ಆಮಿರ್ ಖಾನ್ ಮಗ ದೇಸಿ 'ಸೂಪರ್‌ಮ್ಯಾನ್' ಅಂತಿರೋದ್ಯಾಕೆ? ಇರಾ ಖಾನ್ ಮದ್ವೆಯಲ್ಲಿ ಅಂತಹದ್ದೇನಾಯ್ತು?
ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಸದ್ಯ ಮಗಳ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್ ಅವರ ಮದುವೆ ಇತ್ತೀಚೆಗೆ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ನೆರವೇರಿದೆ. ಈ ವೇಳೆ ಆಮಿರ್ ಇಬ್ಬರ ಪತ್ನಿಯರು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಈ ಮದುವೆ ಸಮಾರಂಭದಲ್ಲಿ ಆಮಿರ್ ಖಾನ್ ತಮ್ಮ ಕುಟುಂಬದೊಂದಿಗೆ ಕ್ಯಾಮರಾಗೆ ಹೆಚ್ಚು ಪೋಸ್ ಕೊಟ್ಟಿದ್ದರು. ಈ ವೇಳೆ ಆಮಿರ್ ಮೊದಲ ಪತ್ನಿಯ ಪುತ್ರ ಜುನೈದ್ ಖಾನ್ ಕಣ್ಣಿಗೆ ಬಿದ್ದಿದ್ದರು. ಜುನೈದ್ ಖಾನ್ ಸಾಮಾನ್ಯವಾಗಿ ಕ್ಯಾಮರಾ ಕಣ್ಣಿಗೆ ಸಿಗುವುದು ತೀರಾ ವಿರಳ. ಆದರೆ, ಸಹೋದರಿ ಮದುವೆ ವೇಳೆ ತಂದೆಯೊಂದಿಗೆ ಕಾಣಿಸಿಕೊಂಡಿದ್ದರು.

ಆಮಿರ್ ಖಾನ್ ಪುತ್ರ ಇನ್ನೇನು ಬಾಲಿವುಡ್‌ಗೂ ಎಂಟ್ರಿ ಕೊಡುತ್ತಿದ್ದಾರೆ. ಅದಕ್ಕೆ ಬೇಕಾಗಿರೋ ಪೂರ್ವ ತಯಾರಿಯನ್ನು ಈಗಾಗಲೇ ಮಾಡಿಕೊಳ್ಳುತ್ತಿದ್ದಾರೆ. ಅಷ್ಟರಲ್ಲೇ ಜುನೈದ್ ಖಾನ್‌ಗೆ ಸರ್ಪ್ರೈಸ್ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಸಹೋದರಿ ಮದುವೆ ವೇಳೆ ತೆಗೆದ ಫೋಟೊಗಳೂ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸೂಪರ್‌ಮ್ಯಾನ್ ಪಟ್ಟ ಕೊಟ್ಟುಬಿಟ್ಟಿದ್ದಾರೆ. ಅಷ್ಟಕ್ಕೂ ಸಿನಿಮಾನೇ ಮಾಡದೇ ಸೂಪರ್‌ಮ್ಯಾನ್ ಆಗಿದ್ದೇಗೆ? ಅನ್ನೋದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
'ದೇಸಿ ಸೂಪರ್‌ಮ್ಯಾನ್' ಎಂದ ನೆಟ್ಟಿಗರು
ಸಹೋದರಿ ಇರಾ ಖಾನ್ ಮದುವೆ ಸಮಾರಂಭದಲ್ಲಿ ಜುನೈದ್ ಖಾನ್ ತಂದೆಯೊಂದಿಗೆ ಪಾಪರಾಜಿಗಳಿಗೆ ಪೋಸ್ ಕೊಟ್ಟಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ತಕ್ಷಣವೇ ನೆಟ್ಟಿಗರಿಗೆ ಜುನೈದ್ ಖಾನ್ ಯಾವುದೋ ನಟನನ್ನು ಹೋಲುತ್ತಾರಲ್ಲ ಎಂದೆನಿಸಿದೆ. ಅದು ಮತ್ಯಾರೂ ಅಲ್ಲ ಹಾಲಿವುಡ್‌ನ ಫೇಮಸ್ ಕ್ಯಾರೆಕ್ಟರ್ ಸೂಪರ್‌ಮ್ಯಾನ್ ಖ್ಯಾತಿಯ ಹೆನ್ರಿ ಕ್ಯಾವಿಲ್. ಬಳಿಕ ಇಬ್ಬರ ಫೋಟೊ ಇಟ್ಟು ವೈರಲ್ ಮಾಡಿದ್ದಾರೆ.
ಜುನೈದ್ ಖಾನ್ ಇನ್ನೇನು ಸಿನಿಮಾರಂಗಕ್ಕೆ ಎಂಟ್ರಿ ಕೊಡಬೇಕು ಅನ್ನುವಾಗಲೇ ಒಂದೊಳ್ಳೆ ಹೈಪ್ ಸಿಕ್ಕಿದೆ. ಸಹೋದರಿ ಮದುವೆ ವೇಳೆನೆ ಜುನೈದ್ ಖಾನ್ ಸಿಕ್ಕಾಪಟ್ಟೆ ಶೈನ್ ಆಗಿದ್ದಾರೆ. ಸದ್ಯ ಹಾಲಿವುಡ್‌ನ ಸೂಪರ್‌ಮ್ಯಾನ್ ಅನ್ನೇ ಹೋಲುತ್ತಾರೆಂದು ನೆಟ್ಟಿಗರು ಹೇಳುತ್ತಿದ್ದಾರೆ. ಮತ್ತೆ ಕೆಲವರಂತೂ 'ದೇಸಿ ಸೂಪರ್‌ಮ್ಯಾನ್' ಅಂತಲೇ ಬಣ್ಣಿಸುತ್ತಿದ್ದಾರೆ.

ಬಾಲಿವುಡ್‌ಗೆ ಜುನೈದ್ ಎಂಟ್ರಿ
ಆಮಿರ್ ಖಾನ್ ಮೊದಲನೇ ಪತ್ನಿ ರೀನಾ ದತ್ತಾರಿಂದ ಬೇರ್ಪಟ್ಟಿದ್ದರೂ, ಮಕ್ಕಳ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಮಗ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವ ಬೆನ್ನಲ್ಲೇ ಅವನ ಪ್ರತಿಯೊಂದಿಗೆ ಹೆಜ್ಜೆಯನ್ನು ಆಮಿರ್ ಖಾನ್ ಗಮನಿಸುತ್ತಿದ್ದಾರೆ.
ಜುನೈದ್ ಖಾನ್ 'ಮಹಾರಾಜ' ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸಿದ್ದಾರ್ಥ್ ಪಿ ಮಲ್ಹೋತ್ರಾ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಯಶ್ ರಾಜ್ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಇದು 1862ರಲ್ಲಿ ಕಾಲಘಟ್ಟದಲ್ಲಿ ನಡೆಯೋ ಕಥೆಯೆಂದು ಹೇಳಲಾಗುತ್ತಿದ್ದು, ಜುನೈದ್ ಖಾನ್ ಈ ಸಿನಿಮಾದಲ್ಲಿ ವಕೀಲರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ, ಇರಾ ಖಾನ್ ಮತ್ತು ಜುನೈದ್ ಖಾನ್ ಇಬ್ಬರೂ ಆಮಿರ್ ಖಾನ್ ಮೊದಲ ಪತ್ನಿ ರೀನಾ ದತ್ತಾ ಅವರ ಮಕ್ಕಳು.


Click it and Unblock the Notifications











