ಕಾಲರ್ ಪಟ್ಟಿ ಹಿಡ್ಕೊಂಡು ಕಿತ್ತಾಡಿದ್ರಾ ಸೈಫ್ ಅಲಿ ಖಾನ್-ರಣಬೀರ್ ಕಪೂರ್? ವಿಡಿಯೋ ನೋಡಿ ಫ್ಯಾನ್ಸ್‌ಗೆ ಶಾಕ್

ಬಾಲಿವುಡ್‌ ಇಬ್ಬರ ಸ್ಟಾರ್ ನಟರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅದು ಸಾರ್ವಜನಿಕವಾಗಿ ಸೈಫ್ ಅಲಿ ಖಾನ್ ಹಾಗೂ ರಣ್‌ಬೀರ್ ಕಪೂರ್ ಕಿತ್ತಾಡಿಕೊಂಡ ವಿಡಿಯೋ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಚಿತ್ರ ಅಂದರೆ, ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದೇ ತೀರಾ ವಿರಳ.

ರಣ್‌ಬೀರ್ ಕಪೂರ್‌ಗೆ ಸೈಫ್ ಅಲಿ ಖಾನ್ ಸೋದರ ಮಾವ ಆಗಬೇಕು. ಅಂದರೆ, ಅಕ್ಕ ಕರೀನಾ ಕಪೂರ್ ಅನ್ನು ಸೈಫ್ ಅಲಿ ಖಾನ್ ಮದುವೆ ಆಗಿದ್ದು, ಕಪೂರ್ ಕುಟುಂಬ ಹಾಗೂ ಪಟೌಡಿ ಕುಟುಂಬ ಸಂಬಂಧಿಗಳಾಗಿದ್ದಾರೆ. ಆದರೂ ರಣ್‌ಬೀರ್ ಕಪೂರ್ ಹಾಗೂ ಸೈಫ್ ಅಲಿ ಖಾನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತೀರಾ ವಿರಳ. ಹೀಗಿರುವಾಗ ಇಬ್ಬರೂ ಹೇಗೆ ಪಬ್ಲಿಕ್ ಮುಂದೆ ಕಿತ್ತಾಡಿಕೊಂಡರೇ? ಇಂತಹದ್ದೊಂದು ಪ್ರಶ್ನೆ ಅಂತೂ ಮೂಡುತ್ತೆ.

Bollywood stars Ranbir Kapoor and Saif Ali Khan fighting video goes viral here is Fact check

ಇತ್ತೀಚೆಗೆ ರಾಜ್‌ ಕಪೂರ್ 100ನೇ ವಾರ್ಷಿಕೋತ್ಸವ ನಡೆದಿತ್ತು. ಈ ವಿಶೇಷ ಸಮಾರಂಭಕ್ಕೆ ಇಡೀ ಬಾಲಿವುಡ್‌ಗೆ ಆಹ್ವಾನ ನೀಡಲಾಗಿತ್ತು. ಬಹಳ ದಿನಗಳ ಬಳಿಕ ಬಾಲಿವುಡ್‌ ಇಬ್ಬರು ಸ್ಟಾರ್‌ಗಳಾದ ರಣ್‌ಬೀರ್ ಕಪೂರ್ ಹಾಗೂ ಸೈಫ್ ಅಲಿಖಾನ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಆ ವೇಳೆ ಇವರಿಬ್ಬರ ಮಧ್ಯೆ ಏನೋ ಸಮಸ್ಯೆ ಇದೆ ಎನ್ನುವಂತಹ ವಿಡಿಯೋ ವೈರಲ್ ಆಗಿತ್ತು. ಅದೇ ಈಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಆ ವಿಡಿಯೋ ಬಗ್ಗೆ ಚರ್ಚೆ ಶುರುವಾಗಿತ್ತು. ಇಬ್ಬರ ಅಭಿಮಾನಿಗಳಿಗೂ ಸೈಫ್ ಅಲಿ ಖಾನ್ ಹಾಗೂ ರಣ್‌ಬೀರ್ ಕಪೂರ್ ನಡುವೆ ಮನಸ್ತಾಪವಿದೆ ಎಂದು ಮಾತಾಡಿಕೊಂಡರು. ಆ ವಿಡಿಯೋದಲ್ಲಿ ಪರಸ್ಪರ ವಾದ ಮಾಡಿಕೊಳ್ಳುತ್ತಿದ್ದವರು ಏಕಾಏಕಿ ಸಾರ್ವಜನಿಕವಾಗಿ ಇವರಿಬ್ಬರೂ ನಟರು ಪರಸ್ಪರ ಕಾಲರ್ ಹಿಡಿದು ಕೊಂಡು ಕಿತ್ತಾಡಿದ್ದಾರೆ. ಈ ವಿಡಿಯೋ ನೋಡಿ ಫ್ಯಾನ್ಸ್‌ ಶಾಕ್ ಆಗಿದ್ದರು.

ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದರು. ನಿಜಕ್ಕೂ ಪಬ್ಲಿಕ್‌ನಲ್ಲಿ ಹೀಗೆ ಕಿತ್ತಾಡಿಕೊಂಡರೇ..? ಅನ್ನೋ ಪ್ರಶ್ನೆ ಅವರನ್ನು ಕಾಡುವುದಕ್ಕೆ ಶುರುವಾಗಿತ್ತು. ಇಬ್ಬರ ನಡುವೆ ಜಗಳ ಹೇಗಾಯ್ತು? ಕುಟುಂಬದ ಮರ್ಯಾದೆಯನ್ನು ಮರೆತು ಅದ್ಹೇಗೆ ಹೀಗೆ ಕಿತ್ತಾಡಿದರು? ಅಂತ ಗೊಂದಲಕ್ಕೆ ಬಿದ್ದಿದ್ವರೂ ಇದ್ದಾರೆ. ಆದರೆ, ಇದು ಅಸಲಿ ವಿಡಿಯೋ ಅಲ್ಲ. ಕಿಡಿಗೇಡಿಗಳು AI ತಂತ್ರಜ್ಞಾನವನ್ನು ಬಳಸಿ ಹೀಗೊಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಸಿನಿಮಾ ತಾರೆಯರಿಗಂತೂ AI ತಂತ್ರಜ್ಞಾನ ತಲೆಬಿಸಿಯಾಗಿ ಪರಿಣಮಿಸಿದೆ. ಅವರಿಗೆ ಅನುಕೂಲ ಆಗುವುದಕ್ಕಿಂತ ಅನಾನುಕೂಲ ಆಗುವುದೇ ಹೆಚ್ಚಾಗಿದೆ. ಇತ್ತ ಅಭಿಮಾನಿಗಳಿಗೂ ಕೂಡ ಅಸಲಿ ವಿಡಿಯೋ ಯಾವುದು? ನಕಲಿ ವಿಡಿಯೋ ಯಾವುದು ಅನ್ನೋದು ಗೊತ್ತಾಗದೆ ಪರದಾಡುತ್ತಿದ್ದಾರೆ. ಕೆಲವೊಮ್ಮೆ ನಕಲಿ ವಿಡಿಯೋವನ್ನೇ ನೋಡಿ ನಿಜವೆಂದು ಕಾಮೆಂಟ್ ಮಾಡುತ್ತಿದ್ದಾರೆ. ಈಗ ರಣ್‌ಬೀರ್ ಕಪೂರ ಹಾಗೂ ಸೈಫ್ ಅಲಿ ಖಾನ್ ವಿಡಿಯೋವನ್ನೂ ರಾಕಿ ಭಾಯ್ ಪವರ್ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಆಗಿದೆ.

ಸೈಫ್ ಅಲಿ ಖಾನ್ ಹಾಗೂ ರಣ್‌ಬೀರ್ ಕಪೂರ್ ಇಬ್ಬರ ವಿಡಿಯೋ ನಕಲಿ. ಇದು AI ಕೊಟ್ಟ ಬಳುವಳಿ. ಹೀಗಾಗಿ ಜನರು ಇಂತಹ ವಿಡಿಯೋಗಳು ಬಂದಾಗ ತಕ್ಷಣಕ್ಕೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಹಾಗಂತ ಇಂತಹ ವಿಡಿಯೋ ಹಾಗೂ ಫೋಟೊಗಳು ಬರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಮಂದಿ ಸೆಲೆಬ್ರೆಟಿಗಳ ವಿಡಿಯೋಗಳನ್ನು ಹಾಗೂ ಫೋಟೊಗಳು ವೈರಲ್ ಹೀಗೆ ವೈರಲ್ ಆಗಿದ್ದವು.

More from Filmibeat

English summary
Bollywood stars Ranbir Kapoor and Saif Ali Khan fighting video goes viral. Here is Fact check
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X