Hrithik Roshan: ಮೆಟ್ರೋದಲ್ಲಿ ಹೃತಿಕ್ ರೋಷನ್ ಸವಾರಿ.. ಅಯ್ಯೋ ಇವತ್ತೇ ಮೆಟ್ರೋ ಮಿಸ್ ಮಾಡಿಕೊಂಡೆ ಎಂದ ನೆಟ್ಟಿಗರು!
ಬಾಲಿವುಡ್ ಸೂಪರ್‌ಸ್ಟಾರ್ ಹೃತಿಕ್ ರೋಷನ್‌ಗೆ ಏನು ಕಮ್ಮಿ ಹೇಳಿ. ಮೈಕೈಗೆಲ್ಲ ಒಬ್ಬೊಬ್ಬರು ಆಳು, ದುಬಾರಿ ಕಾರು, ದುನಿಯಾನೇ ಅವರ ಕೈಯಲ್ಲಿದೆ ಅನ್ನೋ ಫೀಲ್ ಬೇರೆ. ಇಂತಹ ನಟ ಸಾಮಾನ್ಯ ಜನರಿಗಾಗಿಯೇ ಸಿನಿಮಾ ಮಾಡಿದರೂ, ಸಾಮಾನ್ಯ ಜನರನ್ನು ಅಷ್ಟು ಸುಲಭವಾಗಿ ಭೇಟಿ ಮಾಡುವುದಿಲ್ಲ.
ಸಾಮಾನ್ಯ ಜನರಿಗೂ ಅಷ್ಟೇ.. ಸಿನಿಮಾದಲ್ಲಿ ಹೃತಿಕ್ ರೋಷನ್ ಅನ್ನು ಕಣ್ತುಂಬಿ ಕೊಳ್ಳುವುದಷ್ಟೇ ಬಂತು. ಆದರೆ, ನೇರವಾಗಿ ಹೃತಿಕ್ ರೋಷನ್ ಎಲ್ಲರಿಗೂ ಸಿಗೋದಿಲ್ಲ. ಇಂತಹದರಲ್ಲಿ ನಿಮ್ಮ ಪಕ್ಕದಲ್ಲಿಯೇ ಹೃತಿಕ್ ರೋಷನ್ ಬಂದು ಕೂತರೇ ಏನಾಗಬೇಡ.

ಹೌದು.. ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ಇದ್ದಕ್ಕಿದ್ದಂತೆ ದುಬಾರಿ ಕಾರನ್ನು ಪಕ್ಕಕ್ಕಿಟ್ಟು ಮುಂಬೈ ಮೆಟ್ರೋ ಏರಿದ್ದಾರೆ. ಸಾಮಾನ್ಯ ಜನರಂತೆ ಮೆಟ್ರೋದಲ್ಲಿ ಸವಾರಿ ಮಾಡಿ ಪ್ರಯಾಣಿಕರಿಗೆ ಅಚ್ಚರಿ ಮೂಡಿಸಿದ್ದಾರೆ. ಹೃತಿಕ್ ರೋಷನ್ ಮೆಟ್ರೋದಲ್ಲಿ ಪ್ರಯಾಣ ಮಾಡಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಹೃತಿಕ್ ರೋಷನ್ ಮುಖಕ್ಕೆ ಮಾಸ್ಕ್ ಹಾಕೊಂಡು ಗೊತ್ತಿಲ್ಲದವರಂತೆ ಏನೂ ಪ್ರಯಾಣ ಮಾಡಿಲ್ಲ. ಪಕ್ಕದಲ್ಲಿ ಕೂತಿದ್ದ ಪ್ರಯಾಣಿಕರೊಂದಿಗೆ ಕೆಲ ಮಾತುಕತೆ ನಡೆಸಿದ್ದಾರೆ. ಜೊತೆ ತಮ್ಮ ಅಭಿಮಾನಿಗಳೊಂದಿಗೆ ಫೋಟೊ ಕೂಡ ತೆಗಿಸಿಕೊಂಡಿದ್ದಾರೆ. ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಂಡಿದ್ದಾರೆ.

" ಇವತ್ತು ಕೆಲಸದ ನಿಮಿತ್ತ ಮೆಟ್ರೋದಲ್ಲಿ ಪ್ರಯಾಣ ಮಾಡಿದೆ. ಅಲ್ಲಿ ತುಂಬಾ ಸ್ವೀಟ್ ಆಗಿರೋ ಜನರನ್ನು ಭೇಟಿ ಮಾಡಿದೆ. ಅವರು ಕೊಟ್ಟ ಪ್ರೀತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಎಂಥಾ ಅದ್ಭುತವಾದ ಅನುಭವ. ಶಕೆ ಹಾಗೂ ಮುಂಬೈ ಟ್ರಾಫಿಕ್ ತಪ್ಪಿಸಿಕೊಂಡೆ. ಆಕ್ಷನ್ ಸೀನ್ ಶೂಟಿಂಗ್‌ಗೆ ಹೋಗುತ್ತಿದ್ದರಿಂದ ಬೆನ್ನು ನೋವಿನಿಂದ ಪಾರಾಗಿದ್ದೇನೆ" ಎಂದು ಹೃತಿಕ್ ರೋಷನ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳನ್ನು ನೆಟ್ಟಿಗರು ಅಚ್ಚರಿಯಿಂದ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಹೃತಿಕ್ ರೋಷನ್ ಮೆಟ್ರೋದಲ್ಲಿ ಪ್ರಯಾಣದ ಫೋಟೊಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ ಕಮೆಂಟ್ ಮಾಡುತ್ತಿದ್ದಾರೆ. " ಅದೇ ಮೆಟ್ರೋವನ್ನು ನಾನು ಇಂದು ಮಿಸ್ ಮಾಡಿಕೊಂಡಿದ್ದೇನೆ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. "ಆ ಅದೃಷ್ಟವಂತರಿಗೆ ಹೃತಿಕ್ ರೋಷನ್ ಮರೆಯಲಾಗದ ನೆನಪುಗಳನ್ನು ನೀಡಿದ್ದಾರೆ. " ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
" ಇಂತಹ ಪ್ರಭಾವಿ ವ್ಯಕ್ತಿಗಳು ಇಂತಹ ಸಾರ್ವಜನಿಕ ಸಾರಿಗೆಯನ್ನು ಬಳಸಿ ಮಾದರಿಯಾಗಿದ್ದಾರೆ. ನಿಮ್ಮ ಮೇಲೆ ಗೌರವ ಹೆಚ್ಚಾಗಿದೆ" ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. "ಎಲ್ಲರೂ ಅದು ಹೇಗೆ ಅಷ್ಟೊಂದು ತಾಳ್ಮೆಯಿಂದ ಇದ್ದಾರೆ." ಇನ್ನೊಬ್ಬರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











