ಕ್ಯಾನ್ಸರ್ ಪೀಡಿತ ನಟ ಇರ್ಫಾನ್ ಖಾನ್ ಸಿನಿಮಾಗೆ ಕತ್ರಿನಾ, ಅನುಷ್ಕಾ ಮಾಡಿದ್ದೇನು?
ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕ್ಯಾನ್ಸರ್ ಜೊತೆ ಹೋರಾಡುತ್ತಿರುವ, ಬಾಲಿವುಡ್ ಚಿತ್ರೋದ್ಯಮದ ಪ್ರಬುದ್ದ ನಟ ಇರ್ಫಾನ್ ಖಾನ್ ಅವರ ಹೊಸ ಸಿನಿಮಾವೊಂದರ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು.
'ಕುದಿನು ನಾಚ್ ನೇ ದೇ' ಎನ್ನುವ ಹಾಡಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಂಗ್ರೇಜಿ ಮೀಡಿಯಂ ಎನ್ನುವ ಸಿನಿಮಾದ ಹಾಡು ಇದಾಗಿದ್ದು, ಈ ಚಿತ್ರ ಇದೇ ಮಾರ್ಚ್ ಹದಿಮೂರಕ್ಕೆ ಬಿಡುಗಡೆಯಾಗಲಿದೆ.
ಹೋಮಿ ಅದಜನಿಯಾ ನಿರ್ದೇಶನದ ಅಂಗ್ರೇಜಿ ಮೀಡಿಯಂ ಸಿನಿಮಾವನ್ನು ದಿನೇಶ್ ವಿಜನ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸುತ್ತಿದ್ದಾರೆ. ತಾರಾಗಣದಲ್ಲಿ ಇರ್ಫಾನ್ ಖಾನ್, ಕರೀನಾ ಕಪೂರ್, ರಾಧಿಕಾ ಮದನ್, ದೀಪಕ್ ದೊಬ್ರಿಯಾಲ್, ಡಿಂಪಲ್ ಕಪಾಡಿಯಾ ಮುಂತಾದವರಿದ್ದಾರೆ.
ಈ ಸಿನಿಮಾದ ಪ್ರಮೋಶನ್ ಗೆ ಬಾಲಿವುಡ್ ಮಂದಿ ತಮ್ಮದೇ ಆದ ಹೊಸ ರೀತಿಯಲ್ಲಿ ಸಾಥ್ ನೀಡುತ್ತಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ. ಈ ರೀತಿ ಪ್ರಮೋಶನ್ ಮಾಡೋಕೆ ಕಾರಣ ಇಲ್ಲದಿಲ್ಲ...

ಪತ್ನಿ ಸುತಪಾ ಸಿಕ್ದರ್ ಗಾಗಿ ನಾನು ಬದುಕಬೇಕು, ಇರ್ಫಾನ್
ಲಂಡನ್ ನಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಇರ್ಫಾನ್ ಖಾನ್, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಅವರು, "ನನ್ನ ಪತ್ನಿ ಸುತಪಾ ಸಿಕ್ದರ್ ಗಾಗಿ ನಾನು ಬದುಕಬೇಕು" ಎಂದು ಹೇಳಿದ್ದರು. ಅಂಗ್ರೇಜಿ ಮೀಡಿಯಂ ಸಿನಿಮಾದಲ್ಲಿ ಇರ್ಫಾನ್ ಪ್ರಮುಖ ಪಾತ್ರದಲ್ಲಿದ್ದಾರೆ. ಆದರೆ, ಚಿತ್ರದ ಪ್ರಮೋಶನ್ ಗೆ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ.

ಇರ್ಫಾನ್ ಗಾಗಿ ತಮ್ಮದೇ ಶೈಲಿಯಲ್ಲಿ ಪ್ರಮೋಶನ್
ಹಾಗಾಗಿ, ಪ್ರಮುಖ ನಟ/ನಟಿಯರು ಇರ್ಫಾನ್ ಗಾಗಿ ತಮ್ಮದೇ ಶೈಲಿಯಲ್ಲಿ ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿನ ತಮ್ಮತಮ್ಮ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 'ಲವ್ ಫಾರ್ ಅಂಗ್ರೇಜಿ' ಎನ್ನುವ ಹ್ಯಾಷ್ ಟ್ಯಾಗ್ ಮೂಲಕ, ಚಿತ್ರದ ಪ್ರಮೋಶನ್ ಗೆ ಸಾಥ್ ನೀಡುತ್ತಿದ್ದಾರೆ.

ಪ್ರತ್ಯೇಕ ವಿಡಿಯೋಗಳನ್ನು ಮಾಡಿ ತಮ್ಮ ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದ್ದಾರೆ
ಚಿತ್ರದ ತಾರಾಗಣದಲ್ಲಿರುವ ಕರೀನಾ ಕಪೂರ್, ರಾಧಿಕಾ ಮದನ್ ಹೊರತಾಗಿ, ಕತ್ರಿನಾ ಕೈಫ್, ಅನುಷ್ಕಾ ಶರ್ಮಾ, ಆಲಿಯಾ ಭಟ್, ಜಾಹ್ನವಿ ಕಪೂರ್ ಮುಂತಾದವರು ಪ್ರತ್ಯೇಕ ವಿಡಿಯೋಗಳನ್ನು ಮಾಡಿ ತಮ್ಮ ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದ್ದಾರೆ. ಆ ಮೂಲಕ, ಚಿತ್ರದ ಪ್ರಮೋಶನ್ ಗೆ ಸಹಾಯ ಮಾಡುತ್ತಿದ್ದಾರೆ. ಇದು ಇರ್ಫಾನ್ ಖಾನ್ ಗಾಗಿ ನಾವು ಮಾಡುತ್ತಿರುವ ಕೆಲಸ ಎಂದು ಹೇಳಿಕೊಂಡಿದ್ದಾರೆ.

ಸಿಹಿ ಅನುಭವವನ್ನು ಮಾತ್ರ ನೆನಪಿನಲ್ಲಿ ಇಟ್ಟುಕೊಳ್ಳಬೇಕು
"ಜೀವನ ಎಂದರೆ ಅದರಲ್ಲಿ ಸಿಹಿಕಹಿ ನೆನಪುಗಳು ಇರುತ್ತವೆ. ಅದರಲ್ಲಿ ಸಿಹಿ ಅನುಭವವನ್ನು ಮಾತ್ರ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಾನು ಎದುರಿಸುತ್ತಿರುವ ಅನಾರೋಗ್ಯದ ನೋವಿನ ನಡುವೆಯೂ ಖುಷಿಯ ಸಮಯವನ್ನು ಹೆಚ್ಚಾಗಿ ಕಳೆದಿದ್ದೇನೆ. ನನ್ನ ಕುಟುಂಬದ ಜೊತೆಗೆ ಅಮೂಲ್ಯವಾದ ಸಮಯವನ್ನು ಕಳೆದಿದ್ದೇನೆ" ಎಂದು ಇತ್ತೀಚೆಗೆ ಇರ್ಫಾನ್ ಖಾನ್, ಭಾವನಾತ್ಮಕವಾಗಿ ನುಡಿದಿದ್ದರು.


Click it and Unblock the Notifications











