ಕಂಗನಾಗೆ ಕಪಾಳಮೋಕ್ಷ; ಕುಲ್ವಿಂದರ್ ಕೌರ್ ಕೆಲಸ ಕೊಡ್ತಿನಿ ಎಂದ ಸಂಗೀತ ನಿರ್ದೇಶಕ
ಕಂಗನಾ ರನೌತ್ ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಿಂದ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದರು. ಈ ವೇಳೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಎಂಬುವವರು ನಟಿಗೆ ಕಪಾಳಮೋಕ್ಷ ಮಾಡಿದ್ದರು. ಈ ಘಟನೆ ಸುದ್ದಿಯಾಗುತ್ತಿದ್ದಂತೆ ಕುಲ್ವಿಂದರ್ ಕೌರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಕುಲ್ವಿಂದರ್ ಕೌರ್ ವಿರುದ್ಧ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ. ಈ ಬಗ್ಗೆ ನಟಿ ಕಂಗನಾ ಬಾಲಿವುಡ್ ಯಾಕೆ ಈ ಘಟನೆ ಬಗ್ಗೆ ಮಾತಾಡುತ್ತಿಲ್ಲ. ಮೌನ ವಹಿಸಿದ್ದೇಕೆ ಎಂದು ಪ್ರಶ್ನಿಸಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಬಳಿಕ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಕಪಾಳ ಮೋಕ್ಷ ಮಾಡಿದ ಮಹಿಳೆಗೆ ಕೆಲಸ ಕೊಡುತ್ತೇನೆ ಎಂದು ಹೇಳಿದ್ದಾರೆ.

ಕಂಗನಾ ರನೌತ್ ಚಂಡೀಗಢದಿಂದ ದೆಹಲಿ ಪ್ರಯಾಣ ಮಾಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಸೆಕ್ಯೂರಿಟಿ ಚೆಕಿಂಗ್ ಮುಗಿಸಿ ಮುಂದಕ್ಕೆ ಹೋಗುತ್ತಿದ್ದಂತೆ ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್, ಕಂಗನಾ ಕೆನ್ನೆಗೆ ಬಾರಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಕಂಗನಾಗೆ ಕಪಾಳ ಮೋಕ್ಷ ಮಾಡಿದ ಬಳಿಕ ಕುಲ್ವಿಂದರ್ ಕೌರ್ ಯಾಕೆ ಹೊಡೆದರು ಅನ್ನೋದನ್ನು ರಿವೀಲ್ ಮಾಡಿದ್ದರು. ಕಂಗನಾ ರನೌತ್ ಈ ಹಿಂದೆ ರೈತರ ಚಳುವಳಿಯ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಆ ಪ್ರತಿಭಟನೆಯಲ್ಲಿ ಆಕೆಯ ತಾಯಿ ಕೂಡ ಭಾಗಿಯಾಗಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಮಹಿಳೆ ಕಂಗನಾ ಕೆನ್ನೆಗೆ ಬಾರಿಸಿದ್ದಾಗಿ ವಿಚಾರಣೆ ವೇಳೆ ಹೇಳಿದ್ದರು.
ಬಳಿಕ ಕಂಗನಾ ವಿಡಿಯೋ ಮೂಲಕ ಸೇಫ್ ಆಗಿದ್ದೇ ಎಂದು ಹೇಳಿದ್ದರು. ಆನಂತ ಪೋಸ್ಟ್ ಮಾಡಿ ಬಾಲಿವುಡ್ ಮಂದಿಗೆ ಈ ಘಟನೆ ಬಗ್ಗೆ ಯಾಕೆ ಮಾತಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕಂಗನಾ ವಿರುದ್ಧ ಪರೋಕ್ಷವಾಗಿ ಬಾಲಿವುಡ್‌ನ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.

ಬಾಲಿವುಡ್ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಂಗನಾಗೆ ಕಪಾಳ ಮೋಕ್ಷ ಮಾಡಿದ ವಿಡಿಯೋ ಹಂಚಿಕೊಂಡು. "ನಾನು ಇಂತಹದ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಆದರೆ ಆ ಮಹಿಳೆಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲೆ. ಮಹಿಳೆ ವಿರುದ್ಧ ಸಿಐಎಸ್ ಎಫ್ ಕ್ರಮ ಕೈಗೊಂಡಿದ್ದೇ ಆದರೆ, ನಾನು ಆಕೆಗೆ ಕೆಲಸ ಕೊಡಿಸುತ್ತೇನೆ." ಎಂದು ಬರೆದುಕೊಂಡಿದ್ದಾರೆ.
ಕಂಗನಾ ರನೌತ್ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ನೂತನ ಸಂಸದೆಯಾಗಿ ಆಯ್ಕೆಯಾದ ಬೆನ್ನಲ್ಲೇ ಊ ಘಟನೆ ನಡೆದಿದೆ. ಕಂಗನಾ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದು, ಕಾಂಗ್ರೆಸ್‌ನ ವಿಕ್ರಮಾಧಿತ್ಯ ಸಿಂಗ್ ಅವರನ್ನು 74 ಸಾವಿರ ಮತಗಳ ಅಂತರದಿಂದ ಸೋಲಿಸಿ ಗೆದ್ದಿದ್ದರು.


Click it and Unblock the Notifications











