುಖ್ ಖಾನ್ ಪುತ್ರ ಉದ್ಯಮಿಯಾಗಿ ರೂಪುಗೊಳ್ಳುತ್ತಿದ್ದಾರಾ? ಅನ್ನೋ ಅನುಮಾನ ಮೂಡುತ್ತಿದೆ. ಯಾಕಂದ್ರೆ, ಆರ್ಯನ್ ಈಗ ಡಿ'ಯಾವೋಲ್ ಅನ್ನೋ ಹೊಸ ಫ್ಯಾಷನ್ ಬ್ರ್ಯಾಂಡ್ ಅನ್ನು ಲಾಂಚ್ ಮಾಡಿದ್ದಾರೆ.

Bollywood Star Shah Rukh Khan Son Aryan new Business streetwear brand DYavol launched

ಈ ಬ್ರ್ಯಾಂಡ್‌ನ ಚಿಕ್ಕದೊಂದು ಜಾಹೀರಾತು ಕೂಡ ರಿಲೀಸ್ ಮಾಡಿದ್ದಾರೆ. ಈ ಜಾಹೀರಾತಿನಲ್ಲಿ ಅಪ್ಪ ಮಗ ಇಬ್ಬರೂ ಕಾಣಿಸಿಕೊಂಡಿರೋದು ವಿಶೇಷ. ಆರ್ಯನ್ ಈ ಬಟ್ಟೆ ಕಂಪನಿಯನ್ನು ಲೆಟಿ ಬ್ಲಾಗೋವಾ, ಬಂಟಿ ಸಿಂಗ್ ಅವರೊಂದಿಗೆ ಸೇರಿ ಆರಂಭಿಸಿದ್ದಾರೆ. ಇದಕ್ಕೆ ಶಾರುಖ್ ಖಾನ್ ಬೆಂಬಲ ಕೂಡ ಇದೆ.

ವೋಡ್ಕಾ.. ಕೆಕೆಆರ್.. ಮತ್ತೇನೇನು?

ಆರ್ಯನ್ ಖಾನ್ ಶಿಕ್ಷಣ ಮುಗಿಸಿ ಹಿಂತಿರುಗಿತ್ತಿದ್ದಂತೆ ಬ್ಯುಸಿನೆಸ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಕಳೆದ ವರ್ಷವಷ್ಟೇ ಆರ್ಯನ್ ಖಾನ್ ಪ್ರೀಮಿಯಂ ವೋಡ್ಕಾ ಬ್ರ್ಯಾಂಡ್ ಅನ್ನು ಲಾಂಚ್ ಮಾಡಿದ್ದರು. ವೋಡ್ಕಾ ಬ್ಯುಸಿನೆಸ್‌ಗೂ ಲೆಟಿ ಬ್ಲಾಗೋವಾ, ಬಂಟಿ ಸಿಂಗ್ ಇಬ್ಬರು ಪಾರ್ಟ್ನರ್‌ಗಳಾಗಿದ್ದಾರೆ.

ಆರ್ಯನ್ ಖಾನ್ ಸಿನಿಮಾಗಿಂತ ಹೆಚ್ಚಾಗಿ ಶಾರುಖ್ ಖಾನ್ ಕಂಪನಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಶಾರುಖ್ ಒಡೆತನದ ಐಪಿಎಲ್ ಕ್ರಿಕೆಟ್ ತಂಡ ಕೆಕೆಆರ್ ಅನ್ನು ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಹಾಗೇ ನಿರ್ಮಾಣ ಸಂಸ್ಥೆ ಹಾಗೂ ರೆಡ್‌ ಚಿಲ್ಲೀಸ್ ಹಾಗೂ ವಿಎಫ್‌ಎಕ್ಸ್ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಶಾರುಖ್ ವಿಶ್ವದ ಶ್ರೀಮಂತ ನಟರಲ್ಲೊಬ್ಬ

ಇತ್ತ ಶಾರುಖ್ ಖಾನ್ ಕೂಡ ಆಗರ್ಭ ಶ್ರೀಮಂತ. ವಿಶ್ವದ ಶ್ರೀಮಂತ ನಟರಲ್ಲಿ ಇಬ್ಬರು. ಮೂಲಗಳ ಪ್ರಕಾರ, ಶಾರುಖ್ ಖಾನ್ ಒಟ್ಟಿ ಆಸ್ತಿ ಮೌಲ್ಯ ₹6289 ಕೋಟಿ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಕೆಕೆಆರ್, ರೆಡ್ ಚಿಲ್ಲೀಸ್ ನಿರ್ಮಾಣ ಸಂಸ್ಥೆ ಸೇರಿದಂತೆ ಮೂಲಗಳಿಂದ ಹಣ ಗಳಿಕೆ ಮಾಡುತ್ತಿದ್ದಾರೆ.

ಇಷ್ಟೆಲ್ಲಾ ಇದ್ಮೇಲೆ ಆರ್ಯನ್ ಖಾನ್ ಚಿತ್ರರಂಗಕ್ಕೆ ಬರೋದಿಲ್ವಾ? ಅನ್ನೋ ಪ್ರಶ್ನೆನೂ ಮೂಡಿದೆ. ಬ್ಯುಸಿನೆಸ್‌ ಕಡೆ ಹೆಚ್ಚು ಗಮನ ಹರಿಸಿದ್ದರೂ, ಸಿನಿಮಾ ಜೊತೆಗೂ ನಂಟು ಉಳಿಸಿಕೊಂಡಿದ್ದಾರೆ. ಇದೇ ವೇಳೆ ಶಾರುಖ್ ತಮ್ಮ ನಿರ್ಮಾಣ ಸಂಸ್ಥೆಯಿಂದಲೇ ಮಗನನ್ನು ಲಾಂಚ್ ಮಾಡುತ್ತಾರೆ ಅನ್ನೋ ಸುದ್ದಿನೂ ಇದೆ. ಆದರೆ, ಈಗಲೇ ಫ್ಯಾಷನ್ ಬ್ರ್ಯಾಂಡ್ ಹುಟ್ಟಾಕಿರುವ ಆರ್ಯನ್ ಚಬಾಲಿವುಡ್‌ಗೆ ಎಂಟ್ರಿ ಕೊಡುತ್ತಾರಾ? ಅನ್ನೋದೇ ಅನುಮಾನವಂತೂ ಇದೆ.

More from Filmibeat

English summary
Bollywood Star Shah Rukh Khan Son Aryan new Business streetwear brand D'Yavol launched,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X